ಮಣ್ಣಿನಿಂದ ಬಂದ ಅಕ್ಕಿ ಅನ್ನವಾಗಿ ಮಣ್ಣು ಸೇರದಿರಲಿ...

 ಮಣ್ಣಿನಿಂದ ಬಂದ ಅಕ್ಕಿ

         ಅನ್ನವಾಗಿ ಮಣ್ಣು ಸೇರದಿರಲಿ...




ನಾವು ನೀವು ಹೆಜ್ಜೆ

ಇಡೋಣ ಬನ್ನಿ

ಪ್ರಗತಿಪತದತ್ತ

ಅತ್ತ ಇತ್ತ ನೋಡದೆ ಗುರಿಯತ್ತ ಇರಲಿ ಗಮನ

ಇರುವ ಹಣ

ಚೆಲ್ಲದಿರಿ ಅತ್ತ ಇತ್ತ

ಮನಸಿಗೆ ಬಂದಂತೆ ಬೀದಿಯಲ್ಲಿ

ಹಸಿವಿನಿಂದ ಇರುವರು ಅನೇಕರು

ಸಾಧ್ಯವಾದಷ್ಟು ಅವರಿಗೆ

ಅನ್ನ ದೊರಕಿಸೋಣ

ಬಣ್ಣ ಬಣ್ಣದ ಮಾತು ಬಿಟ್ಟು ಬನ್ನಿ

ರೈತರು ದುಡಿದ ಅನ್ನ

ಹಸಿದವರ ಹೊಟ್ಟೆ ಸೇರಲು

ಕೈಜೋಡಿಸಿ ನಿಲ್ಲೋಣ

ಮಣ್ಣಿನಿಂದ ಬಂದ ಅಕ್ಕಿ

ಅನ್ನವಾಗಿ ಹೊಟ್ಟೆ ಸೇರಲಿ

ಮತ್ತೆ ಮಣ್ಣನ್ನು ಸೇರದ ಹಾಗೆ ಕೈಜೋಡಿಸೋಣ...

ಎಲ್ಲರಿಗೂ ತಿಳಿದಿರುವ ಈ ಹಸಿವನ್ನು ನೀಗಿಸೋಣ...



    ಸರಿತ.ಹೆಚ್ ಕಾಡುಮಲ್ಲಿಗೆ...✍️...

Image Description

Post a Comment

0 Comments