ಶೀರ್ಷಿಕೆ: *ಹೃದಯ*

 🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ: *ಹೃದಯ*



ಪ್ರೀತಿ ಪ್ರೇಮಕೆ ಮಿಡಿಯುವುದು 

ಬುದ್ಧಿ ಇದ್ದರೂ ಪ್ರೀತಿಗೆ ಸೋಲುವುದು 

ನಂಬಿಕೆ ವಿಶ್ವಾಸವನ್ನು ಇಡುವುದು 

ಪಂಚ ಪ್ರಾಣ ಇದರಲ್ಲಿರುವುದು 


ಹೃದಯ ಬಡಿತದಿಂದ ತಿಳಿವುದು 

ವ್ಯಕ್ತಿಯ ಪ್ರಾಣ ಇದೆಯೆಂದು ಅರಿವುದು 

ಇದರ ಚಲನೆಯೇ ಮುಖ್ಯ ಕಾರಣವದು 

ಲಬ್ ಡಬ್ ಎಂದು ಹೊಡೆದು ಕೊಳ್ಳುವುದು 


ಜೀವಿ ಹುಟ್ಟಿದಂದಿನಿಂದ ಕಾರ್ಯ ಪ್ರಾರಂಭಿಸುವುದು 

ಸತ್ತ ಮೇಲೆಯೇ ಅದು ಸ್ಥಬ್ದ ವಾಗುವುದು 

ಮಧ್ಯೆ ಏನೇ ಆದರೂ ಅದರ ಪಾಡಿಗೆ ಮಿಡಿಯುವುದು 

ವ್ಯಕ್ತಿಯ ಉಳಿವಿನ ಚಿನ್ಹೆಯೇ ಇದಾಗಿರುವುದು 


ಕರುಳ ಸಂಬಂಧ ಬೆಸೆಯುವುದು 

ಹೃದಯದ ಮಾತು ಎಂದೂ ಕಪಟವಿರದು 

ಮೆದುಳು ಲೆಕ್ಕಾಚಾರ ಹಾಕಿದರೂ ಕೇಳದು 

ಪ್ರೀತಿಗೆ ಸೋತು ಶರಣಾಗುವುದು 


✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments