* ಸಾಹಿತಿ ಡಾ. ವಿ ಎಸ್ ಮಾಳಿ ಅವರಿಗೆ ಮಾತೃ ವಿಯೋಗ*

 *ಸಾಹಿತಿ ಡಾ. ವಿ ಎಸ್ ಮಾಳಿ ಅವರಿಗೆ ಮಾತೃ ವಿಯೋಗ* 



ರಾಯಬಾಗ:ತಾಲ್ಲೂಕಿನ ಹಾರೂಗೇರಿ ಪಟ್ಟಣದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಪ್ರಾಚಾರ್ಯರು, ಪ್ರತಿಷ್ಠಿತ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ  ಕಾರ್ಯದರ್ಶಿಗಳು ಹಾಗೂ ಖ್ಯಾತ ಸಾಹಿತಿಗಳಾದ ಡಾ. ವಿ ಎಸ್ ಮಾಳಿ ಅವರ ಮಾತೋಶ್ರೀ ದಾನಮ್ಮ ಸದಾಶಿವ ಮಾಳಿ ( 86) ಕಳೆದ ಗುರುವಾರ ಸಂಜೆ ಡಾ. ಮಾಳಿ ಅವರ ಸ್ವಗ್ರಾಮ ಅಥಣಿ ತಾಲ್ಲೂಕಿನ ಜಂಬಗಿ ಗ್ರಾಮದ ನಿವಾಸದಲ್ಲಿ ನಿಧನರಾದರು.

ಇಹಲೋಕ ತ್ಯಜಿಸಿದ ಲಿಂಗೈಕ್ಯ ದಾನಮ್ಮ ಸದಾಶಿವ ಮಾಳಿ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಡಾ. ಮಾಳಿ ಅವರ ಅಪಾರ ಅಭಿಮಾನಿ ಬಳಗ ಹಾಗೂ ಅಸಂಖ್ಯಾತ ಶಿಷ್ಯ ಸಂಕುಲವು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ಮಾಳಿ ಅವರ ಕುಟುಂಬಕ್ಕೆ  ದುಃಖ ಭರಿಸುವ ಶಕ್ತಿ  ಕರುಣಿಸಲಿ ಎಂದು ಅನೇಕ ಶಿಷ್ಯರು,ಅಭಿಮಾನಿಗಳು ಭಗವಂತನಲ್ಲಿ  ಪ್ರಾರ್ಥಿಸಿದ್ದಾರೆ.


*ವರದಿ:ಡಾ. ಜಯವೀರ ಎ. ಕೆ.*

       *ಖೇಮಲಾಪುರ*

Image Description

Post a Comment

0 Comments