* ಕಾಗದದ ದೋಣಿಯೊಂದ ಮಾಡಿ, ತೇಲಿ ಬಿಟ್ಟೆ *

 ಕಾಗದದ ದೋಣಿಯೊಂದ ಮಾಡಿ, 

ತೇಲಿ ಬಿಟ್ಟೆ


ಕೈಗೂಡದ, ಒಂದಿಷ್ಟು ಕನಸುಗಳ,  

ಬೆಲೆಯಿಲ್ಲದ ಕೆಲವು ಭಾವನೆಗಳ, 

ಸಾಂತ್ವನ ಸಿಗದ ಸುಮಾರು ನೋವುಗಳ, 

ಅದಕೆ ತುಂಬಿಸಿ,! 

ಕಾಗದದ ದೋಣಿ, ಬಿರುಸು ಪ್ರವಾಹ, 

ಒಳ, ಸುಳಿಯ ಜಲರಾಶಿ, ಇನ್ನೇನು ಕೆಲವೇ ಕ್ಷಣ! ಮುಳುಗಲಿದೆ, ನಾನೇ ತೇಲಿ ಬಿಟ್ಟ ದೋಣಿ, 

ನನ್ನದೇ ಕನಸು ,ನೋವು, ಭಾವಗಳ ಹೊತ್ತು,! ಬೇಸರವಿಲ್ಲ! ಮುಳುಗಲಿ ಬಿಡಿ, ನಾನೇನೂ ಒಂಟಿಯಲ್ಲ! ಖುಷಿಯಾಗಿರುವೆ, ನಿರಾಳ ಮೌನದ ಜೊತೆ! 

ಅನಂತ ಶೂನ್ಯದ ಜೊತೆ!!


ರವಿ ಬಂಗಾರಿ 🙏✍️

Image Description

Post a Comment

0 Comments