ಕನಸಿಗೊಂದು ಸವಾಲು
ನಿದ್ದೆಯೊಡನೆ ಬಂದು ಕೂಗು
ಹಾಕುವುದು
ಮಮ ಮಾಮ ಮಾಮಾ
ಎನ್ನುವುದು
ದಿನವೂ ಒಂದೊಂದು ಕೂಗು
ಹಾಕುವುದು
ಬಾರೋ ಬಾರೋ ಬೇಡ
ಬೆತ್ತಲಾಗುವುದು
ಹಿಡಿದ ಬ್ಯಾಗಿನೊಳಗೆ
ನಿಂಬೆ ತಾಯಿತಗಳು
ಗಂಟಲು ಕಿತ್ತು ಬರುತ್ತಿದೆ
ಕೋಪದ ಮಾತುಗಳು
ಹಾದಿ ಬೀದಿಯಲ್ಲಿ
ಬೆಂದ ಮೊಟ್ಟೆಯೊಂದು
ಹಾಡುತ್ತಿದೆ ಹಕ್ಕಿಯಂತೆ
ತಿನ್ನು ಬಾ, ಬಾ ಎಂದು
ಕಂಡು ಕೇಳಿದವರೆಲ್ಲ
ಇದು ಮಾಟವೆಂದರು
ಮನೆಯ ವಾಸ್ತುವಿನಲ್ಲಿ
ಇದು ದೋಷವೆಂದರು
ಇದು ಏನೇ ಇರಲಿ ಏನೇ ಬರಲಿ
ಮಾಟ ಮಾಟದೊಳಗೆ
ಆಟ ಆಡಿ ಬಿಡುವೆನು
ವಾಸ್ತುವನ್ನು ಹೊದ್ದುಕೊಂಡು
ದಿನವ ಕಳೆವನು
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಬೆಂಗಳೂರು -560056
ಮೊಬೈಲ್ ನಂ,9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments