*ವ್ಹಾಲಿಬಾಲ ಆಟದಲ್ಲಿ ಜಯಭೇರಿ ಬಾರಿಸಿ ಸೌಂದರ್ಯ ಸೌರಭ ಸೂಸಿದ ಚಿಕ್ಕೂಡ ಶಾಲಾ ಸಿರಿಸಂಪಿಗೆಗಳು.*


 *ವ್ಹಾಲಿಬಾಲ ಆಟದಲ್ಲಿ ಜಯಭೇರಿ ಬಾರಿಸಿ ಸೌಂದರ್ಯ ಸೌರಭ ಸೂಸಿದ ಚಿಕ್ಕೂಡ ಶಾಲಾ ಸಿರಿಸಂಪಿಗೆಗಳು.*


ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವ್ಹಾಲಿಬಾಲ ಆಟದಲ್ಲಿ ಚಿಕ್ಕೂಡ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ದೈಹಿಕ ಶಿಕ್ಷಣ ಶಿಕ್ಷಕ ಮಹಾದೇವ ಕಳ್ಳಿಗುದ್ದಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ತಂಡದ ನಾಯಕ ವಿವೇಕ ಬಿ.ಪಾಟೀಲˌ ಉಪನಾಯಕ ಪೃಥ್ವಿರಾಜ ಕೋಳಿಗುಡ್ಡ ˌಪ್ರಜ್ವಲ ಪಾಟೀಲˌ ದಾವಲಸಾಬ ಅರಳಿಕಟ್ಟಿˌ ಸಿದ್ದಯ್ಯ ಮಠಪತಿ ˌಗೌತಮ ಬಿ. ಪಾಟೀಲˌ ಪ್ರೀತಮ್ ಮುಳ್ಳೂರˌ ಇರ್ಫಾನ್ ಮುಕ್ಕೇರಿˌ ಆಕಾಶ ಮಾಳಿ ˌಅಬುತಲಾ ಬಡೆˌ ಅಭಿಲಾಶ ಕಾಂಬಳೆ ˌಪ್ರತೀಕ ವಡಗಾವಿ ಉತ್ತಮವಾಗಿ ಆಡಿ ಎದುರಾಳಿಗಳಿಗೆ ಈ ಆಟದ ಪಾಠ ಕಲಿಸಿ ಜಯಭೇರಿ ಬಾರಿಸಿದರು.

 ಬಾಲಕರ ಖೋಖೋ ಆಟದಲ್ಲಿ ಚಿಕ್ಕೂಡ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡು ಗಮನಾರ್ಹ ಸಾಧನೆ ಮಾಡಿದೆ. ತಂಡದ ನಾಯಕ ಪ್ರಜ್ವಲ ತೇಲಿ ಉಪನಾಯಕ ಕುಂತಿನಾಥ ಹರವಿ ˌಆಕಾಶ ಪಾಟೀಲˌ ಸುದರ್ಶನ ಹರವಿˌ ಮಲ್ಲಪ್ಪ ಪಾಟೀಲˌ ವಿನಯ ಕಾಂಬಳೆˌ ರಕ್ಷಪ್ಪ ಕಾಮಶೆಟ್ಟಿˌಆಶೀಪ್ ಅರಳಿಕಟ್ಟಿˌ ಸಂದೀಪ ಬಡಿಗೇರˌ ಅಕ್ಷಯ ಜಂಬಗಿ ˌಅರುಣ ಕೆಂಗಾರೆˌ ಶಶಿಕಾಂತ ಮೇತ್ರಿ ಕ್ರೀಡಾಳುಗಳು ಪ್ರೇಕ್ಷಕರಿಂದ ಸೈ ಎನಿಸಿಕೊಂಡರು. ವಿಜೇತ ವಿದ್ಯಾರ್ಥಿಗಳನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀ ಲಕ್ಷ್ಮಣ ಪಾಟೀಲ ಮತ್ತು ಸದಸ್ಯರು ಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ  ಶಿಕ್ಷಕ ಸಿಬ್ಬಂದಿಯವರಾದ ಶ್ರೀಕಾಂತ ಕಂಬಾರˌಶಂಕರ ಕಾಂಬಳೆˌಶ್ರೀಕಾಂತ ಹಳ್ಳೂರˌಮಹಾದೇವ ಕಳ್ಳಿಗುದ್ದಿˌಸುಮಿತ್ರಾ ಮಗೆಣ್ಣವರˌಪಾರೀಸ ಬಳೋಜˌಜ್ಯೋತಿ ಮಹಾಬಳಶೆಟ್ಟಿ ಹಾಗು ವಿದ್ಯಾರ್ಥಿ ಪ್ರತಿನಿಧಿಗಳುˌ ಊರಿನ ಗಣ್ಯಮಾನ್ಯರುˌ ಜನಪ್ರತಿನಿಧಿಗಳುˌಹಳೆಯ ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments