*ಚಿತ್ರ ಕವನ*
*ಗಹನವಾದ ಗಮನವಿರಿಸಿದೆ*
ಓದಲು ಹಾಗೆ ಗ್ರಂಥಾಲಯಕ್ಕೆ ಹೋದೆ
ಪುಸ್ತಕದ ಸಾಲನ್ನು ಹುಡುಕುತ್ತ ನೋಡಿದೆ
ಒಂದು ಪುಸ್ತಕವು ಸೂಜಿಗಲ್ಲಿನಂತೆ ಸೆಳೆದಿದೆ
ಗಹನವಾದ ಗಮನವಿರಿಸಿದೆ
ಮೊದಲನೇ ಪುಟವೇ ಸೆಳೆದಿದೆ
ಓದುಗರ ಮನ ಸೂರೆ ಗೊಂಡಿದೆ
ವ್ಯಕ್ತಿಯ ಪರಿಚಯ ಪುಟವನ್ನು ನೋಡಿದೆ
ಅದು ನನ್ನ ಅಂತರಾಳವ ಕಲಕಿದೆ
ನಾನಿಷ್ಟ ಪಟ್ಟ ಸಾಹಿತಿಕಾರರು
ಚಲನಚಿತ್ರ ನಟನಾ ಚತುರರು
ಒಳ್ಳೆಯ ಅಭಿರುಚಿ ವ್ಯಕ್ತಿ ಇವರು
ಅವರೇ ನಮ್ಮ ಮೇರು ಗಿರೀಶ್ ಕಾರ್ನಾಡರು
ಅವರ ಕಾದಂಬರಿ ಮೇಲೆ ಕಣ್ಣಾಡಿಸಿದೆ
ಕಾನೂರು ಸುಬ್ಬಮ್ಮ ಹೆಗ್ಗಡತಿ ಅದಾಗಿದೆ
ಹೆಗ್ಗಡತಿ ಭಯದ ಛಾಯೆಯ ವಿವರ ವಿಭಿನ್ನವಿದೆ
ಹಾಗೆ ಆ ಪಾತ್ರವನೋದುತಾ ಪರಕಾಯ ಪ್ರವೇಶಿಸಿದೆ.
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments