* ಇಂದಿನಿಂದ ಎನ್ ಎಸ್ ಎಸ್ ಏಳು ದಿನಗಳ ವಿಶೇಷ ಸೇವಾ ಶಿಬಿರ *
ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪ್ರತಿಷ್ಠಿತ ಎಸ್ ಪಿ ಎಮ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ 2023 -2024 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರ ದತ್ತು ಗ್ರಾಮ ಅಳಗವಾಡಿ ಗ್ರಾಮದಲ್ಲಿ ಸೋಮವಾರ ದಿನಾಂಕ 1/7/2024 ರಿಂದ 7/7/2024 ವರೆಗೆ ಆಯೋಜಿಸಲಾಗಿದೆ.
ಸೋಮವಾರ ದಿನಾಂಕ 1/7/2024 ರಂದು ಸಾಯಂಕಾಲ ಉದ್ಘಾಟನಾ ಸಮಾರಂಭ ನೆರವೇರಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಬ್ಯಾರಿಸ್ಟರ ಅಮರಸಿಂಹ ವ. ಪಾಟೀಲ (ಅಣ್ಣಾ ), ಚೇರಮನ್ನರು, ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ, ಮಾಜಿ ಲೋಕ ಸಭಾ ಸದಸ್ಯರು, ಬೆಳಗಾವಿ, ವಹಿಸಲಿದ್ದಾರೆ.ಉದ್ಘಾಟಕರಾಗಿ ಶ್ರೀ ಕುಮಾರ ಬನಶಂಕರಿ, ಅಧ್ಯಕ್ಷರು, ಗ್ರಾಮ ಪಂಚಾಯತ, ಅಳಗವಾಡಿ, ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುನೀತಾ ಕೆ ಅಳಗೊಂಡ ಮುಖ್ಯ್ಯೊಪಾಧ್ಯಾಯರು , ಸರಕಾರಿ ಪ್ರೌಢಶಾಲೆ ಅಳಗವಾಡಿ ಇವರು ಆಗಮಿಸುವರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಲ್ ಎಸ್ ಧರ್ಮಟ್ಟಿ ಉಪಸ್ಥಿತರಿರುವರು . ಕಾರ್ಯಕ್ರಮದ ನಿರ್ವಹಣೆಯನ್ನು ಪ್ರೊ ಡಿ ಎಮ್ ನಾಯ್ಕ ನಿರ್ವಹಿಸುವರು.
7 ದಿನಗಳವರಗೆ ದಿನನಿತ್ಯ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ವಿಶೇಷ. ಉಪನ್ಯಾಸಗಳು ನಡೆಯಲಿವೆ.ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿಂದ ಸಸಿ ನೆಡುವುದು, ವನನಿರ್ಮಾಣ, ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಸಾಂಕ್ರಾಮಿಕ ರೋಗಗಳ ಕುರಿತು ಜಾಗ್ರತಿ, ಸುಲಭ ಶೌಚಾಲಯ ನಿರ್ಮಾಣ, ಸಂಪೂರ್ಣ ಸ್ವಚ್ಛತಾ ಆಂದೋಲನ, ಆರೋಗ್ಯ ಮಾಹಿತಿ ಒದಗಿಸುವುದು, ಗ್ರಾಮಸ್ಥರಲ್ಲಿ ಜನಜಾಗ್ರತಿ ಮೂಡಿಸುವ ಕಾರ್ಯಕ್ರಮಗಳು ನಡೆಯಲಿವೆ.
ಸೋಮವಾರ ದಿನಾಂಕ 7/7/2024 ರಂದು ಸಮಾರೋಪ ಸಮಾರಂಭ ನಡೆಯಲಿದೆಯೆಂದು ಕಾರ್ಯಕ್ರಮ ಶಿಬಿರಾಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ ಮತ್ತು ಸಹ ಶಿಬಿರಾಧಿಕಾರಿಗಳಾದ ಡಾ. ವಿಲಾಸ ಕಾಂಬಳೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಬಸವೇಶ್ವರಿ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments