*ಕವನ*
*ಮಕರ ಸಂಕ್ರಾಂತಿ*
ಉತ್ತರಾಯಣದ ಪುಣ್ಯಕಾಲದಿ
ರಥವನೇರಿ ಬರುವ ಸೂರ್ಯ
ಮಾಗಿಯ ಚಳಿಯನು ದೂರಕೆ ಸರಿಸುತ
ಬಿಸಿಯ ಕೊಡುವ ಶೂರ/
ವರ್ಷವಿಡಿಯಲಿ ದುಡಿದು ದಣಿದಿಹ
ರೈತ ಮನವು ಹಗುರ
ಬಲಿತ ಪೈರ ರಾಶಿ ಹಾಕುತ
ಬಣವೆ ಪೂಜಿಸುವ ಬಾರ/
ಗಂಗಳವ ಬಳಿದ ಅಂಗಳದಲ್ಲಿ
ನೋಡು ರಂಗವಲ್ಲಿ ತೇರ
ಚಿಗುರು ಮಾವಿನ ಹೂವ ತೋರಣ
ನಗುವ ವಾಡೆ ತೀರ/
ಎಳ್ಳು ಬೆಲ್ಲವ ಬೀರಿ ಬರುತಿಹ
ಹೆಣ್ಣು ಮಕ್ಕಳ ಜೋರ
ಒಳ್ಳೆ ನುಡಿಗಳ ಹಂಚಿ ನಗುತಿಹ
ಸಂಸ್ಕೃತಿಯ ಬಿಂಬದ ಸಾರ/
ರಾಸು ಪೂಜಿಸಿ ಕಿಚ್ಚು ಹಾಯಿಸಿ
ಮಕರ ಸಂಕ್ರಾಂತಿಯ ಹಬ್ಬದಾಚಾರ
ಶಿವನ ಶಿರವನು ಸೋಕಿ ಸರಿಯುವ
ಸೊಬಗ ನೋಡುವ ಬಾರ//
ಗೊರೂರು ಜಮುನ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments