ಕಲಿಕೆಯನ್ನು ತಪಸ್ಸಿನಂತೆ ರೂಢಿಸಿಕೊಳ್ಳಿ ಗುರಿ ತಲುಪುತ್ತೀರಿ - ಅಮರಸಿಂಹಣ್ಣಾ ಪಾಟೀಲ
ಹಾರೂಗೇರಿ: ಸ್ಥಳೀಯ ಹಾ.ವಿ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸನ್ 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಘನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಮರಸಿಂಹಣ್ಣಾ ವ. ಪಾಟೀಲ ಚೇರಮನ್ನರು ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ, ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಮಾಜಿ ಲೋಕಸಭಾ ಸದಸ್ಯರು, ಬೆಳಗಾವಿ ಇವರು ಮಾತನಾಡುತ್ತಾ, ವಿದ್ಯಾರ್ಥಿಗಳು ಶ್ರೇಷ್ಠ ಮಟ್ಟದ ಗುರಿ ಇಟ್ಟುಕೊಂಡು ಹಗಲಿರುಳು ತಪಸ್ಸಿನಂತೆ ಕಷ್ಟಪಟ್ಟು ಓದಿದಾಗ ಮಾತ್ರ ಉನ್ನತ ಮಟ್ಟದ ಗುರಿ ಮುಟ್ಟಲಿಕ್ಕೆ ಸಾಧ್ಯವಾಗುತ್ತದೆ. ಮತ್ತು ಮೊಬೈಲದಿಂದ ದೂರ ಇದ್ದು ಸಾಧನೆ ಮಾಡಿದ ಸಾಧಕರ ಸಖ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಾ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಥೋ ಬಾಲ್ ಕ್ರೀಡಾ ಪಟ್ಟುಗಳಾದ ಕು.ಶಾಲಿನಿ ಕುಡಚ್ಯಾಗೋಳ, ಕು.ಪೂಜಾ ಪಂಚಗೋಳ,ಕು.ರಮ್ಯಾ ಶಿರಗೊರೆ ಇವರಿಗೆ ಸನ್ಮಾನಿಸಿ, ಕಳೆದ 2023 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕು. ದಿವ್ಯಾ ಸಂಕ್ರಟ್ಟಿ, ದ್ವಿತೀಯ ಸ್ಥಾನ ಪಡೆದ ಕು.ಐಶ್ವರ್ಯಾ ಸೈದಾಪೂರ ಮತ್ತು ಕು. ಅಕ್ಷತಾ ಹಳೆಮನಿ, ತೃತೀಯ ಸ್ಥಾನ ಪಡೆದ ಕು.ನಂದಾ ಕೂಗೆ ಇವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು.ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಪಾಂಡುರಂಗ ಆಯ್. ಭಂಢಾರೆ ಉಪನಿದೇರ್ಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಶೈ.ಜಿ.ಚಿಕ್ಕೋಡಿ. ಇವರು ಮಾತನಾಡುತಾ, ಈ ಸಂಸ್ಥೆಯ ಒಬ್ಬ ಹಳೆಯ ವಿದ್ಯಾರ್ಥಿಯಾಗಿ ಹೇಳುವುದ್ದಾದರೆ, ಈ ಸಂಸ್ಥೆಯಲ್ಲಿ ಒಳ್ಳೆಯ ಶೈಕ್ಷಣಿಕ ವಾತಾವರಣ ಇದೆ. ಅದರ ಸದುಪಯೋಗ ಪಡೆದು ಕೊಂಡು ನಿಮ್ಮ ಉನ್ನತ ಮಟ್ಟದ ಗುರಿ ತಲುಪಲು ಸಾಧ್ಯವಾಗುತ್ತಾದೆ. ಮತ್ತು ದುಶ್ಚಟದಿಂದ ದೂರ ಇದ್ದು ಒಳ್ಳಯೆ ಆದರ್ಶ ಗುಣದಿಂದ ಸಮಾಜದಲ್ಲಿ ದೊಡ್ಡ-ದೊಡ್ಡ ಗಣ್ಯ ವ್ಯಕ್ತಿಗಳಾಗಿ ಸಮಾಜದ ಗುರುವಿನ ಮತ್ತು ತಂದೆ ತಾಯಿಗಳ ಋಣ ತೀರಿಸಬೇಕೆಂದು ಹೇಳುತ್ತಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.ಸಾನಿಧ್ಯ ವಹಿಸಿದ್ದ ಪ.ಪೂಜ್ಯ ಪ್ರದೀಪಕುಮಾರ ಘಂಟಿ ಮಹಾರಾಜರು ಇಂಚಗೇರಿ ಮಠ, ಹಿಡಕಲ್ ಮಾತನಾಡುತ್ತಾ,ಹಣ ಒಳ್ಳೆಯ ಸೇವಕ ಮತ್ತು ಕೆಟ್ಟ ಯಜಮಾನ ಇಂದಿನ ದಿನಗಳಲ್ಲಿ ಜನ ಹಣದ ಬೇನ್ನು ಹತ್ತಿ ತಮ್ಮ ಮಕ್ಕಳ ಕಡೆಗೆ ಕಾಳಜಿ ವಹಿಸದೆ ವಿದ್ಯಾರ್ಥಿಗಳು ಅಡ್ಡ ದಾರಿ ಹಿಡಿಯುತ್ತಿದ್ದಾರೆ. ಹೀಗಾಗಿ ನಾವೆಲ್ಲರು ಮನ:ಸಾಕ್ಷಿಯಾಗಿ, ಆತ್ಮಸಾಕ್ಷಿಯಾಗಿ ಒಳ್ಳೆಯವರಾಗಿ ನಡೆದುಕೊಳ್ಳಬೇಕಾಗಿದೆ. ಹಸನ್ಮೂಖಿ ಸದಾ ಸುಖಿಯಾಗಿ ಅರಿಶಡ್ವ್ ರ್ಗಗಳನ್ನು ನಿಯಂತ್ರಿಕೊಂಡು, ನಗುವವನು ಯೋಗಿ ಅಳುವವನು ರೋಗಿ,ಎಂದು ಹೇಳುತ್ತಾ ಒಬ್ಬ ಯಶಸ್ವಿ ವ್ಯಕ್ತಿಯ ಮುಖದಲ್ಲಿ ಎರಡು ಶಕ್ತಿ ಇರಬೇಕು ಒಂದು ನಗೆ. ಇನ್ನೊಂದು ಮೌನ ಇರಬೇಕು. ಎಂದು ಹೇಳುತ್ತಾ ಮುಂಬರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಿರ್ಭಿತಿಯಿಂದ, ದೃಢಮನಸ್ಸಿನಿಂದ ನಗುಮೊಗದಿಂದ ಪರೀಕ್ಷೆ ಬರಿದಿದ್ದೆ ಆದರೆ ಅವರೆಲ್ಲರೂ ಖಂಡಿತ ಸಂಸ್ಥೆಗೆ ಮತ್ತು ನಿಮ್ಮ ತಂದೆ ತಾಯಿಗಳಿಗೆ ಕೀರ್ತಿಯನ್ನು ತಂದೆ ತರುತ್ತೀರಿ ಎಂದು ಆರ್ಶಿವದಿಸಿದರು.ಡಾ.ಕೆ.ಎಸ್.ಕಾಂಬಳೆ ಪ್ರಾಚಾರ್ಯರು,ಡಿ.ಪಿ.ಕಾಪಸಿ ಉಪಪ್ರಾಚಾರ್ಯರು, ಡಾ.ಎಲ್.ಎಸ್.ಧರ್ಮಟ್ಟಿ ಪ್ರಾಚಾರ್ಯರು,ಎಂ.ಬಿ.ಪಡೇದಾರ ಪ್ರಾಚಾರ್ಯರು,ಎಸ್.ಎಮ್.ಯಲಿಗಾರ ಪ್ರಾಚಾರ್ಯರು,ಮಹೇಶ ಐಹೊಳೆ ಮುಖ್ಯೋಪಾಧ್ಯಾಯರು, ಪ್ರೋ. ಎಮ್.ವಿ.ಕೊಳೇಕರ ಮತ್ತು ಸರ್ವ ಸಿಬ್ಬಂದಿ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಎಸ್.ಕೆ.ಗುರುನಾಥ ನೇರವೇರಿಸಿದರು. ಮಾಲಾಪರ್ಣೆ ಮತ್ತು ಪ್ರತಿಭಾ ಪುಸ್ಕಾರ ಯಾದಿಯನ್ನು ಪಿ.ಎಮ್. ಪಾಟೀಲ ಮತ್ತು ಕೆ.ಎಸ್. ಭಜಂತ್ರಿ ನೆರವೆರಿಸಿದರು, ಹಾಗೂ ಕಾರ್ಯಕ್ರಮವನ್ನು ಎಚ್.ಎಸ್.ಕುರಿಯವರ ನಿರೂಪಿಸಿ ವಂದಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments