* ಮಾದರಿ ಗ್ರಾಮದ ಕನಸುಗಾರ ಕ್ರಿಯಾಶೀಲ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಕಾಟೆ*

 *ಮಾದರಿ ಗ್ರಾಮದ ಕನಸುಗಾರ ಕ್ರಿಯಾಶೀಲ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಕಾಟೆ*




 

ರಾಯಬಾಗ: ತಾಲೂಕಿನ ಬಾವನಸೌಂದತ್ತಿ ಗ್ರಾಮದ ಗ್ರಾಮ‌ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ ಅವರು ತಮ್ಮದೇ ಆದ ಶೈಲಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

 ಮನುಷ್ಯನಿಗೆ ಅಧಿಕಾರ‌ ಬರುತ್ತಿದ್ದಂತೆ ತಮ್ಮ ಜೀವನದ ಶೈಲಿಯನ್ನೇ ಬದಲಿಸಿಕೊಳ್ಳುವ ಇಂತಹ ದಿನಮಾನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ ಅವರು ಸ್ವಲ್ಪ ಭಿನ್ನವಾಗಿದ್ದಾರೆ.  ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ  ಬಸ್  ತುಂಬಿ ಗ್ರಾಮಕ್ಕೆ ಬರುತ್ತದೆ. ಇಂತಹ ಸಮಯದಲ್ಲಿ ಬಸ್ ಏರಲು ಹರಸಾಹಸ ಪಡುತ್ತಿರುವಾಗ ದಿನನಿತ್ಯ ಬಸ್ ನಲ್ಲಿ ಎಲ್ಲ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಹತ್ತಿಸಿಯೇ  ಮುಂದಿನ ಕೆಲಸಗಳನ್ನು ಮಾಡುತ್ತಾರೆ. ನಿತ್ಯ ಸಮಸ್ಯೆ ಎದುರಿಸುತ್ತಿರುವುದನ್ನು ಕಣ್ಣಾರೆ ಕಂಡು  ರಾಮಚಂದ್ರ ಕಾಟೆ ಹಾಗೂ ಅನೇಕರು ರಾಯಬಾಗ ಹಾಗೂ ಚಿಕ್ಕೋಡಿ‌ ಡಿಫೋ‌ ಮ್ಯಾನೇಜರ ಅವರಿಗೆ ಭೇಟಿ ಆಗಿ ಹೆಚ್ಚಿನ‌ ಬಸ್ ಬಿಡಲು ಮನವಿ ಮಾಡಿಕೊಂಡಿದ್ದಾರೆ.  ಇವರ ಈ ಕಾರ್ಯಕ್ಕೆ ಇಡೀ ಗ್ರಾಮಸ್ಥರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳಹಂತದ ಸೇತುವೆಯ ಪಕ್ಕದಲ್ಲಿ ಕುಸಿದು ಹೋಗಿತ್ತು. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿತ್ತು. ಇದು ಬಾವನಸೌಂದತ್ತಿ ಗ್ರಾಮಕ್ಕೆ ಸಂಬಂಧವಿಲ್ಲದಿದ್ದರೂ  ಅಲ್ಲಿ ಖಡಿ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ.


ಗ್ರಾಮದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ;

ಗ್ರಾಮದಲ್ಲಿ ಅಹಿತಕರ ಘಟನೆಯಾಗದಂತೆ ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷ ರಾಮಚಂದ್ರ ಕಾಟೆ‌ ಅವರ ನೇತೃತ್ವದಲ್ಲಿ ಶಿರಗುಪ್ಪಿ ಗ್ರಾಮಕ್ಕೆ ನಿಯೋಗ ಹೋಗಿ ಅಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಕುರಿತು ಅಧ್ಯಯನ ನಡೆಸಿದರು. ನಂತರ ಗ್ರಾಮದ ಎಲ್ಲರ ಜೊತೆ ಚರ್ಚಿಸಿ  ಗ್ರಾಮದಲ್ಲಿ ಕ್ಯಾಮರಾ ಅಳವಡಿಕೆ ಮಾಡಿದ್ದಾರೆ. ಇದರಿಂದ ಕಳ್ಳತನ ತಡೆಗಟ್ಟಿದಂತಾಗಿದೆ. ಅಲ್ಲದೇ ಸೂಕ್ಷ್ಮ ಸ್ಥಳಗಳಲ್ಲಿಯೂ ಅಳವಡಿಕೆಯಿಂದ ಜನರೆಲ್ಲರೂ ಜಾಗೃತರಾಗಿದ್ದಾರೆ.


ವಿವಿಧ ಅಭಿವೃದ್ಧಿ; 

ರಾಮಚಂದ್ರ ಕಾಟೆ ಅವರು ನೂತನ ಅಧ್ಯಕ್ಷರಾದನಂತರ ಬಾವನಸೌಂದತ್ತಿ ಗ್ರಾಮದ  ಎಲ್ಲ ಸದಸ್ಯರ, ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿ‌ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಚರಂಡಿ ಸ್ವಚ್ಚತೆ, ಪ್ಲೇವರ ಬ್ಲಾಕ್ ಅಳವಡಿಕೆ, ಸ್ಮಶಾನ ಅಭಿವೃದ್ಧಿ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. 


ಕಾಟೆ ಅಭಿವೃದ್ಧಿ ಕಂಡು ದೇಣಿಗೆ;

ರಾಮಚಂದ್ರ ಕಾಟೆ ಅವರ ನಿರಂತರ  ಕಾರ್ಯ ಚಟುವಟಿಕೆ ಕಂಡು ಗ್ರಾಮಕ್ಕೆ  ಉದ್ಯಮಿ ಪ್ರಕಾಶ‌ ಮಹಾಜನ್ ಅಂಬುಲೆನ್ಸ್ ನೀಡಿದರೆ  ಶವ ವಾಹನವನ್ನು ರೈತರಾದ ಅನೀಲ ಕೆಂಗಾಲೆ‌ ಅವರು ನೀಡಿದ್ದು ಎಲ್ಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.


ತೋಟಪಟ್ಟಿಗಳಿಗೆ ನಿರಂತರ ವಿದ್ಯುತ್ ಕಲ್ಪಸಿದ ರಾಮಚಂದ್ರ;

ಸುಮಾರು ವರ್ಷಗಳಿಂದ‌ ಜನರ ಬೇಡಿಕೆಯಾಗಿದ್ದ ನಿರಂತರ ವಿದ್ಯುತ್ ಕಲ್ಪಿಸಲು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಸಹಿತ ಯಾವುದೇ ಪ್ರಯೋಜನವಾಗಿರಲಿಲ್ಲ. ರಾಮಚಂದ್ರ‌ ಕಾಟೆ‌ ಅವರು ನಿರಂತರ ಶ್ರಮದಿಂದ ವಿದ್ಯುತ್ ಕಲ್ಪಿಸಿದ್ದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಗ್ರಾಮದ ಜನರ ಸಹಕಾರದಿಂದ ಜನ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರಾಮಚಂದ್ರ ಕಾಟೆ ಅವರು ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಪ್ರಬಲ ಇಚ್ಚಾಶಕ್ತಿಯನ್ನು ಏಕತ್ರಯಗೊಳಿಸಿ   ಕ್ರಿಯಾಶೀಲ ಗ್ರಾ.ಪಂ.ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಗಮನಾರ್ಹ.

---------------

【ಗ್ರಾಮದ ವಿವಿಧ ಅಭಿವೃದ್ಧಿ‌ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದೇನೆ. ಮತ್ತು ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದಾರೆ. ವಿವಿಧ‌ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಮಾದರಿ ಗ್ರಾಮ ಆಗುತ್ತದೆ. ಇಲಾಖೆಯಿಂದ ಎಲ್ಲ ಸಹಕಾರ ನೀಡುತ್ತೇವೆ.】

*ಚಂದರಗಿ, ತಾಪಂ ಇಓ ರಾಯಬಾಗ

------

【ಜನರು ನನಗೆ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಅವರ‌ ಕೆಲಸ ಮಾಡುತ್ತಿದ್ದೇನೆ ಅಷ್ಟೆ. ಮತ್ತು ಎಲ್ಲ ಸದಸ್ಯರ, ಗ್ರಾಮದ ಜನರೂ ಪಕ್ಷ ಬೇಧ‌ ಮರೆತು ಸಹಕಾರ ನೀಡುತ್ತಿದ್ದಾರೆ. ಹೀಗೆ‌ ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಮಾದರಿ ಗ್ರಾಮ‌ ಮಾಡುತ್ತೇನೆ.】

* ರಾಮಚಂದ್ರ‌ ಕಾಟೆ, ಗ್ರಾಪಂ ಅಧ್ಯಕ್ಷಕರು, ಬಾವನಸೌಂದತ್ತಿ.

------------

【ಮಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸಲು ಸವದತ್ತಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವಸದಸ್ಯರು, ಗ್ರಾಮಸ್ಥರು ಹಾಗೂ ಸಿಬ್ಬಂದಿ ವರ್ಗ ಕೈಜೊಡಿಸಿರುವುದು ಗ್ರಾಮದ ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಿದೆ】.

 ಎಸ್ ಎಸ್ ನ್ಯಾಮಗೌಡರ, ಪಿಡಿಓ ಬಾವನಸೌಂದತ್ತಿ.



*ವರದಿ:ಡಾ.ಜಯವೀರ ಎ.ಕೆ.*

    *ಖೇಮಲಾಪುರ*

Image Description

Post a Comment

0 Comments