ಸಾಹಿತಿ ಶಿಕ್ಷಕ ಎಂ.ಕೆ.ಶೇಖ್ ಇವರಿಗೆ ಮಹಾತ್ಮಾ ಜ್ಯೋತಿಬಾ ಫುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ.
ಕುಡಚಿ: ಇಲ್ಲಿನ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಎಂ.ಕೆ.ಶೇಖ್ ಇವರ ಸಾಹಿತ್ಯ ಹಾಗೂ ಶಿಕ್ಷಣ ಸೇವೆ ಪರಿಗಣಿಸಿ ಶ್ರೀಯುತರನ್ನು "ಮಹಾತ್ಮಾ ಜ್ಯೋತಿಬಾ ಫುಲೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಜಯಪುರದ ತೊರವಿಯ ಡಾ.ಬಾಬಾಸಾಹೇಬ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇದೇ ತಿಂಗಳ 21 ನೇ ತಾರೀಖಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ. ಜಿ.ಎಸ್ ಕಾಂಬಳೆ ಹಾಗೂ ಕಾರ್ಯದರ್ಶಿಗಳಾದ ಶ್ರೀ ರಮೇಶ ನಾಯಕರವರು ತಿಳಿಸಿದ್ದಾರೆ.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments