"ವಿದ್ಯಾರ್ಥಿಗಳು ವಿವೇಕಾನಂದರ ಸಂದೇಶಗಳನ್ನು ಪಾಲಿಸಬೇಕು : ಹೆಚ್.ಎಫ್.ನಾಯಕ
ಚಿಕ್ಕೋಡಿ: ವಿವೇಕಾನಂದರು ಯುವಶಕ್ತಿಯ ಜ್ಞಾನ ಕೇಂದ್ರ. ವಿವೇಕಾನಂದರು ಮಹಾನ್ ರಾಷ್ಟ್ರಭಕ್ತರು. ಇವರ ಚಿಂತನೆಗಳು ದೇಶದ ಅಭಿವೃದ್ಧಿಗೆ ಅತ್ಯಂತ ಪ್ರಮುಖ ಪಾತ್ರವನ್ನು ಬಯಸುತ್ತವೆ. ಹಾಗಾಗಿ ವಿವೇಕಾನಂದರ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಲಠ್ಠೆ ಶಿಕ್ಷಣ ಸಂಸ್ಥೆಯ ಬಿ ಎಸ್ ಪದವಿ ಪೂರ್ವ ಕಾಲೇಜಿನ ಶಿಕ್ಷಣ ವಿಭಾಗದ ಉಪನ್ಯಾಸಕರಾದ ಹಣಮಂತ ಎಫ್ ನಾಯಕ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗ ಆಯೋಜಿಸಿದ ಸ್ವಾಮಿ ವಿವೇಕಾನಂದ ಅವರ ಜಯಂತಿ ಅಂಗವಾಗಿ ಆಯೋಜಿಸಿದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಕಾಯಕ, ಉಪಾಸನೆ, ಧ್ಯಾನ, ಜ್ಞಾನ ಎಂಬ ತತ್ವಗಳನ್ನು ಮೈಗೂಡಿಸಿಕೊಂಡಿದ್ದವರು. ಸ್ತ್ರೀಯರ ಬಗೆಗೆ ಅಪಾರವಾದ ಗೌರವವನ್ನು ಹೊಂದಿದ್ದರು. ದೇಶಾಭಿಮಾನ ಎಂದರೆ ಎಲ್ಲಿಲ್ಲದ ಪ್ರೀತಿಯನ್ನು ಅಭಿವ್ಯಕ್ತಿದರು ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಯುವಕರು ಸಾಮಾಜಿಕ ಜವಾಬ್ದಾರಿಗಳನ್ನು ಮೈಗೂಡಿಸಿಕೊಂಡು ವಿವೇಕಾನಂದ ಅವರು ಅನುಸರಿಸಿದ ಮಾರ್ಗಗಳಲ್ಲಿ ನಡೆದಾಗ ರಾಷ್ಟ್ರದ ಅಭಿವೃದ್ಧಿ ಆಗಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸ, ಪ್ರಾಮಾಣಿಕತೆ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಒಂದು ವಾರ ನಿಮ್ಮ ಮಹಾವಿದ್ಯಾಲಯದಲ್ಲಿ ನಡೆಯುವ ಯುವ ರಾಷ್ಟ್ರೀಯ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗವಹಿಸಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಮುಖಾಂತರ ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡು ದುಶ್ಚಟಗಳಿಂದ ದೂರವಾಗಿರಬೇಕೆಂದು ತಿಳಿ ಹೇಳಿದರು.
ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಇಂದ್ರಜಿತ್ ಪಿ ಪಾಟೀಲ್ ಅವರ ವಹಿಸಿದ್ದರು. ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಪ್ರಾಂಶುಪಾಲರಾದ ಡಾ.ಕಿರಣ ಬಿ ಚೌಗಲೆ, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕು.ಅಂಬಿಕಾ ತಂಡದವರು ಪ್ರಾರ್ಥನೆ ಮಾಡಿದರು. ಸಾಂಸ್ಕೃತಿಕ ಸಂಚಾಲಕರಾದ ಪ್ರೊ.ವಿನಾಯಕ್ ಮಾದಿಗ ಪ್ರಾಸ್ತಾವಿಕ ಮತ್ತು ಸ್ವಾಗತ ಮಾತನಾಡಿದರು. ಅತಿಥಿಗಳ ಪರಿಚಯ ಪ್ರೀತಿ ಪೂಜಾರಿ ನಿರ್ವಹಿಸಿದರು. ರಿತೇಶ ಸಾಬಣ್ಣನವರ ವಂದಿಸಿದರು. ಸ್ನೇಹ ಕಾರಂಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments