*"ಮೌಲ್ಯಮಾಪನ ನ್ಯಾಯ ಸಮ್ಮತವಾಗಲಿ": ಡಾ.ವಿ.ಆರ್.ಚೌಧರಿ*
*ಬೆಳಗಾವಿ*: ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಬಹುದೊಡ್ಡ ಜವಾಬ್ದಾರಿ ತಮ್ಮ ಮೇಲೆ ಇದೆ. ಆದುದರಿಂದ ತಾವು ಸರಿಯಾಗಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ವಿದ್ಯಾರ್ಥಿಗಳು ಬರೆದ ಉತ್ತರಗಳನ್ನು ಚೆನ್ನಾಗಿ ಓದಿ ಗ್ರಹಿಸಿಕೊಂಡು ಮೌಲ್ಯ ಮಾಪನ ಮಾಡಬೇಕು. ತಾವು ಮಾಡುವ ಮೌಲ್ಯಮಾಪನವು ನ್ಯಾಯಸಮ್ಮತವಾಗಿರಲಿ ಎಂದು ಕನ್ನಡ ಮೌಲ್ಯ ಮಾಪನ ಚೇರ್ಮನರಾದ ಡಾ.ವಿ.ಆರ್.ಚೌಧರಿ ನುಡಿದರು.
ಅವರು ದಿನಾಂಕ 6 ರಂದು ಸೋಮವಾರ ಬೆಳಗಾವಿ ನಗರದ ಪ್ರತಿಷ್ಠಿತ ಮರಾಠಾ ಮಂಡಳದ ಪದವಿ ಕಾಲೇಜಿನಲ್ಲಿ ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿ.ಎ.ಬಿ.ಕಾಂ.ಬಿ.ಎಸ್.ಸಿ. 2.4.6 ನೇ ಸೆಮಿಸ್ಟರ್ ಕನ್ನಡ ವಿಷಯದ ಮೌಲ್ಯ ಮಾಪನ ಆರಂಭಿಕ ಕಾರ್ಯಕ್ಕೆ ಚಾಲನೆ ನೀಡಿ, ಉಪಸ್ಥಿತರಿದ್ದ ಎಲ್ಲ ಕನ್ನಡ ಮೌಲ್ಯ ಮಾಪಕರಿಗೆ ಪೂರಕ ಹಾಗೂ ಗುಣಾತ್ಮಕ ಸಲಹೆಗಳನ್ನು ನೀಡಿದರು. ಯಾವುದೇ ಕಾರಣಕ್ಕೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸೂಕ್ಷ್ಮವಾಗಿ ನೋಡಿಕೊಳ್ಳಬೇಕೆಂದರು. ಘನ ಅಧ್ಯಕ್ಷತೆ ವಹಿಸಿದ್ದ ಮರಾಠಾ ಮಂಡಳದ ಪ್ರಾಚಾರ್ಯರಾದ ಡಾ.ಎಚ್.ಜೆ.ಮೊಲೆರಕಿ ಅವರು ಆಪ್ತವಾಗಿ ತಮ್ಮ ಆಶಯ ನುಡಿಗಳನ್ನು ಹಂಚಿಕೊಂಡರು. ಆರಂಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಕವಿ ಡಾ.ಅಶೋಕ ನರೋಡೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು. ಹಿರಿಯ ಕನ್ನಡ ಪ್ರಾಧ್ಯಾಪಕರಾದ ಡಾ.ಎಸ್.ಎಸ್.ಬಸುಪಟ್ಟದ, ಮರಾಠಾ ಮಂಡಳದ ಪರೀಕ್ಷಾ ಸಂಯೋಜಕರು ಉಪಸ್ಥಿತರಿದ್ದರು. ಕೊನೆಗೆ ಡಾ.ಎಚ್.ಬಿ.ಕೋಲಕಾರ ವಂದಿಸಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟ, ಹಾಗೂ ವಿಜಯಪುರದಿಂದ ಆಗಮಿಸಿದ್ದ 120 ಕ್ಕೂ ಹೆಚ್ಚು ಕನ್ನಡ ಪ್ರಾಧ್ಯಾಪಕರು ಮೌಲ್ಯ ಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments