*ಕನ್ನಡದ ಹಬ್ಬ *


 ಕನ್ನಡದ ಹಬ್ಬ 

ಕನ್ನಡದ ಹಬ್ಬ ಕನ್ನಡ ರಾಜ್ಯೋತ್ಸವ 
ನಾವೆಲ್ಲ ಆಚರಿಸುವ ಭಕ್ತಿ ಭಾವದಿಂದ 
ಭಿತ್ತಿ ಬೆಳೆಯುವ ಕನ್ನಡ ನುಡಿಯ ಪೈರು 
ಸಮೃದ್ಧವಾಗಿ ಹರಡಿಲಿ ಹೆಮ್ಮೆಯ ಕನ್ನಡ ನುಡಿ,

ಕನ್ನಡ ನಾಡು ಶ್ರೀಗಂಧದ ಬೀಡು 
ಕವಿ ಕಾವ್ಯ ರಚಿಸಿದ ಕನ್ನಡ ನುಡಿ 
ದಾಸ-ಶರಣರ ತತ್ವಸಾರಗಳ ಸವಿನುಡಿ 
ಮೇರು ಕೃತಿಗಳಿಂದ ಕಂಗೊಳಿಸುವ ರತ್ನ ಗನ್ನಡಿ,

ಕನ್ನಡದ ಹಬ್ಬಕ್ಕೆ ಎಲ್ಲೆಡೆ ಸಂಭ್ರಮ 
ಕನ್ನಡ ಮಾತೆಗೆ ಪ್ರೀತಿಯ ಗೌರವ 
ಎಲ್ಲೆಡೆ ಧ್ವಜಾರೋಹಣ ಪುಷ್ಪ ನಮನ
ಕನ್ನಡ ನುಡಿಯ ಭಾಷಣ, ಸಂಗೀತದ ರಸದೌತಣ,

ದೇಶ- ವಿದೇಶದ ಕನ್ನಡಿಗರ ಮನೆಹಬ್ಬ 
ಕನ್ನಡಿಗರಿಗೆ ಮಾತ್ರ ಸೀಮಿತವಾಗಿರದೆ 
ಪಸರಿಸಲಿ ವಿಶ್ವದ ಸರ್ವರ ಹೃದಯದಲ್ಲಿ 
ನಿತ್ಯ ಬೆಳಗಲಿ ಕನ್ನಡ ನುಡಿಯ ಪ್ರಣತೆ. 

ಭಾಗ್ಯ ಎಲ್.ಆರ್. ಶಿವಮೊಗ್ಗ

Image Description

Post a Comment

0 Comments