ಆಗಂತುಕ (ಕಾದಂಬರಿ) ಸಂಚಿಕೆ -10

 ಆಗಂತುಕ  (ಕಾದಂಬರಿ)


ಸಂಚಿಕೆ- ೧೦


ಹಿಂದಿನ ಸಂಚಿಕೆಯಲ್ಲಿ


ರೌಡಿಯು ಹಾಕಿಕೊಂಡಿದ್ದ ಹಾಫ್ ಕೋಟನ್ನು ಅಸಹನೆಯಿಂದ ಬೀದಿಯಲ್ಲಿ ಎಸೆದು ಅದರಲ್ಲಿ ವಜ್ರಗಳ ಹರಳಿದೆ ಯೆಂದು ತಿಳಿದ ಮೇಲೆ ಅದನ್ನು ಹುಡುಕುವುದೇ ಸವಾಲಾಗಿರುತ್ತದೆ


ಕಥೆಯನ್ನು ಮುಂದುವರೆಸುತ್ತಾ


ರಘುವೀರ ಹಾಗೂ ಅವರಪ್ಪನಿಗೆ ಆದಷ್ಚೂ ಬೇಗ ವಜ್ರದ ಹರಳಿರುವ ಕೋಟ್ ಸಿಕ್ಕಿಬಿಟ್ಟರೆ ಅದನ್ನು ರೌಡಿಗಳಿಗೆ ತಲುಪಿಸಿ ಜೀವಭಯ ಹೋಗಲಾಗಿಸಿಕೊಂಡು ನೆಮ್ಮದಿಯಾಗಿರಬೇಕೆಂದೆನಿಸಿರುತ್ತದೆ 


ವಜ್ರದ ವ್ಯಾಪಾರಿಯ ಕೊಲೆ ವಜ್ರದ ಹರಳುಗಳ ಕಳ್ಳತನವಾಗಿರುವುದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ತಲೆ ನೋವಾಗಿರುತ್ತದೆ.

ಪೋಲೀಸ್ ಇನ್ಸ್ ಪೆಕ್ಟರ್ ರವರಿಗೆ ಕೊಲೆಗಾರರನ್ನು ಹಿಡಿಯುವುದರ ಜೊತೆಗೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಜ್ರಗಳಹರಳುಗಳನ್ನು ಕದ್ದಿರುವವರನ್ನು ಕಂಡು ಹಿಡಿದು ಅದನ್ನು ವಾರಸ್ಸುದಾರರಿಗೆ ನೀಡುವ ಜವಾಬ್ದಾರಿಯಾಗಿದ್ದು ಬೇಗನೇ ಕೊಲೆಗಾರರನ್ನು ವಜ್ರದ ಕಳ್ಳರನ್ನು ಕಂಡುಹಿಡಿಯಬೇಕೆಂದು ಮೇಲಧಿಕಾರಿಗಳ ಒತ್ತಡ ಉಂಟಾಗಿದ್ದು ಇದಕ್ಕಾಗಿ ಪೋಲೀಸ್ ಇನ್ಸ್ ಪೆಕ್ಟರ್ ಹಗಲಿರುಳೂ ಶ್ರಮಿಸಬೇಕಾಗಿದ್ದು ಯಾರ ಮೇಲೆೆ ಸಣ್ಣ ಅನುಮಾನ ಬಂದರೂ ಅವರನ್ನು ಠಾಣೆಗೆ ಕರೆಸಿ ವಿಚಾರಣೆಮಾಡಿ ಕಳುಹಿಸುತ್ತಿರುತ್ತಾರೆ.


ವಜ್ರದ ವ್ಯಾಪಾರಿಯ ಕೊಲೆಯಾಗಿ ಅವರ ಶ್ರಾದ್ದಕರ್ಮಗಳನ್ನು ಮಾಡಿದ ನಂತರವೂ ಅವರ ಮಗಳು ಇನ್ನೂ ಸರಿಯಾಗಿ ಚೇತರಿಸಿಕೊಂಡಿರುವುದಿಲ್ಲ. ತನಗೆ ಹೆಚ್ಚಿನ ಗಾಯಗಳಾಗದಿದ್ದರೂ ತನ್ನ ತಂದೆಯ ಕೊಲೆ ತನ್ಮ ಕಣ್ಣೆದುರಿಗೆ ಆಗಿದ್ದರಿಂದ ಆಘಾತಗೊಳಗಾಗಿದ್ದು  ಐಸಿಯುನಲ್ಲಿ ಚಿಕಿತ್ಸೆ ಪಡೆದು ಜನರಲ್ ವಾರ್ಡಿಗೆ ಶಿಫ್ಟ್ ಆಗಿರುತ್ತಾಳೆ .ಅವಳನ್ನು ಅವರಮ್ಮ ಅಣ್ಣ ಇಬ್ಬರೂ ನೋಡಿಕೊಳ್ಳುತ್ತಿರುತ್ತಾರೆ


ಇದೆಲ್ಲದರ ನಡುವೆ ಎಲ್ಲರಿಗಿಂತ ತಮಗೆ ಹೆಚ್ಚಿನ ನಷ್ಟ ಉಂಟಾಗಿದೆಯೆಂಬ ಭ್ರಮೆಯಿಂದ ವಜ್ರದ ಕಳ್ಳರ ಬಾಸ್ ತುಂಬಾ ಚಿಂತೆಗೊಳಗಾಗಿರುವಂತಿರುತ್ತದೆ . ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಕಳ್ಳರ ಗುಂಪಿನ ಬಾಸ್ ಗೆ ತಡೆಯಲಾರದ ಕೋಪ ಬಂದಿರುತ್ತದೆ. ವಜ್ರಗಳ ಹರಳುಗಳನ್ನು ಕೊಡುವುದಾಗಿ ಬೇರೆಯವರಿಗೆ ಭರವಸೆನೀಡಿದ್ದು ಮುಂಗಡವಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಸಹ ಪಡೆದಿದ್ದು ಉಳಿದ ಹಣವನ್ನು ವಜ್ರಗಳನ್ನು ಕೊಟ್ಟಾಗ ಪಡೆಯುತ್ತೇನೆಂದು ಮೌಖಿಕ ವ್ಯವಹಾರ ನಡೆಸಿದ್ದು ತನ್ನ ಒಂದು ಸಣ್ಣ ತಪ್ಪಿನಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆಯೆಂದು   ಉಗ್ರಗೊಂಡಿದ್ದು  ಬೆಳಿಗ್ಗೆ ರಾತ್ರಿಯಾಗುತ್ತಿದ್ದಂತೆ ವಜ್ರದ ಹರಳನ್ನು ತೆಗೆದುಕೊಂಡಿರುವ ಯುವಕ ಸಿಕ್ಕಿದ್ನಾ ಎಂದು ವಿಚಾರಿಸುತ್ತಾ ಅವನನ್ಮು ಹುಡುಕಲು ಬಸ್ಟಾಂಡ್ ಏರಿಯಾಗೆ ಒಂದು ತಂಡವನ್ನು ಬಿಟ್ಟಿದ್ದು ಉಳಿದ ಕಡೆ ಉಳಿದವರನ್ನು ನಿಯೋಜಿಸಿ ಹದ್ದಿನ ಕಣ್ಣಿಡುವಂತೆ ಸೂಚಿಸಲಾಗಿರುತ್ತದೆ. ಆದರೇನು ಪ್ರಯೋಜನ?  ವಜ್ರದ ಹರಳನ್ನು ತೆಗೆದುಕೊಂಡಿರುವನೆಂದು ತಿಳಿದಿರುವ ಯುವಕನನ್ನು ಇಬ್ಬರು ಮಾತ್ರ ನೋಡಿದ್ದು ಅದರಲ್ಲಿ ವಜ್ರದ ಹರಳಿನ ಸಣ್ಣ ಚೀಲವನ್ನು ಹಾಫ್ ಕೋಟಿನಲ್ಲಿರಿಸಿಕೊಂಡು ಕಳೆದನಲ್ಲಾ ಎಂದು  ಬಾಸ್ ನ ಬಲಗೈ ಭಂಟನಾಗಿದ್ದರೂ ಸಹಿಸಲಾರದೆ ಕೋಪದಿಂದ ಕೊಂದಿದ್ದರಿಂದ ಅವನ ಜೊತೆಯಲ್ಲಿದ್ದವನು ಮಾತ್ರ  ರಘುವೀರನನ್ನು ನೋಡಿರುವುದರಿಂದ ಅವನನ್ನು ಉಳಿಸಿಕೊಂಡು ರಘುವೀರನನ್ನು ನೋಡಿದ ತಕ್ಷಣ ಅವನ ಫೋಟೋ ಹಿಡಿದು ಗುಂಪಿನ ಸದಸ್ಯರಿಗೆ ಕಳುಹಿಸುವಂತೆ ತಿಳಿಸಲಾಗಿರುತ್ತದೆ .


ರಾತ್ರಿ ಹನ್ನೊಂದು ಗಂಟೆ ಸಮಯ ಸುತ್ತಲೂ ಕತ್ತಲೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು ಐದು ಕಿಲೋಮೀಟರ್ ನ ಕಾಡಿನೊಳಗೆ ಯಾರಿಗೂ ಕಾಣಸಿಗದಂತಿರುವ ಜಾಗದಲ್ಲಿ ಕಲ್ಲಿನ ಬಂಡೆಗಳೊಳಗಿನ ಪ್ರದೇಶದಲ್ಲಿ ಒಂದು ದೊಡ್ಡ ಕಟ್ಟಡವನ್ನು ಕಟ್ಟಿರುತ್ತಾರೆ

ಹೊರಗಡೆ ಸುತ್ತಲೂ ಘಾಡ ಕತ್ತಲು ಆವರಿಸಿದ್ದು ಅಲ್ಲಲ್ಲಿ ಒಳಗಡೆ ಮಾತ್ರ  ದೀಪ ಉರಿಯುತ್ತಿದ್ದು ಅದರಲ್ಲಿದ್ದ ಕಳ್ಳರ ಬಾಸ್ ಬಂದು ಜೋರಾಗಿ ಸೈರನ್ ಮಾಡಿದಾಗ  

ಬಾಸ್ ನ ಎಲ್ಲಾ ಸಹಚರರು ಬಿರ ಬಿರನೆ ಬಂದು ಸಾಲಾಗಿ ನಿಲ್ಲುತ್ತಾರೆ

ಅವರ ಬಾಸ್ ಎಲ್ಲರ ಬಳಿ ಬಂದು ಎಲ್ಲರ ಮುಖವನ್ನು ಒಮ್ಮೆ ನೋಡಿ ನಾನು ನಿಮ್ಮನ್ನು ನಂಬಿಕೆಟ್ಟೆ . ನಾನು ಆ ದಿನ ಮುಂಬೈಗೆ ಹೋಗದೆ ವಜ್ರದ ಹರಳುಗಳನ್ನು ನಾನೇ ಪಡೆದು ಹಣ ಕೊಟ್ಟವರಿಗೆ ಕೊಟ್ಟಿದ್ದರೆ ಈಗ ಪಶ್ಚಾತ್ತಾಪ ಪಡುವಂತಿರಲಿಲ್ಲ. ನನ್ನ ಭಂಟ ತಲೆಹರಟೆಯಿಂದ ವಜ್ರದ ಹರಳುಗಳನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ಹೋದ ಛೇ ನನಗೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ ಈಗ ಅದು ಹಳೆ ಕಥೆಯಾಯ್ತು ಈಗ  ವಜ್ರ ಎಲ್ಲಿ ತಂದಿದ್ದೀರಾ? ಬೇಗ ಕೊಡ್ರೋ  ಎಂದು ಜೋರಾಗಿ ಘರ್ಜಿಸಲು

ಬಾಸ್ ನ ಆ ದರ್ಪದ ಮಾತಿಗೆ ನಿಂತಿದ್ದ ಎಲ್ಲರ ಮುಖವೂ ಬಿಳುಚಿಕೊಂಡು ಗಂಟಲು ಒಣಗಿದಂತಾಗುತ್ತದೆ ವಜ್ರ ಸಿಕ್ಕಿಲ್ಲವೆಂದು ಹೇಳುವ ಧೈರ್ಯ ಯಾರಿಗೂ ಇರುವುದಿಲ್ಲ . ಯಾವ ಮುಲಾಜಿಲ್ಲದೆ ತನ್ನ ಬಲಗೈ ಭಂಟನನ್ನೇ ಹೊಡೆದುರುಳಿಸಿದವರಿಗೆ ನಾವು ಯಾವ ಲೆಕ್ಕವೆಂದು ಗಡ ಗಡ ನಡುಗುತ್ತಿರುತ್ತಾರೆ ಮೃತನಾದವನು ಇದ್ದಿದ್ದರೆ ಬಾಸ್ ಎಷ್ಟೇ ಕೋಪಗೊಂಡಿದ್ದರೂ ಹೇಗೋ ಸಮಾಧಾನ ಮಾಡಿರುತ್ತಿದ್ದ ಆದರೆ ಈಗ ಯಾರೂ ಬಾಸ್ ನ ಸಮಾಧಾನ ಮಾಡುವ ಧೈರ್ಯವಿರಲಿ ಎದುರಿಗೆ ನಿಂತು ಮಾತನಾಡಲೂ ಆಗುತ್ತಿರುವುದಿಲ್ಲ ಹೀಗಿರುವಾಗ 

ವಜ್ರ ಸಿಕ್ಕಿಲ್ಲವೆಂದು ಹೇಗೆ ಹೇಳುವುದೆಂದು ತೋಚದೆ ಎಲ್ಲರೂ ಸುಮ್ಮನೆ ನಿಂತಿರುವಾಗ

ಪುನಃ ಅದೇ ಗತ್ತು ಅದೇ ದರ್ಪದಿಂದ ಹ್ಞೂಂ ಯಾಕ್ರೋ ಯಾರೂ ಬಾಯಿ ಬಿಡುತ್ತಿಲ್ಲ ಬಾಯಿ ಬಿಡ್ರೋ ಎಂದಾಗಲಂತೂ    ಎಲ್ಲರಿಗೂ ನಿಂತ ನೆಲವೇ ಕುಸಿದಂತಾಗಿರುತ್ತದೆ. ಯಾರಾದರೂ ವಜ್ರ ಸಿಕ್ಕಿಲ್ಲವೆಂದು ಹೇಳಿದರೆ ಅವರ ಖೇಲ್ ಖತಂ ಆಗುವುದೆಂದು ಮೌನವಾಗಿಯೇ ಇರುತ್ತಾರೆ

ಓ ಹೋ ನಿಮ್ಮ ಮೌನ ನೋಡಿದರೆ ವಜ್ರ ಸಿಕ್ಕಿಲ್ಲವೆಂದು ತಿಳಿಯುತ್ತದೆ . ಬೇಗ ಬಾಯಿ ಬಿಡ್ರೋ      

  ಎಂದರೂ  ಎಲ್ಲರ ಮೌನವೇ ಉತ್ತರವಾಗಿರುತ್ತದೆ

 ನಿಮಗೆ ವಜ್ರ ಸಿಕ್ಕಿಲ್ಲವೆಂದು ನನಗೆ ತಿಳಿದಿದೆ ಆದರೆ ವಜ್ರ ಇಟ್ಟುಕೊಂಡಿರುವವನು ಸಿಕ್ಕಿದ್ದಾನಾ? ಅದನ್ನಾದರೂ ಹೇಳಿ ಎಂದ ತಕ್ಷಣ

ಇಲ್ಲಾ ಬಾಸ್ ಎಂದು ಕಡೆಯಲ್ಲಿ ನಿಂತಿದ್ದ ಒಬ್ಬ ಧೈರ್ಯಮಾಡಿ ಹೇಳಿದಾಗ

ವಾಟ್ ಅವನೂ ಸಿಗಲಿಲ್ಲವೆಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವಾ?  ಇನ್ನೂ ಸಿಕ್ಕಿಲ್ಲವೆಂದು ಹೇಳಿದ್ದು ಯಾರು? ಅವನು ಬಂದು ನನ್ನ ಮುಂದೆ ನಿಲ್ಲಲಿ ಎಂದಾಗಲಂತೂ 

ಉತ್ತರ ಹೇಳಿದವನ ಜೀವ ಬಾಯಿಗೆ ಬಂದಂತಾಗಿದ್ದು ನಡುಗುತ್ತಲೇ ಬಾಸ್ ಮುಂದೆ ಬಂದು ನಿಲ್ಲುತ್ತಾನೆ

ಅವನ ಮುಖ ನೋಡಿದ ತಕ್ಷಣ ಕೋಪದಿಂದ ನೀನೇನಾ ಸಿಕ್ಕಿಲ್ಲವೆಂದು ಧೈರ್ಯವಾಗಿ ನನ್ನ ಮುಂದೆ ಹೇಳಿದ್ದೆಂದು ಘರ್ಜಿಸುತ್ತಾ ಲೇಯ್ ನನಗೆ ಇಲ್ಲ ಎಂಬ ಶಬ್ದ ಆಗುವುದಿಲ್ಲ  ಅಲರ್ಜಿ ಎಂದು ಗೊತ್ತಿಲ್ಲವಾ ಎಂದು ತನ್ನ ಕೈಲಿದ್ದ  ಪಿಸ್ತೂಲನ್ನು ಅವನ ಎದೆಗೆ ನೇರವಾಗಿ ಹಿಡಿದು ಇನ್ನುಮುಂದೆ ಇಲ್ಲ ಆಗಲ್ಲ  ಎಂಬ ಶಬ್ದವನ್ನು ಯಾರಾದರೂ ನನಗೆ ಹೇಳಿದ್ರೋ     ಅವರಿಗೂ ಇದೇ  ಗತಿಯಾಗುತ್ತದೆಂದು  ಹಿಡಿದಿದ್ದ ಪಿಸ್ತೂಲಿನ್ನು ತೋರಿಸಲು 

ಬಾಸ್ ನೇರವಾಗಿ ಅವನಿಗೆ ಶೂಟ್ ಮಾಡಬಹುದೇನೋ ಎಂದು ಎಲ್ಲರೂ ತಿಳಿದುಕೊಂಡಿರುವಾಗ 

ಅವರುಗಳು ಅಂದುಕೊಂಡಂತೆ ಬಾಸ್ ಶೂಟ್ ಮಾಡಿದ ತಕ್ಷಣ ಭಯದಿಂದ

ಎಲ್ಲರೂ ಕಣ್ಣುಮುಚ್ಚಿಕೊಳ್ಳುತ್ತಾರೆ

ಎದುರಿಗೆ ನಿಂತವಂತೂ ತನ್ನ ಕಥೆ ಮುಗಿಯುತೆಂದು ನೋ ಬಾಸ್ ಎಂದು ಚೀರುತ್ತಾನೆ

ಆ ಕ್ಷಣ ಎಲ್ಲರೂ ಕಣ್ಣುಮುಚ್ಚಿ ಪುನಃ ಕಣ್ಣುಮುಚ್ಚಿ ತೆರೆದಾಗ

ಬಾಸ್ ನ ಪಿಸ್ತೂಲಿನ ಗುರಿ ಎದುರಿಗೆ ನಿಂತಿದ್ದವನನ್ನು ಬಿಟ್ಟು ಮೇಲ್ಗಡೆಗೆ ನೆಟ್ಟು ಡಮಾರ್ ಎಂದು ಹೊಡೆದು ಮೇಲಿದ್ದ ಬಲ್ಪ್ ಚೂರು ಚೂರಾಗುತ್ತದೆ 

ಎಲ್ಲರೂ ಕಣ್ಣು ಮುಚ್ಚಿದ್ದರಿಂದ ಯಾರಿಗೂ ತೊಂದರೆಯಾಗುವುದಿಲ್ಲ  ಎಲ್ಲರೂ ಒಬ್ಬೊಬ್ಬರಾಗಿ ಕಣ್ಣು ತೆರೆದು ನೋಡಲು ಬಲ್ಪಿನ ಗಾಜುಗಳು ಎಲ್ಲಾ ಕಡೆ ಹರಡಿರುವುದರಿಂದ ಸದ್ಯ ನಾವು ಈ ದಿನ ಬದುಕಿದೆವೆಂದು ಧೈರ್ಯಗೊಳ್ಳುತ್ತಾರೆ

ಆದರೆ ಬಾಸ್ ಮುಖದಲ್ಲಿ ಕೋಪ ಉಕ್ಕುತ್ತಿದ್ದು ಯಾರೂ ಸಮಾಧಾನ ಮಾಡುವ ಸ್ಥಿತಿಯಲ್ಲಿರುವುದಿಲ್ಲ.


ಪುನಃ ಬಾಸ್ ಮಾತನಾಡಿ ಈ ನಿಮ್ಮ ಮುಖಗಳನ್ನು ನನಗೆ ಪುನಃ ವಜ್ರದ ಹರಳಿನ ಬೆಳಕಲ್ಲಿ ತೋರಿಸಬೇಕು ಇಲ್ಲದಿದ್ದರೆ ನನ್ನ ಬಲಗೈ ಭಂಟನಿಗೆ ಆದ ಗತಿಯೇ ನಿಮಗೂ ಆಗುತ್ತದೆಂದು ಹೇಳುತ್ತಾ ತನ್ನ ಕೋಣೆಗೆ ಹೋದಾಗ 

ಎಲ್ಲರೂ ನಿಟ್ಟುಸಿರು ಬಿಡುವಂತಾಗುತ್ತದೆ


ಡಾ. ಎನ್ ಮುರಳೀಧರ್

ವಕೀಲರು ಹಾಗೂ ಸಾಹಿತಿ

ನೆಲಮಂಗಲ

Image Description

Post a Comment

0 Comments