*ಕುಲಪತಿ ಹುದ್ದೆಗೆ ಅರ್ಹರಾದ ಮಹಿಳಾ ಸಾಧಕಿ
*ಡಾ. ಎನ್ ಲಕ್ಷ್ಮಿ *
ಭಾರತೀಯ ಸಮಾಜವು ಪುರುಷ ಪ್ರಧಾನ ಸಮಾಜ ವಾಗಿದೆ. ಇಲ್ಲಿ ಪುರುಷರಿಗೆ ನೀಡುವ ಸ್ಥಾನಮಾನವನ್ನು ಸಮಾನವಾಗಿ ಮಹಿಳೆಯರಿಗೆ ನೀಡುವುದಿಲ್ಲ.ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ಹಿಂಸಾಚಾರ ಬೆದರಿಕೆ ಅಸಮಾನತೆಗೆ ಒಳಗಾಗುತ್ತಿದ್ದಾರೆ. ವರದಕ್ಷಿಣೆ ಕೌಟುಂಬಿಕ ಹಿಂಸೆ ಲೈಂಗಿಕ ಕಿರುಕುಳ ಇನ್ನೂ ಮುಂತಾದ ಹಲವಾರು ಘಟನೆಗಳಿಗೆ ಒಳಗಾಗುವುದು ಸರ್ವೇಸಾಮಾನ್ಯವಾಗಿದೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನವು ಮಹಿಳೆಯರಿಗೆ ನೀಡಿರುವ ಶಿಕ್ಷಣವು ಭಾರತೀಯ ಸಮಾಜದ ಅನೇಕ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಕಾರಣವಾಗಿದೆ.ಅದರಲ್ಲೂ ಬಡತನದಿಂದ ಬದುಕು ಸವೆಸುತ್ತಿರುವ ಈ ತಳಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗುವುದು ಗಗನ ಕುಸುಮವಾಗಿದೆ.ಅಂತಹ ಸಮುದಾಯ ದ ಗ್ರಾಮೀಣ ಪ್ರದೇಶದಲ್ಲಿ ಜನಿಸಿ ಬಡತನ ಮೂಢನಂಬಿಕೆ ಎಂಬ ಬಲೆಯಲ್ಲಿ ಸಿಲುಕಿ ಬದುಕನ್ನು ಚಾಲೆಂಜ್ ಆಗಿ ತೆಗೆದುಕೊಂಡು ಉನ್ನತ ಶಿಕ್ಷಣವನ್ನು ಪಡೆದು ಗ್ರಾಮೀಣ ಪರಿಸರದಿಂದ ಮಹಾ ನಗರದ ವಿಶ್ವವಿದ್ಯಾಲಯದವರೆಗೂ ಸಾಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಕುಲಪತಿ ಹುದ್ದೆಗೆ ಅರ್ಹತೆ ಪಡೆದಿರುವ ಮಹಿಳಾ ಸಾಧಕಿ ಒಬ್ಬರು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿದ್ದಾರೆ ಅವರೇ ಹೆಸರುಡಾ.ಎನ್ ಲಕ್ಷ್ಮೀಯವರು.
ಪ್ರಸ್ತುತ ಶೈಕ್ಷಣಿಕ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಇವರು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಪುರದಹಳ್ಳಿ ಗ್ರಾಮದ ದಲಿತ ರೈತಾಪಿ ಕುಟುಂಬದ ನರಸಿಂಹಯ್ಯ ಮತ್ತು ರಂಗಮ್ಮ ದಂಪತಿಗಳ ಎಂಟನೆ ಮಗಳಾಗಿ ಜನಿಸಿದರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆ ಮತ್ತು ಸಹೋದರರ ಪ್ರೀತಿಯಲ್ಲಿ ಬೆಳೆದರು. ವಿದ್ಯುತ್ ಸಂಪರ್ಕವಿಲ್ಲದ ಗ್ರಾಮದಲ್ಲಿ ಜನಿಸಿದ ಇವರು ಬುಡ್ಡಿ ದೀಪದ ಬೆಳಕಿನಲ್ಲಿ ಓದಿ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಸಮೀಪದ ಕೋಳಾಲದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನೂ, ತುಮಕೂರಿನ ಶ್ರೀ ಸಿದ್ದಗಂಗಾ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದರು.ಬೆಂಗಳೂರಿನ ಮಹಾರಾಣಿ ಕಲಾ ವಾಣಿಜ್ಯ ಕಾಲೇಜಿನಲ್ಲಿ ಬಿಎ ಪದವಿಯನ್ನು,ಬೆಂಗಳೂರಿನ ಅಂಬೇಡ್ಕರ್ ಬಿಇಡಿ ಕಾಲೇಜಿನಲ್ಲಿ ಬಿಎಡ್ ಪದವಿಯನ್ನು,ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಇ ಡಿ ಎಂ ಫಿಲ್ ಮತ್ತು ಪಿಎಚ್ ಡಿ ಪದವಿಗಳನ್ನು ಪಡೆದರು.ಇವರು ಸ್ವಾವಲಂಬಿ ಜೀವನಕ್ಕಾಗಿ ಉನ್ನತ ಪದವಿ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕೆಲವು ಪ್ರೌಢಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕ ವೃತ್ತಿ ಕೈಗೊಂಡು ಉನ್ನತ ವಿದ್ಯಾಭ್ಯಾಸವನ್ನು ಮುಂದುವರೆಸಿದರು.ಮುಂದೆ ಬಿಎ. ಬಿಇಡಿ. ಎಂ ಎ. ಎಂಇ ಡಿ. ಎಂಫಿಲ್. ಪಿಎಚ್ ಡಿ ಪದವಿಗಳನ್ನು ಮುಗಿಸಿ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ವಿಭಾಗದಲ್ಲಿಕಾಯಂ ಉಪನ್ಯಾಸಕರಾಗಿ ನೇಮಕವಾದರು.ನಂತರ ಈ ವಿಭಾಗ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಎಂದು ಬೇರ್ಪಟ್ಟಾಗ ಅಲ್ಲಿನ ಶಿಕ್ಷಣ ವಿಭಾಗಕ್ಕೆ ವರ್ಗಾವಣೆಗೊಂಡರು ನಂತರ ವಿಭಾಗದ ಮುಖ್ಯಸ್ಥರಾಗಿ ಪ್ರಾಧ್ಯಾಪಕರಾಗಿ ಬಿಒಎಸ್ ಬಿಒಇ ಮಂಡಳಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಜೀವನವನ್ನು ಮೀಸಲಾಗಿಟ್ಟು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.ಶಿಕ್ಷಣ ಕ್ಷೇತ್ರದ ಶಿಕ್ಷಣ ಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಹಾಗೂ ಬೋಧಕರಿಗಾಗಿ ಹಲವು ಮಾರ್ಗದರ್ಶಿ ಮತ್ತು ಅಧ್ಯಯನ ಕೃತಿಗಳನ್ನು ರಚಿಸಿ ಶಿಕ್ಷಣ ಕ್ಷೇತ್ರದ ವಿದ್ವಾಂಸರ ಮೆಚ್ಚುಗೆ ಗಳಿಸಿದ್ದಾರೆ ಇವರ ಕೃತಿಗಳು ಹೀಗಿವೆ.1)ಶಿಕ್ಷಣ ಕಿರಣ ಕನ್ನಡ ಇಂಗ್ಲಿಷ್ಆವೃತ್ತಿ 2)ಪರಿಸರ ಶಿಕ್ಷಣ 3)ಶೈಕ್ಷಣಿಕ ನಿರ್ವಹಣೆ ಮತ್ತು ನಾಯಕತ್ವ 4)ಮಹಿಳಾ ಶಿಕ್ಷಣ 5)ಸಮಾಜ ಶಾಸ್ತ್ರದ ದೃಷ್ಟಿಯಲ್ಲಿ ಶಿಕ್ಷಣ 6)ಶೈಕ್ಷಣಿಕ ಸಂಶೋಧನೆ 7)ತತ್ತ್ವಶಾಸ್ತ್ರದ ದೃಷ್ಟಿಯಲ್ಲಿ ಶಿಕ್ಷಣ 8)ತಾತ್ವಿಕ ಮತ್ತು ಶೈಕ್ಷಣಿಕ ಬುನಾದಿಗಳು 9)ಭಾರತದಲ್ಲಿ ಉನ್ನತ ಶಿಕ್ಷಣ10) ಸಮನ್ವಯ ಶಿಕ್ಷಣ 11)ಮಹಿಳಾ ಸಮಸ್ಯೆಗಳು. ಮುಂತಾದ ಶೈಕ್ಷಣಿಕ ಕೃತಿಗಳನ್ನು ರಚಿಸುವುದರ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.ಇವರು ತಮ್ಮ ಬಳಿಗೆ ಬರುವ ಅನೇಕ ವಿದ್ಯಾರ್ಥಿಗಳ ಕಷ್ಟಗಳಿಗೆ ನೆರವಾಗಿದ್ದಾರೆ.ಬಡವರ ದೀನ ದಲಿತರ ಶೋಷಿತರ ಅಸ್ಪೃಶ್ಯರ ಸಮಾಜದ ಕೆಳವರ್ಗದವರ ತಳಸಮುದಾಯದ ಅಸಹಾಯಕ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿ ಅವರುಗಳು ಉನ್ನತ ಪದವಿಗಳನ್ನು ಪಡೆಯಲು ಸಹಕರಿಸಿದ್ದಾರೆ.ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪ್ರದೇಶದ 30ಜನರು ಎಂಫಿಲ್ ಪದವಿಯನ್ನು, 15ಜನ ಪಿಎಚ್ ಡಿ ಪದವಿಯನ್ನು ಪಡೆದಿದ್ದಾರೆ.ಇವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿದ ಸರ್ಕಾರದ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತ ಸ್ಥಾನಮಾನ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ.ಇವರ ಶೈಕ್ಷಣಿಕ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಸಂದಿವೆ 1)ಕುವೆಂಪು ವಿಶ್ವಮಾನವ ಪ್ರಶಸ್ತಿ 2)ಕನ್ನಡ ರಾಜ್ಯೋತ್ಸವ ಪ್ರಶಸ್ತಿ 3)ಶ್ರೀ ಶಂಕರ ಪ್ರಶಸ್ತಿ 4)ಆದರ್ಶ ಮಹಿಳಾ ಪ್ರಶಸ್ತಿ 5)ನಾಲ್ವಡಿ ಸೇವಾ ಪ್ರಶಸ್ತಿ 6)ನೇಪಾಳದ ಕಟ್ಮಂಡುವಿನ ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಪ್ರಶಸ್ತಿ 7)ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಪ್ರಶಸ್ತಿಮುಂತಾದ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಯಾವುದೇ ಜಾತಿ ಧರ್ಮ ಭಾಷೆಯನ್ನು ನೋಡದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಗೌರವಿಸುವುದು ಇವರ ಗುಣವಾಗಿದೆ. ಸರಳ ಸಜ್ಜನಿಕೆಯ ವ್ಯಕ್ತಿಯೆಂದು ವಿಶ್ವವಿದ್ಯಾಲಯದಲ್ಲಿ ಮನ್ನಣೆ ಗಳಿಸಿದ್ದಾರೆ.
ಇವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಾನು ಅನುಭವಿಸಿದ ಕಷ್ಟ ಹಾಗೂ ಸಮಸ್ಯೆಗಳನ್ನು ನೆನಪಿಸಿಕೊಳ್ಳುತ್ತಾ ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಬಂದ ಹೆಣ್ಣುಮಕ್ಕಳಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿ ಅವರನ್ನು ಪೋಷಿಸಿ ಬೆಳೆಸಿ ರಕ್ಷಿಸಿ ಅವರು ಉನ್ನತ ವಿದ್ಯಾಭ್ಯಾಸ ಪಡೆದು ಸಮಾಜದ ಮುಖ್ಯವಾಹಿನಿಗೆ ತರುವಂತಹ ಹೃದಯವಂತಿಕೆಯನ್ನು ಮೆರೆದಿದ್ದಾರೆ.ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಸಂಬಂಧಿಸಿದಂತೆ 2ಪ್ರಾಯೋಜಿತ ಕಾರ್ಯಕ್ರಮಗಳನ್ನು ಭಾರತ ಸರ್ಕಾರವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ ನಿಮಿತ್ಯ ನೀಡುವ ಅನುದಾನದಲ್ಲಿ ಕೈಗೆತ್ತಿಕೊಂಡಿದ್ದಾರೆ.ಇವರ ಸಂಪಾದಕತ್ವದಲ್ಲಿ ಶಿಕ್ಷಣಶಾಸ್ತ್ರ ವಿಶ್ವಕೋಶ ಕೃತಿಯು ಕನ್ನಡ ಭಾಷೆಯಲ್ಲಿ ಪ್ರಕಟಣೆಯ ಸಿದ್ಧತೆಯಲ್ಲಿದೆ. ಈ ವಿಶ್ವಕೋಶವನ್ನು ಸಾವಿರ ಪುಟಗಳ 3ಸಂಪುಟಗಳಲ್ಲಿ ಹೊರ ತರುವ ಯೋಜನೆಯ ಮಹತ್ವದ ಯೋಜನೆಯಾಗಿದೆ. ಇಂತಹ ಯೋಜನೆಗಳಲ್ಲಿ ಇವರ ಅರ್ಹತೆ ಜ್ಞಾನ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿದೆ.ಅಲ್ಲದೇ ಸರ್ವ ಶಿಕ್ಷಾಅಭಿಯಾನ ಯೋಜನೆಯ ಅನುದಾನದ ಅಡಿಯಲ್ಲಿ 3ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ ಯೋಜನೆಯನ್ನು ಪೂರ್ಣಗೊಳಿಸಿ ವಿಶ್ವವಿದ್ಯಾಲಯದ ಹಾಗೂ ಸರ್ಕಾರದ ಮೆಚ್ಚುಗೆ ಗಳಿಸಿದ್ದಾರೆ.ಅಲ್ಲದೆ ಮೈಸೂರು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಒಂದುತು ಲನಾತ್ಮಕ ಅಧ್ಯಯನ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿರುವ ಪ್ರವೇಶಾತಿ ಶೈಕ್ಷಣಿಕ ವಿಷಯಗಳ 1ಅಧ್ಯಯನ ಮತ್ತು ಚಾಮರಾಜನಗರ ಜಿಲ್ಲೆ ಯ ಹೆಣ್ಣುಮಕ್ಕಳ ದೂರಶಿಕ್ಷಣದ ಪ್ರಯೋಜನ ಒಂದು ಅಧ್ಯಯನ ಮುಂತಾದ ಸಂಶೋಧನಾತ್ಮಕ ಲೇಖನಗಳನ್ನುಫಿಲಿಫೈನ್ಸ್ ಮತ್ತು ಮಲೇಶಿಯಾ ದೇಶಗಳಲ್ಲಿ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನಗಳಲ್ಲಿ ಹಾಗೂ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿ ಗಮನ ಸೆಳೆದಿದ್ದಾರೆ
ತಳ ಸಮುದಾಯದ ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೇ ಇದ್ದಾಗ ಅಂತಹ ಹೆಣ್ಣು ಮಕ್ಕಳಿಗೆ ಕಷ್ಟ ಕಾಲದಲ್ಲಿಯೂ ಕೂಡ ವಿದ್ಯಾಭ್ಯಾಸವನ್ನು ಮಾಡಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂಬ ಮನೋಭಾವವು ಉಳಿದ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ಹಾಗೂ ಆದರ್ಶ ಮಹಿಳೆಯಾಗಿ ಸ್ಫೂರ್ತಿದಾಯಕ ಕೆಲಸಗಳನ್ನು ಮಾಡುತ್ತಿದ್ದಾರೆ.ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಧ್ಯೇಯವಾಕ್ಯದಂತೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರಯದಂತೆ ಎಂಬಂತೆ ಮನೆಯ ಜವಾಬ್ದಾರಿ ಮತ್ತು ವಿಭಾಗದ ಜವಾಬ್ದಾರಿ ಕಛೇರಿ ಜವಬ್ದಾರಿ ಹಾಗೂ ವಿಶ್ವವಿದ್ಯಾಲಯದ ಜವಾಬ್ದಾರಿ ಹೀಗೆ ನಾಲ್ಕಾರು ಜವಾಬ್ದಾರಿಗಳನ್ನು ಸರಿದೂಗಿಸಿಕೊಂಡು ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿರುವ ಡಾ.ಎನ್ ಲಕ್ಷ್ಮೀಯವರನ್ನು ಶೈಕ್ಷಣಿಕ ಸಾಧನೆಯ ಲೇಡಿ ಸಿಂಗಂ ಎಂದರೆ ಅತಿಶಯೋಕ್ತಿಯಾಗಲಾರದು.ತಮ್ಮ ಬದುಕಿನಲ್ಲಿ ಪರಿಸರ ಕಾಳಜಿ ಸಮಯ ಪ್ರಜ್ಞೆ ಶಿಸ್ತು ಇವುಗಳನ್ನು ರೂಢಿಸಿಕೊಂಡಿರುವುದರ ಜೊತೆಗೆ ತಮ್ಮ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಇದೇ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ. ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ”ಓದಿನಿಂದ ಕಲಿತ ಪಾಠಗಳನ್ನು ಮರೆತರೂ ಮರೆಯಬಹುದು ಆದರೆ ಜೀವನದ ಕಷ್ಟಕಾಲದ ಸನ್ನಿವೇಶದಲ್ಲಿ ಅನುಭವಿಸಿದ ಕಲಿತ ಪಾಠಗಳನ್ನು ಮರೆಯಲು ಸಾಧ್ಯವಿಲ್ಲ”ಎಂಬ ಗೌತಮ ಬುದ್ಧನ ಮಾತಿನಂತೆ ಇವರ ಕೊಡುಗೆ ನಮ್ಮ ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಇನ್ನೂ ಹೆಚ್ಚಿನ ಮಟ್ಟದ ಸೇವೆ ಅವರಿಂದ ದೊರಕುವಂತಾಗಲಿ.ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿ ಗ್ರಾಮೀಣ ಪ್ರದೇಶದಿಂದ ಬಂದು ಮಹಾನಗರದ ವಿಶ್ವವಿದ್ಯಾಲಯದ ಮಟ್ಟದ ವರೆಗೂ ಸಾಗಿರುವ ಡಾ. ಎನ್ ಲಕ್ಷ್ಮೀಯವರ ಸೇವೆ ನಿರಂತರವಾಗಿ ಸಾಗಲಿ ಕಳೆದ 3ದಶಕಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಾಮಾನ್ಯ ವಿದ್ಯಾರ್ಥಿಯನ್ನಾಗಿ ನೋಡಿದ ಡಾ.ಎನ್ ಲಕ್ಷ್ಮೀಯವರ ಈ ಸಾಧನೆಯನ್ನು ನೋಡಿ ಆಶ್ಚರ್ಯ ಮತ್ತು ಸಂತೋಷಗಳೆರಡೂ ಏಕಕಾಲದಲ್ಲಿ ಉಂಟಾದವು.ಡಾ ಲಕ್ಷ್ಮೀ ಯವರಂತೆ ನೂರಾರು ಸ್ತ್ರೀಯರು ಇವರಂತೆ ಸಾಧನೆಗೈದು ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಲಿ.
ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ 120 ಜನ ಆಕಾಂಕ್ಷಿಗಳಿದ್ದಾರೆ ಎನ್ನುವಂತಹ ಸುದ್ದಿ ಪತ್ರಿಕೆಗಳಲ್ಲಿ ಹರಿದಾಡುತ್ತಿದೆ. ಕುಲಪತಿಗಳ ನೇಮಕಾತಿಯಲ್ಲಿ ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಇತಿಹಾಸದಲ್ಲೇ ದಲಿತಮಹಿಳೆಯರೊಬ್ಬರು ಕುಲಪತಿಯಾಗಿರುವ ಉದಾಹರಣೆಇಲ್ಲ. ಸಾಮಾಜಿಕ ಸಮಾನತೆಯನ್ನು ಸಾರುವ ಸರ್ಕಾರವು ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ದಲಿತ ಮಹಿಳೆಯರೊಬ್ಬರನ್ನು ಕುಲಪತಿಗಳಾಗಿ ನೇಮಕಾತಿ ಮಾಡಿದರೆ ರಾಜ್ಯದ ಇಡೀ ದಲಿತ ಅಲ್ಪಸಂಖ್ಯಾತಮತ್ತು ಹಿಂದುಳಿದ ವರ್ಗಗಳಿಗೆ ಸಂತೋಷವಾಗುವುದು ಖಂಡಿತ ಎಂದು ನಂಬೋಣ. ಅಂತಹ ಅರ್ಹತೆಯನ್ನು ಪಡೆದ ಮಹಿಳೆಯರು ಸಾಕಷ್ಟು ಜನ ಇದ್ದರೂ ಸಹ ಅದರಲ್ಲೂ ಮೈಸೂರು ವಿಶ್ವವಿದ್ಯಾಲಯದ ಎಜುಕೇಶನ್ ವಿಭಾಗದಲ್ಲಿ ಇದ್ದಾರೆ ಎಂದು ಅನೇಕ ಜನ ಹೇಳುತ್ತಿದ್ದಾರೆ.ಇನ್ನು ವಿಶ್ವವಿದ್ಯಾಲಯಕ್ಕೆ ಕುಲಪತಿಯನ್ನಾಗಿ ನೇಮಕ ಮಾಡಿದರೆ ಸಂವಿಧಾನದಲ್ಲಿ ಅಳವಡಿಸಿರುವ ಸಾಮಾಜಿಕ ಸಮಾನತೆಯನ್ನು ಮತ್ತು ಮಹಿಳಾಪರ ಕಾಳಜಿಯನ್ನು ಕೈಗೊಂಡಂತಾಗುತ್ತದೆ. ಸರಕಾರ ಇತ್ತ ಗಮನಹರಿಸಬೇಕೆಂದು ಅಹಿಂದ ವರ್ಗದವರ ಮನವಿಯಾಗಿದೆ.
(ವಾಟ್ಸಪ್ಅಲ್ಲಿಬಂದಿದ್ದು)ಡಾ ಆರ್ ನಾಗರಾಜು
ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರು 9449527544
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments