*ವಿಜಯಪುರಕ್ಕೆ ಬಸವ ನಾಡು ಜಿಲ್ಲೆ : ಹೆಚ್ಚಿದ ಮರುನಾಮಕರಣ ಬೇಡಿಕೆ*

 *ವಿಜಯಪುರಕ್ಕೆ ಬಸವ ನಾಡು ಜಿಲ್ಲೆ: ಹೆಚ್ಚಿದ ಮರುನಾಮಕರಣ ಬೇಡಿಕೆ*



*ರಾಯಬಾಗ:* ಇತ್ತೀಚೆಗೆ ವಿಜಯಪುರಕ್ಕೆ "ಬಸವ ನಾಡು ಜಿಲ್ಲೆ" ಎಂದು ಹೆಸರು ಇಡಬೇಕು ಎಂದು ಸಾರ್ವಜನಿಕರು ಮಾಧ್ಯಮಗಳ ಮೂಲಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಗಮನಾರ್ಹ. ಹಲವು ವರುಷಗ ಹಿಂದೆಯೇ "ಬಸವ ನಾಡು ಜಿಲ್ಲೆ" ಮಾಡುವಂತೆ ಸರಕಾರಕ್ಕೆ ಹತ್ತಾರು ಅರ್ಜಿಗಳು ರವಾನೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಮೊದಲು ಬಿಜಾಪುರ ಎಂದು ಇದ್ದ ಈ ಹೆಸರು ಕೆಲ ವರ್ಷಗಳ ಹಿಂದೆಯೇ ವಿಜಯಪುರ ಎಂದು ಪರಿವರ್ತನೆ ಆಗಿದೆ. ಇದೀಗ ವಿಶ್ವಗುರು ಶ್ರೀ ಬಸವೇಶ್ವರರು ಹುಟ್ಟಿದ ಈ ಜಿಲ್ಲೆಗೆ "ಬಸವ ನಾಡು ಜಿಲ್ಲೆ" ಎಂದು  ಮರುನಾಮಕರಣಕ್ಕೆ ಸಾರ್ವಜನಿಕರು ತೀವ್ರ ಒತ್ತಡ ಹೇರುತ್ತಿರುವುದು  ಸಹಜ. ಆದರೆ  ಇತ್ತೀಚೆಗೆ ಈ ಭಾಗದ ಸಚಿವರಾದ ಶ್ರೀ ಶಿವಾನಂದ ಪಾಟೀಲ ಅವರು ಈ ಜಿಲ್ಲೆಗೆ ಬಸವ ನಾಡು ಜಿಲ್ಲೆ ಎಂದು  ಹೆಸರು ಇಡಲು ಇದು ಸೂಕ್ತ ಸಮಯವಲ್ಲ;  ಹಾಗೂ ಇದು ಅಸಾಧ್ಯ ಎಂದು ಇತ್ತೀಚೆಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ವರದಿಯಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಎಂ.ಬಿ.ಪಾಟೀಲ ಅವರು "ಅನುಭವ ಮಂಟಪ ಮೂಲಕ ಸಂಸತ್ ನ ಪರಿಕಲ್ಪನೆ ನೀಡಿದ ಬಸವಣ್ಣನವರ ಹೆಸರನ್ನು ಇಡಬೇಕು ಎಂದು ಈ ಭಾಗದ ಜನತೆ  ಅಭಿಮತ ವ್ಯಕ್ತಪಡಿಸುತ್ತಿರುವುದು ಸ್ವಾಭಾವಿಕ. ಈ ಕುರಿತು ಸಿ.ಎಂ.ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ. ವಿಜಯಪುರ ಜಿಲ್ಲೆಗೆ" ಬಸವ ನಾಡು ಜಿಲ್ಲೆ" ಎಂದು ಹೆಸರು  ಇಡಲು ಈ ಭಾಗದ ಸಚಿವಧ್ವಯರು ಪಕ್ಷಾತೀತವಾಗಿ ಪ್ರತಿಷ್ಠೆಯನ್ನು ಬದಿಗಿರಿಸಿ ಒಮ್ಮತದಿಂದ  ಸರಕಾರದ ಮೇಲೆ ಒತ್ತಡ ತರಬೇಕು ಎಂದು ಈ ಭಾಗದ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.


*ವರದಿ:ಡಾ.ಜಯವೀರ ಎ.ಕೆ*.

     *ಖೇಮಲಾಪುರ*

Image Description

Post a Comment

0 Comments