ನಮ್ಮ ಶಾಲೆ ನೆನಪಾದಾಗ ನನಗನಿಸಿದ್ದು ನಮ್ಮ ಶಾಲೆ ನಮ್ಮ ಹೆಮ್ಮೆ.
ನನ್ನ ಎಲ್ಲಾ ಗುರುಗಳಿಗೆ ವಂದಿಸುತ್ತಾ 🙏🙏🙏
ಗುರುಗಳು ಎಲ್ಲಾ ಒಂದೇ ಶಾಲೆ ಹಲವಾರು,
ಗುರುವೃಂದವು ಶಾಲೆಯ ವೃಕ್ಷ ವಾದರೆ,
ಮಕ್ಕಳೆ ಅಲ್ಲಿ ಚಿಗುರುವ ಕರುಳು ಬಳ್ಳಿಗಳು,
ಬೋಧನೆ ಮತ್ತು ಕಲಿಕೆಯಲ್ಲಿ ತಿದ್ದುವ ನಿಮ್ಮ ಕೈಗಳ ವೃತ್ತಿ ಗುಣವಾದರೆ
ಮುಂದಿನ ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ನೀವೇ ಮೊದಲು ಬುನಾದಿ ಹಾಕಿಕೊಟ್ಟ ಮಹಾಗುರುಕುಲವು ಇದನ್ನ
ಪಡೆದವರು ನಾವು ಧನ್ಯರು.
ಚಿಕ್ಕ ಚಿಕ್ಕ ಮಕ್ಕಳ ಪುಟ್ಟ ಪುಟ್ಟ ಹೆಜ್ಜೆ ಗಳನ್ನು ಓಡಾಟಗಳನ್ನು ನೋಡಿ ಲೆಕ್ಕಹಾಕಿ ಇಂತಹ ಮಕ್ಕಳು ಇಂತಿಂತ ಆಟಕ್ಕೆ ಎಂದು ಗುರುತು ಹಿಡಿದು ದೈಹಿಕವಾಗಿ ದೈರ್ಯ ತುಂಬುವ ವಿಜ್ಞಾನಿ ದೈಹಿಕ ಶಿಕ್ಷಕರಿವರು.
ನಾರಾಯಣ ಗುರುಗಳು ದೈಹಿಕ ಶಿಕ್ಷಕರು . ದೈಹಿಕವಾಗಿಯೂ ಮಾನಸಿಕವಾಗಿಯೂ ಚೈತನ್ಯ ತುಂಬುವ ದೈಹಿಕ ಶಕ್ತಿ ಇವರು.
ಆಟಗಳಲ್ಲಿ ಬಿಳುವುದೆಸ್ಟೋ ಹೇಳುವುದು ಎಷ್ಟೋ ಬಾರಿ ಬಿದ್ದಾಗ ತಪ್ಪುಗಳನ್ನು ತಿದ್ದುವರು,
ಸೋತಾಗ ಕೂತು ಹೊಸ ದಾರಿಗಳನ್ನು ತೋರುವರು.
ಗೆಲುವಿನ ಮಾಲೆ ತೊಟ್ಟಗ ಸೋತ ಅನುಭವಗಳನ್ನು ಹಂಚಿಕೊಂಡು ಮುಗುಳು ನಗುತ್ತಾ ಮುಂದಿನ ಭವಿಷ್ಯಕ್ಕೆ ಬೆನ್ನು ತಟ್ಟುವರು.
ದೈಹಿಕವಾಗಿ ಮಾನಸಿಕವಾಗಿ ಧೈರ್ಯ ತುಂಬುವ ದೈಹಿಕ ಶಿಕ್ಷಕರಿವರು.
ಶಿಕ್ಷಣ ಕ್ಷೇತ್ರದಲ್ಲಿ ಓದುವುದೊಂದೆ ಮಾರ್ಗವಲ್ಲ
ಪಾಠ ಎಸ್ಟು ಮುಖ್ಯವೋ ಆಟವು ಮುಖ್ಯ ಎಂಬುವುದು ಸತ್ಯ.
ಪ್ರತಿಯೊಬ್ಬ ಮಕ್ಕಳನ್ನು ತನ್ನ ಮುಂದಿನ ಭವಿಷ್ಯಕ್ಕೆ ಅವರದ್ಯ ಆದ ಜ್ಞಾನಕ್ಕೆ ತಕ್ಕಂತೆ ತಮ್ಮಲ್ಲಿರುವ ಕರುಣೆ ಪ್ರೀತಿ ಮಮತೆ ಅತಿ ಮುಖ್ಯವಾಗಿ ಸಮಯವನ್ನು ನೀಡುವ ಶಾಲೆಯ ನೆಚ್ಚಿನ ಗುರುಗಳೇ ನಮ್ಮ ದೈಹಿಕ ಶಿಕ್ಷಕರಿವರು.
ಪ್ರತಿಯೊಬ್ಬ ಶಿಕ್ಷಕರಿಗೂ ನಾನು ಪಾಠ ಮಾಡುವ ಶಾಲೆ ಹಾಗೆ ಇರಬೇಕು ಹೀಗೆ ಇರಬೇಕು ಎಂಬುವುದು ಕಡಿಮೆ ಅಂದುಕೊಳ್ಳುತ್ತೇನೆ ಆದರೆ ನಮ್ಮ ಗುರುಗಳು ಅದನ್ನ ಮೀರಿಸಿದ್ದಾರೆ.
ಸರ್ಕಾರಿ ಶಾಲೆ ಬದಲಾಗುವುದಿಲ್ಲ ಅಲ್ಲಿನ ಗುರುಗಳು ಬದಲು ಮಾಡಬೇಕು ಮಕ್ಕಳನ್ನು ಶಾಲೆ ಕೈ ಬೀಸಿ ಕರೆಯುವ ಹಾಗೆ ಮಕ್ಕಳು ಶಾಲೆಯನ್ನು ಅಪ್ಪಿಕೊಳ್ಳುವ ಹಾಗೆ ನಮ್ಮ ಶಾಲೆಯನ್ನು ಉಣ್ಣತಿಕರಿಸಿದ ಬಹು ದೊಡ್ಡ ಪಾಲು ದೈಹಿಕ ಶಿಕ್ಷಕರಿಗಿದೆ ಅದಕ್ಕಾಗಿಯೇ ನಮ್ಮ ದೈಹಿಕ ಶಿಕ್ಷಕರಿವರು.
ಓದುವ ಮಕ್ಕಳಿಗೆ ಚೈತನ್ಯ ತುಂಬುವುದಲ್ಲದೆ ದೈಹಿಕವಾಗಿ ಬದಲು ಮಾಡುವುದಲ್ಲದೆ ಶಾಲೆಯನ್ನು ಸಹ ಸದೃಢವಾಗಿ ವರ್ಣರಂಜಿತವಾಗಿ ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಅನ್ನೋದನ್ನ ತೋರುವ ಹಾಗೆ
ಉಣ್ಣತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಯ್ಯನಪುರ. ನಮ್ಮದಾಗಿರುವುದು ನಮ್ಮ ಹೆಮ್ಮೆಯಾಗಿದೆ.
ಶಾಲೆ ಎಂದರೆ ಬದುಕುವ ಮೌಲ್ಯಗಳನ್ನು ತುಂಬುವ ಜ್ಞಾನ ದೇಗುಲವಿದೆ.
ಇಂದು ಶಾಲೆಗೆ ಹೋದ ಮಕ್ಕಳು ನಾಳೆ ನಾಡಿಗೆ ಕೀರ್ತಿ ತರುವ ತರುಣರಾಗುವುದು ಇಲ್ಲೆ.
ನನ್ನ ಒಂದು ಮನವಿ ಇಷ್ಟೇ ಈ ದೇಶದಲ್ಲಿನ
ಕಟ್ಟಕಡೆದಾಗಿ ಶಾಲೆ ಕಾಣದೆ ಇನ್ನೂ ಎಷ್ಟೋ ಮಕ್ಕಳು ಮುಖ್ಯವಾಹಿನಿಗೆ ತಲುಪದ ಮಗುವು ಶಾಲೆಯ ಮೆಟ್ಟಿಲನ್ನು ಹತ್ತಬೇಕು
ಪ್ರತಿಯೊಬ್ಬ ಮಗುವು, ಓದು ಬರಹ ಕಲಿಯಬೇಕು...
ಒಂದು ಶಾಲೆ ತೆರೆಯುವುದು ಎಂದರೆ...
ನೂರು ಗುಡಿ ಚರ್ಚು ಮಸೀದಿ ಮಂದಿರಗಳಿಗೆ ಸಮ ಅಲ್ಲವೇ.
ರಾ.ನಾ.ಮಾಂಕ್...
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments