*ನವ್ಹಂಬರ ಒಂದರಂದು ಕೆಂಪು ಹಳದಿ ಗಾಳಿಪಟ ಉತ್ಸವ*

 *ನವ್ಹಂಬರ ಒಂದರಂದು ಕೆಂಪು ಹಳದಿ ಗಾಳಿಪಟ ಉತ್ಸವ* 

ಕನ್ನಡ ಸಾಹಿತ್ಯ ಪರಿಷತ್ತುˌರಾಯಬಾಗದ ಸಹಯೋಗದಲ್ಲಿ

ಶ್ರೀ ಬೀರೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬೀರಪ್ಪನ ಮಡ್ಡಿ ಹಾರೂಗೇರಿಯಲ್ಲಿ ನವ್ಹಂಬರ  1 ರಂದು ಅಪರಾಹ್ನ 3:೦೦ ಗಂಟೆಗೆ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಹಾರಿಸುವ ಉತ್ಸವ ಆಯೋಜಿಸಲಾಗಿದೆ.ಮಾನ್ಯ ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣವರ ಮತ್ತು ಶ್ರೀಮತಿ ಸಿಂಚನಾ ತಮ್ಮಣ್ಣವರ ಕಾರ್ಯಕ್ರಮ ಉದ್ಘಾಟಿಸುವರು.ಶ್ರೀಯುತ ಡಿ.ಎಸ್.ನಾಯಿಕ ,ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಾರಾಮ ಜೋಗಳೆರವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. *ಕರ್ನಾಟಕ ಸಂಭ್ರಮ 50ˌ*  "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಘೋಷ ವಾಕ್ಯದೊಂದಿಗೆ ಗಾಳಿಪಟಗಳನ್ನು ಆಗಸದಲ್ಲಿ ಹಾರಿಸಿ ಕನ್ನಡ ನಾಡು ನುಡಿ ಸೊಬಗು ಸೊಗಡು ಸಡಗರ ಹೆಚ್ಚಿಸಲು 

ಆಸಕ್ತ ಕನ್ನಡಿಗ ಕನ್ನಡತಿಯರು ಗಾಳಿಪಟದೊಂದಿಗೆ ಹಾಜರಾಗಿ ಕಾರ್ಯಕ್ರಮದ ಯಶಸ್ಸಿನ ಪಾಲುದಾರರಾಗಬೇಕೆಂಧು ಕ.ಸಾ.ಪ ˌರಾಯಬಾಗ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ಹೇಳಿದ್ದಾರೆ.ಆಕರ್ಷಕ ಗಾಳಿಪಟಗಳನ್ನು ಸೃಜಿಸಿದವರಿಗೆ  ಬಹುಮಾನ ನೀಡಿ ಗೌರವಿಸಲಾಗುವುದು.

ಹೆಚ್ಚಿನ ಮಾಹಿತಿಗೆ ನಿಯೋಜಿತ ಪದಾಧಿಕಾರಿ ಸಂತೋಷ ತಮದಡ್ಡಿಯವರನ್ನು( 9591319967)ಸಂಪರ್ಕಿಸಲು ತಿಳಿಸಿದೆ.

ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ 


Image Description

Post a Comment

0 Comments