"ಸೇವಾ ಭದ್ರತೆ ನೀಡದಿದ್ದರೆ ಅನಿರ್ದಿಷ್ಟ ಅವಧಿ ಧರಣಿಗೆ ಸಿದ್ಧ" ಡಾ.ಹನುಮಂತಗೌಡ ಕಲ್ಮನಿ"

 

ಬೆಳಗಾವಿ ವರದಿ
"ಸೇವಾ ಭದ್ರತೆ ನೀಡದಿದ್ದರೆ ಅನಿರ್ದಿಷ್ಟ ಅವಧಿ ಧರಣಿಗೆ ಸಿದ್ಧ" ಡಾ.ಹನುಮಂತಗೌಡ ಕಲ್ಮನಿ

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಆ ನಿರ್ದಿಷ್ಟ ಅವಧಿ ಧರಣಿಗೆ ಸಿದ್ಧ ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾಗಿರುವ  ಡಾ.ಹನುಮಂತ ಗೌಡ ಕಲ್ಮನಿ ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು ಕಳೆದ 15 ,20 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ಹದಿನೈದು ಸಾವಿರ ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದು, ಇವರೆಲ್ಲರೂ ಯೂ.ಜಿ.ಸಿ ಅರ್ಹತೆ, ಸೇವಾ ಹಿರಿತನ ಹೊಂದಿದ್ದು ಎಲ್ಲರಿಗೂ ಸೇವಾ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಕಳೆದ ಸರ್ಕಾರ 10 ತಿಂಗಳ ಪೂರ್ಣ ಅವಧಿಯ ವೇತನ ನೀಡುತ್ತಿತ್ತು. ಆದರೆ ಈ ಸರ್ಕಾರ ಕೇವಲ ಸೆಮೆಸ್ಟ್ರಿಗಳಿಗೆ ಸೀಮಿತಗೊಳಿಸಿ ವೇತನ ನೀಡುವ ಕಾರ್ಯಯೋಜನೆಯನ್ನ ಹಾಕಿಕೊಂಡಿದೆ. ಇದರಿಂದ ಅನೇಕ ಅತಿಥಿ ಉಪನ್ಯಾಸಕರು ಜೀವನ ನಿರ್ವಹಣೆ ಕಷ್ಟವಾಗಿ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಅವರೆಲ್ಲ ಕುಟುಂಬಗಳು ಬೀದಿ ಪಾಲಾಗಿದ್ದು ಅವರಿಗೂ ಸರ್ಕಾರ ಕುಟುಂಬಕ್ಕೆ ನೆರವು ನೀಡಬೇಕು. ಅಷ್ಟೇ ಅಲ್ಲ ಎಲ್ಲಾ ಅತಿಥಿ ಉಪನ್ಯಾಸಕರನ್ನ ಖಾಯಂಗೊಳಿಸಬೇಕು ಎಂದು ಮನವಿ ಮಾಡಿಕೊಂಡರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟ ಅವಧಿ ಧರಣಿ ಮಾಡಲಾಗುವುದೆಂದು ಹೇಳಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೌಖಿಕ ಆದೇಶಗಳನ್ನು ಪ್ರಾಂಶುಪಾಲರಿಗೆ ನೀಡಿ ಅನೇಕ ಕಟ್ಟಪನೆಗಳನ್ನ ಹೇರುತ್ತಿದ್ದಾರೆ ಇದರಿಂದ ಅತಿ ತುಪನ್ಯಾಸ್ಕರಿಗೆ ಮಾನಸಿಕ ಕಿರುಕುಳ ಒತ್ತಡ ಆತ್ಮಸ್ಥೈರ್ಯ ಕುಗ್ಗುತ್ತಿದೆ ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡಲು ಆಗುವುದಿಲ್ಲ. ಇದೇ ರೀತಿ ಮುಂದುವರೆದರೆ ಕಮಿಷನರ್ ಕಚೇರಿ ಮುಂದೆ ಆಯಾ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗಳ ಮುಂದೆ ಧರಣಿ ಹೂಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಪೀಟರ್ ವಿನೋದ ಚಂದ್, ಡಾ.ಚಂದ್ರಶೇಖರ್ ಪಾಯನ್ನವರ, ಡಾಕ್ಟರ್ ಚುಲ್ಕಿ, ಡಾ.ಅಡಿವೆಪ್ಪ ಇಟಗಿ ,ಡಾ. ಸಂಗೋಟಿ, ಡಾ. ಪದ್ಮ ಹೊಸಕೋಟೆ, ಶ್ರೀಮತಿ ಬೋಗಾರ, ದಾ.ಸುನಿಲ್ ಕಾಂಬಳೆ, ಉಂಡೆಗೆ, ಪ್ರೊಫೆಸರ್ ಎ.ಜಿ .ನಸಬಿ ,ಡಾ.ಪಿ.ಆರ್. ಜಾದವ್, ನೀಲಕಂಠ ಭೂಮಣ್ಣವರ , ಪ್ರೊಫೆಸರ್ ರಾಜು ಮಣಿಗಾರ್ ಡಾಕ್ಟರ್ ಮಹಾಂತೇಶ್ ಪಟ್ಟಣಶೆಟ್ಟಿ ಪ್ರೊಫೆಸರ್ ಎಂ ಬಿ ಕೊಪ್ಪದ್ ಮುಂತಾದವರು ಉಪಸ್ಥಿತರಿದ್ದರು

ವರದಿ:ಪ್ರೊ. ನೀಲಕಂಠ ಭೂಮಣ್ಣವರ
ಕನ್ನಡ ಉಪನ್ಯಾಸಕರು 

Image Description

Post a Comment

0 Comments