*ನಾ ಶರಣಾದೆ ಬುದ್ಧನಿಗೆ*
ತೋರಿದಾ ಬುದ್ಧಾ ಶಾಂತಿಯ
ಪಥವಾ,
ನಾ ಶರಣಾದೆ ಬುದ್ಧನಿಗೆ.
ಅರಣ್ಯದಲ್ಲಿ ಇದ್ದನೊಬ್ಬ ಡಕಾಯಿತ,
ಎನ್ನುತ್ತಿದ್ದರು ಆತನಿಗೆ ಅಂಗುಲಿಮಾಲ,
ಮನುಜನನ್ನು ಕೊಲ್ಲುವುದೇ ಆಗಿತ್ತು ಆತನ ಕರ್ಮ,
ಎಲ್ಲ ಕಡೆಯೂ
ಸೃಷ್ಟಿಸಿದ್ದ ತನ್ನ ಭಯವ.
ಬುದ್ಧನ ವಾಣಿಯಿಂದ ಶೀತಲನಾದ,
ಆತ ಶರಣಾದ ಬುದ್ಧನಿಗೆ.
ವೈಶಾಲಿ ನಗರದ, ನಗರ-ವಧು ಅವಳು,
ಹೃದಯದಿ ಮೋಹಿನಿ ಅಂಬ್ರಪಾಲಿನಿಯವಳು.
ಬುದ್ಧರ ಪ್ರವಚನ ಕೇಳಿಹಳು,
ಸುಖ ವಿಲಾಸಿಯ ಜೀವನ ತೊರೆದಿಹಳು,
ಬುದ್ಧನಿಗೆ ಶರಣಾಗಿಹಳು.
ಕಿಸಾಗೌತಮಿ ಧನವುಳ್ಳ ನಾರಿ, ಪುತ್ರಮೃತ್ಯು ಶೋಕದಿ ಹುಚ್ಚಳಾಗಿಹಳು.
ಯಾರಿಲ್ಲ ಇಲ್ಲಿ ಅಮರರು, ಜೀವನ ಇಹುವುದು ನಶ್ವರವು ,
ಸತ್ಯ ಹೊಳೆಯಿತು ಅವಳಿಗೆ, ಬುದ್ಧನ ವಾಣಿಯದಿ,
ಶರಣಾಗಿಹಳು ಬುದ್ಧನಿಗೆ.
ದುಃಖದ ಸಾಗರವೇ ನಮ್ಮ ಜೀವನದ ಪಯಣ,
ಸಾಗಬೇಕಿದೆ ನಾವು ನೀವು
ನೀತಿ ಸಂಯಮದೀ,
ಜನಹಿತ ಸಾಧಿಸುತ್ ಸಾಗೋಣ,
ಇದನೇ ಜಗಕೆ ತಿಳಿ ಹೇಳಿದಾ ತಥಾಗಥಾ,
ಅದಕ್ಕಾಗಿ ಬುದ್ಧನಿಗೆ ನಾ, ಶರಣಾದೇ ಕೈಜೋಡಿಸುತ್ತಾ, ಬುದ್ಧನಿಗೆ ಶರಣಾದೇ ಕೈಜೋಡಿಸುತಾ.
ಜೈಭೀಮ್....👏
ನಮೋ ಬುದ್ಧಾಯ....🙏
✍️✍️✍️✍️...
@ ಅರ್ಜುನ್ ನಿಡಗುಂದೆ.
ಸದಲಗಾ.
9743711213.
➖➖➖➖➖➖➖➖➖➖
👏🏻👏🏻👏🏻🙏🙏🙏👏👏👏😊
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments