*ಮಧುವಣಗಿತ್ತಿ *

 *ಮಧುವಣಗಿತ್ತಿ*


ನೀಲವೇಣಿಯ ನಿಲುವು ಮನ ಮೋಹಕ

ಸೀರೆಯಲಿ ನೀರೆಯ ಚೆಲುವು ಚಿತ್ತಾಕರ್ಷಕ

ನಾಗರ‌ಹಾವಿನಂತ ಉದ್ದನೆಯ ಜಡೆಯ ಸುಂದರಿ

ಮಲ್ಲಿಗೆ ಹೂವನ್ನು ಮುಡಿದಿರುವ ಮಂಜರಿ


ನವ ವಧುವಿನ ಅಲಂಕಾರದ ಷೋಡಶಿ 

ನಲ್ಲನ ನೋಡಲು ಕಾತರದಿ ಪ್ರೇಯಸಿ

ಮದುವೆ ದಿಬ್ಬಣಕ್ಕೆ ಸಿದ್ಧವಾದ ಮಧುವಣಗಿತ್ತಿಯು

ವರನ ಕೂಡಲು ಕನವರಿಸುವ ಕನ್ಯೆಯು


ತವಕದಿ ತುದಿಗಾಲಲ್ಲಿ ನಿಂತಿರುವ ತರುಣಿ

ತನ್ನವನ ನೆನೆದು ಮುದುಡಿದ ಅರಗಿಣಿ

ಸಪ್ತಪದಿ ತುಳಿಯಲು ಸಂಕೋಚದ ಭಾವನೆ

ಇನಿಯನ ವರಿಸುವ ಅತ್ಯದ್ಭುತ ಕಲ್ಪನೆ


ತನುಮನದ ತುಂಬಾ ಅನುರಾಗದ ಆಲಾಪನೆ

ಪ್ರೀತಿಯ ಒಲವಿನ ಅನುಬಂಧಕೆ  ಶುಭಸೂಚನೆ

ಪತ್ನಿಯ ಸ್ಥಾನಕ್ಕೇರುವ ಸಂತಸದ ಸಮಾಚಾರ

ಧೀರ್ಘ ಸುಮಂಗಲಿಯಾಗುವ ಶುಭ ವಿಚಾರ


ಗೀತಾ ಲೋಕೇಶ್. ಕಲ್ಲೂರು


Image Description

Post a Comment

0 Comments