ಕವಿತೆ

 ಕವಿತೆ 


ನಂದನವನದಿ ಮಲ್ಲಿಗೆಯ ಪರಿಮಳವ ಸೂಸುತ ನಿಂತಿರುವ ನಲ್ಲೆ 

ಬಳಿ ಬಂದು ಚೆಲ್ಲಿಬಿಡು 

ನನ್ನ ಅಧರದ ಮೇಲೆ ನಿನ್ನ ಸಿಹಿ ಮುತ್ತುಗಳ ಸರಮಾಲೆ 


ಆಗಸದ ಚಂದಿರನ ತಂಗಾಳಿಯಲಿ 

ತಂಪು ಸೂಸುತ ನಿಂತಿರುವ ನಲ್ಲೆ 

ಹೇಳಿ ಬಿಡು ಒಮ್ಮೆ 

ನನ್ನೊಲವಿನ ಪ್ರೇಮ ಕವಿತೆಗಳ ಕುಳಿತು ಕೇಳುವೆ 


ಕಾನನದಿ ವನಸುಮದ ಪರಿಮಳವ 

ಸೂಸುತ ನಿಂತಿರುವ ನನ್ನ ನಲ್ಲೆ 

ನನ್ನ ಸನಿಹ ಬಂದು ದೂರು ನೀಡಿ ಬಿಡು 

ವಿಚಾರಣೆ ನಡೆಸಿ ನ್ಯಾಯ ಕೊಡಿಸುವೆ ನಲ್ಲೆ 


ಇರುಳಿನಲಿ ಮಿನುಗುವ ನಕ್ಷತ್ರಗಳ 

ಕಾಂತಿಯಲಿ ಪ್ರೇಮ ಸೂಸುತ ನಿಂತಿರುವ ನಲ್ಲೆ 

ರಾತ್ರಿಯ ನೀರವ ಮೌನದಲಿ 

ಅಪ್ಪುಗೆಯ ಸುಖ ನೀಡಿ 

ಮನವ  ತಣಿಸು ಬಾ ನಲ್ಲೆ 

ಮನವ  ತಣಿಸು ಬಾ ನಲ್ಲೆ 


✍️✍️ ಶಿವಕುಮಾರ ಕೋಡಿಹಾಳ


Image Description

Post a Comment

0 Comments