ಗಗನ ಕುಸುಮ (ಕಾದಂಬರಿ) ಸಂಚಿಕೆ-೭೦
ಹಿಂದಿನ ಸಂಚಿಕೆಯಲ್ಲಿ
ತನ್ನ ತಂದೆಯನ್ನು ನೀನೇ ವಿಚಾರಿಸೆಂದು ಗಗನ ಸಂಜಯನಿಗೆ ಹೇಳಿರುತ್ತಾಳೆ
ಕಥೆಯನ್ನು ಮುಂದುವರೆಸುತ್ತಾ
ತನ್ನ ತಂದೆಯನ್ನು ನೀನೇ. ವಿಚಾರಿಸೆಂದು ಗಗನ ಸಂಜಯನಿಗೆ ಹೇಳಿದ್ದರೂ ಒಂದು ವಾರದ ನಂತರ ಗಗನ ಮುಂಬೈಯಿಂದ ಬರುತ್ತಾಳೆ ಅವಳೇ ವಿಚಾರಿಸಲೆಂದು ಸಂಜಯ ಸುಮ್ಮನಾಗುತ್ತಾನೆ
ಮಾರನೇ ದಿನ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಸಂಜಯ ತಾನು ಮಾಡುತ್ತಿದ್ದ ಪ್ರಾಜೆಕ್ಚನ್ನು ವೀಕ್ಷಿಸುತ್ತಿರುವಾಗ ಅವನ ಸ್ನೇಹಿತ ಚೇತನ್ ಫೋನ್ ಮಾಡಿ ತಕ್ಷಣ ತನ್ನ ಪ್ರಾಜೆಕ್ಟ್ ಪರಿಶೀಲಿಸಬೇಕೆಂದಾಗ
ತಕ್ಷಣ ಸಂಜಯನು ತನ್ನ ಸ್ನೇಹಿತ ಕಟ್ಟಿಸುತ್ತಿದ್ದ ಪ್ರಾಜೆಕ್ಟ್ ಬಳಿ ಹೋಗಿ ಏನೆಂದು ಚೇತನನ್ನು ವಿಚಾರಿಸಲು
ಪ್ರಾಜೆಕ್ಟ್ ನ ಕಟ್ಟಡ ಪೂರ್ಣಗೊಂಡಿದ್ದು ಇಂಟೀರಿಯರ್ ಡೆಕೋರೇಷನ್ ಮಾಡಬೇಕಾಗಿದೆ ನಿನಗೆ ಪರಿಚಯವಿರುವ ಯಾರನ್ನಾದರೂ ಹೇಳೆಂದಾಗ
ಸಂಜಯನು ಕೆಲವು ಕಂಪೆನಿಗಳ ಹೆಸರು ಹೇಳಿ ಅದರ ಮೆಟೀರಿಯಲ್ ಖರೀದಿಸೆಂದು ಸಲಹೆ ನೀಡಿ ನಂತರ ಐವತ್ತು ಕೋಟಿ ಪ್ರಾಜೆಕ್ಟ್ ಏನಾಗಿದೆಯೆಂದು ಕೇಳಲು
ಇದೇನು ಸಂಜಯ್ ಈಗ ಕೇಳುತ್ತೀಯಲ್ಲಾ ಅದಾಗಲೇ ಯಾರಿಗೋ ಪ್ರಾಜೆಕ್ಟ್ ಸಾಂಕ್ಷನ್ ಆಗಿದೆ ಈಗಾಗಲೇ ಪಾಯ ತೆಗೆದಿರಬಹುದೆಂದಾಗ
ಸಂಜಯ ಇಲ್ಲಾ ಕಣೋ ಚೇತನ್ ಅದರ ಜಮೀನು ಡಿಸ್ ಪ್ಯೂಟಾಗಿ ಕೋರ್ಟಿನಲ್ಲಿದೆಯಂತೆ
ಯಾರು ನಿನಗೆ ಹೇಳಿದ್ದು?
ಗಗನಳೇ ಹೇಳಿದಳಪ್ಪಾ
ಅವಳಿಗೂ ಗೊತ್ತಿಲ್ಲ ಎನಿಸುತ್ತದೆ
ನಿನ್ನೆ ರಾತ್ತಿ ಕೂಡಾ ವಿಚಾರ ಮಾಡ್ದೆ ಇದನ್ನೇ ಹೇಳಿದ್ಲು ಎನ್ನಲು
ಸ್ವಲ್ಪ ಇರು ಎನ್ನುತ್ತಾ ತಕ್ಷಣ ತನ್ನ ಸ್ನೇಹಿತನಿಗೆ ಫೋನ್ ಮಾಡಿ ವಿಚಾರಿಸಿದಾಗ
ಅದು ಮುಂಬೈರವರಿಗೆ ಅಲಾಟ್ ಆಯ್ತಂತೆ ಎನ್ನಲು
ಓ ಹೌದಾ ಥ್ಯಾಂಕ್ಸ್ ಫಾರ್ ಯುವರ್ ಇನ್ಫರ್ ಮೇಷನ್ ಎಂದು ಫೋನ್ ಕಟ್ ಮಾಡಿ ಸಂಜಯನಿಗೆ ವಿಷಯ ತಿಳಿಸಿದಾಗ
ಕಂಪೆನಿ. ವಿಳಾಸ ತಿಳಿದುಕೋ ಎಂದು ಪುನಃ ಹೇಳಲು
ಅವನ ಸ್ನೇಹಿತ ಕಂಪೆನಿಯ ಹೆಸರು ಲಕ್ಕಿ ಡೆವಲಪರ್ಸ್ ಗೆ ಅಲಾಟ್ ಆಗಿದೆಯಂತೆ ಎನ್ನಲು
ಓ ಮೈ ಗಾಡ್ ಗಗನ ನನಗೇಕೆ ಸುಳ್ಳು ಹೇಳಿದ್ದಾಳೆಂದು ತಕ್ಷಣ ಗಗನಳಿಗೆ ಫೋನ್ ಮಾಡಿದಾಗ
ಹಲೋ ಸಂಜಯ್ ಏನು ಇವತ್ತು ಇಷ್ಚು ಬೇಗ ಫೋನ್ ಮಾಡಿದ್ದೀಯಲ್ಲಾ?
ಗಗನಾ ನನಗೊಂದು ಇನ್ ಫರ್ಮೇಷನ್ ಬೇಕಿತ್ತು
ಏನು ಬೇಕು ಕೇಳು ಸಂಜಯ್
ಐವತ್ತು ಕೋಟಿ ರೂಪಾಯಿ ಪ್ರಾಜೆಕ್ಟ್ ಮುಂಬೈರವರಿಗೆ ಅಲಾಟ್ ಆಯ್ತಂತೆ ನಿನಗೆ ಗೊತ್ತಾಗಲಿಲ್ಲವಾ?
ಯಾರು ಹೇಳಿದ್ದು ಸಂಜಯ್?
ಚೇಕನ್ ಹೇಳ್ದಾ ಮುಂಬೈನವರಿಗೆ ಅಲಾಟ್ ಆಗಿದೆಯಂತೆ ಅವರಾಗಲೇ ಪಾಯ ತೋಡಿದ್ದಾರಂತೆ ಎನ್ನಲು
ಗಗನ ನಗುತ್ತಾ ಸಂಜಯ್ ನಿನ್ನ ಬುದ್ದಿಗೆ ಏನು ಹೇಳಲಿ? ಐವತ್ತು ಕೋಟಿ ಪ್ರಾಜೆಕ್ಟ್ ಅದೊಂದೇನಾ ಇರೋದು? ಆ ರೀತಿಯದ್ದು ನಾಲ್ಕು ಇವೆ ಒಂದು ಮುಂಬೈನವರಿಗೆ ಅಲಾಟ್ ಆಗಿರಬಹುದು ನಿನ್ನ ಅಪ್ಲಿಕೇಶನ್ ರಿಜೆಕ್ಟ್ ಆಗಿದೆಯೆಂದು ಮೆಸೇಜ್ ಬಂದಿದೆಯಾ?
ಇಲ್ಲಾ ನನಗೇನೂ ಮೆಸೇಜ್ ಬಂದೇ ಇಲ್ಲಾ ಗಗನಾ
ಹಾಗಾದರೆ ವಿಚಾರ ಮಾಡಿ ಹೇಳುತ್ತೇನೆ ಸಂಜಯ್
ಓ ಕೆ ಎಂದು ಹೇಳಿ ಫೋನ್ ಕಟ್ ಮಾಡಿ ಇನ್ನೂ ಅಲಾಟ್ ಆಗಿಲ್ಲವಂತೆ ಚೇತನ್ ಎನ್ನಲು
ಓ ಹೌದಾ ಇದ್ದರೂ ಇರಬಹುದು ಅವರಲ್ಲಿ ಎಷ್ಟು ಪ್ರಾಜೆಕ್ಟ್ ಇರುತ್ತದೋ ಯಾರಿಗೆ ಗೊತ್ತು ಅಲ್ಲವಾ ಸಂಜಯ್
ಹೌದು ಚೇತನ್ ನೋಡೋಣ ಎಂದು ಹೇಳಿ ನೇರವಾಗಿ ಆ ಕಂಪೆನಿಗೆ ಫೋನ್ ಮಾಡಿ ತಿಳಿದುಕೊಳ್ಳುತ್ತೇನೆಂದು ಕಂಪೆನಿಗೆ ಫೋನ್ ಮಾಡಿದಾಗ
ಆ ಕಡೆಯಿಂದ ರಿಸೆಪ್ಷನಿಷ್ಟ್ ಮಾತಾಡಿ ಹಲೋ ಎನ್ನಲು
ಸಂಜಯ ಪ್ರಾಜೆಕ್ಟ್ ಬಗ್ಗೆ ಕೇಳಿದಾಗ
ಒಂದು ನಿಮಿಷವೆಂದು ಹೇಳಿ ಪ್ರಾಜೆಕ್ಟ್ ಅಲಾಟ್ ಮೆಂಟ್ ಸೆಕ್ಷನ್ ಗೆ ಫೋನ್ ಕನೆಕ್ಟ್ ಮಾಡಿ ಈಗ ನೀವು ಪ್ರಾಜೆಕ್ಟ್ ಬಗ್ಗೆ ಮಾತನಾಡಿ ಎನ್ನಲು
ಪ್ರಾಜೆಕ್ಟ್ ಸೆಕ್ಷನ್ ನಿಂದ ಹಲೋ ಎನ್ನಲು
ಸಂಜಯ ತನ್ನ ಪರಿಚಯ ಹೇಳಿ ಪ್ರಾಜೆಕ್ಟ್ ಬಗ್ಗೆ ಕೇಳಲು
ನಿಮಗೇನೂ ಇನ್ ಫರ್ಮೇಷನ್ ಬಂದಿಲ್ಲವಾ ಎಂದಾಗ
ಇಲ್ಲಾ ಸಾರ್ ಎನ್ನುತ್ತಾನೆ
ಅಪ್ಲಿಕೇಶನ್ ಹಾಕಿದವರೆಲ್ಲರಿಗೂ ಮೆಸೇಜ್ ಕಳಿಸಿದ್ದೇವೆ ನಿಮಗೆ ಬಹುಷಃ ಮಿಸ್ ಆಗಿರಬೇಕು ಆ ಪ್ರಾಜೆಕ್ಟ್ ಲಕ್ಕಿ ಡೆವಲಪರ್ಸ್ ಮುಂಬೈನವರಿಗೆ ಅಲಾಟ್ ಆಗಿದೆ ನಿಮ್ಮ ಡಿಪಾಜಿಟ್ ಅಮೌಂಟ್ ಕಳುಹಿಸಿಕೊಡುತ್ತೇನೆಂದಾಗ
ಸಂಜಯನಿಗೆ ಅಲ್ಲೇ ಕುಸಿದು ಬೀಳುವಂತಾಗುತ್ತದೆ
ಗಗನಳ ಮೇಲೆ ಕೋಪ ಬಂದರೂ ಅವಳು ನಾಳೆ ನನ್ನ ಮದುವೆಯಾಗುವವಳು ಮದುವೆಯಾದ ನಂತರ ಇದಕ್ಕಿಂತ ದೊಡ್ಡ ಪ್ರಾಜೆಕ್ಟ್ ಸಿಗಬಹುದು ನಾನೇಕೆಅವಳಲ್ಲಿ ನಿಷ್ಠೂರವಾಗಲೆಂದು ಸುಮ್ಮನಾಗಿ ಚೇತನ್ ನಾನಿನ್ನು ಹೊರಡುತ್ತೇನೆಂದು ಹೇಳಿ ಮನೆಗೆ ಬಂದು ರಾತ್ರಿ ಹನ್ನೊಂದು ಗಂಟೆಗೆ ಮಾಮೂಲಿಯಂತೆ ಗಗನಳಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ
ಐ ಆಮ್ ಸಾರಿ ಸಂಜಯ್ ನನಗೆ ಸರಿಯಾಗಿ ಮಾಹಿತಿ ಸಿಕ್ಕಿಲ್ಲಾ
ಓ ಕೆ …..ಓ ಕೆ …ಗಗನಾ ಇದು ಹೋಗಲಿ ಈಗ ಮದುವೆ ವಿಷಯ ಏನು ಮಾಡಿದೆ?
ನಾನು ಬೆಂಗಳೂರಿಗೆ ಬಂದು ನನ್ನ ತಂದೆಯನ್ನು ಕೇಳಿ ನಿನಗೆ ವಿಚಾರ ತಿಳಿಸುತ್ತೇನೆ ಸಂಜಯ್ ಎಂದಾಗ
ಆದಷ್ಟೂ ಬೇಗ ಸಿಹಿ ಸುದ್ದಿ ತಿಳಿಸೆಂದು ಫೋನ್ ಕಟ್ ಮಾಡುತ್ತಾನೆ
ಮಾರನೇ ದಿನ ಕುಸುಮ ಎಂ ಜಿ ರಸ್ತೆಯಲ್ಲಿರುವ ಕಂಪೆನಿಗೆ ಹೋಗಿ ಆಡಿಟ್ ಕೆಲಸ ಮಾಡುತ್ತಿದ್ದು ಊಟದ ವೇಳೆಯಲ್ಲಿ ಪಕ್ಕದ ಹೋಟೆಲ್ ಗೆ ಊಟ ಮಾಡುತ್ತಿರುವಾಗ ಅಲ್ಲಿಗೆ ಊಟ ಮಾಡಲು ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಆಡಿಟ್ ಕಂಪೆನಿಯ ಸಿಬ್ಬಂದಿ ಬಂದು ಇವಳನ್ನು ನೋಡಿ ಹಲೋ ಕುಸುಮ ನೀವಿಲ್ಲಿ ಎನ್ನಲು
ಕುಸುಮಳಿಗೂ ಆಶ್ಚರ್ಯವಾಗಿ ಹಲೋ ಸರಳಾ ನಿಮ್ಮನ್ನು ನೋಡಿ ಸಂತೋಷವಾಯಿತು ಎನ್ನುತ್ತಾ ನಾನು ಪಕ್ಕದ ಕಂಪೆನಿಯಲ್ಲಿ ಆಡಿಟ್ ಮಾಡುತ್ತಿದ್ದೇನೆ
ಓ ಹೋ ನೀವು ಸಿ ಎ ಮಾಡಿದ್ದೀರಾ?
ಹೌದು ನೀವು
ನಾನೂ ಕೂಡಾ ಸಿಎ ಮಾಡಿದ್ದೇನೆ ನಮ್ಮ ಆಫೀಸ್ ಇಲ್ಲೇ ಸ್ವಲ್ಪ ದೂರದಲ್ಲಿದೆ ಎಂದು ಇಬ್ಬರೂ ಹಳೆಯ ಘಟನೆಗಳನ್ನು ಜ್ಞಾಪಿಸಿಕೊಂಡು ಊಟ ಮಾಡಿ ಹೊರಗೆ ಬಂದು
ನಾನಿನ್ನು ಬರುತ್ತೇನೆ ಪುನಃ ನಾಳೆ ಸಿಗೋಣವೆಂದು ಹೇಳಿ ಆಡಿಟ್ ಮಾಡುತ್ತಿದ್ದಲ್ಲಿಗೆ ಬರುತ್ತಾಳೆ
ಇದೇ ರೀತಿ ದಿನವೂ ಊಟದ ವೇಳೆಯಲ್ಲಿ ಕುಸುಮ ಅವಳ ಸ್ನೇಹಿತೆ ಸರಳ ಒಂದೇ ಹೋಟೆಲ್ ನಲ್ಲಿ ಮಾತಾಡುತ್ತಾ ಊಟ ಮಾಡಿ ಹೋಗುತ್ತಿದ್ದು ಒಂದು ದಿನ ಸರಳ ಕುಸುಮಳನ್ನು ತನ್ನ ಆಡಿಟ್ ಕಂಪೆನಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಸಿಬ್ಬಂದಿಯನ್ನು ಪರಿಚಯಿಸಿ ತನ್ನ ಸೀಟಿನ ಬಳಿ ಕರೆದೊಯ್ದು ಮಾತನಾಡಿಸುತ್ತಿರುವಾಗ
ಕುಸುಮ ಮಾತನಾಡಿ ಯಾವ ಯಾವ ಕಂಪೆನಿಗಳಿಗೆ ಆಡಿಟ್ ಮಾಡಿ ಕೊಡುತ್ತಿದ್ದೀಯಾ ಸರಳಾ ಎನ್ನಲು ಕಂಪೆನಿ ಹೆಸರೆಲ್ಲಾ ಹೇಳುತ್ತಾಳೆ
ಮೇಜಿನ ಪಕ್ಕದಲ್ಲಿ ಇಟ್ಚಿದ್ದ ಕಡತ ನೋಡಿ ಇದೇನು
ಗಗನ ಹೆಸರಿನ ಕಂಪೆನಿಗೂ ಆಡಿಟ್ ಮಾಡುತ್ತಿದ್ದೀಯಾ
ಮಾಡುತ್ತಿದ್ದೆವು ಈಗ ಬಿಟ್ಟಿದ್ದೇವೆ
ಗಗನ ಕಂಪೆನಿ ಎಂದರೆ ನಮ್ಮ ಜೊತೆಯಲ್ಲಿ ಓದುತ್ತಿದ್ದಳಲ್ಲಾ ಅವಳೇನಾ?
ಹೌದು ಕುಸುಮ ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಕೊಂಡು ಡಿಬಾರ್ ಆಗಿದ್ದಳಲ್ಲಾ ಅವಳೇ ಗಗನಾ
ಓ ಪರವಾಗಿಲ್ಲವೇ ಒಳ್ಳೆಯ ದೊಡ್ಡ ಕಂಪೆನಿ ಹಿಡಿದಿದ್ದೀಯಾ?
ಹೆಸರಿಗೆ ದೊಡ್ಡ ಕಂಪೆನಿಯಷ್ಟೇ
ಏಕೆ ಹಾಗೆನ್ನುತ್ತೀಯಾ?
ಇನ್ನೇನು ಹೇಳಲಿ? ಎಲ್ಲಾ ಕಳ್ಳ ಲೆಕ್ಕವೇ ಅವರದ್ದು ನಮಗಂತೂ ಪ್ರತಿವರ್ಷವೂ ಅವರ ಕಂಪೆನಿಯದ್ದೇ ತಲೆನೋವಾಗಿತ್ತು ಕುಸುಮಾ ಈಗ ಆ ಕಂಪೆನಿ ಆಡಿಟ್ ಮಾಡೋದನ್ನು ಬಿಟ್ಟಿದ್ದೇನೆ
ಏಕೆ ಏನಾಯ್ತು?
ಅವರ ಕಂಪೆನಿ ಸರಿಯಾಗಿ ಆಡಿಟ್ ಮಾಡಿದರೆ ಗಗನಳ ಅಪ್ಪ ಜೈಲಿಗೆ ಹೋಗುವುದು ಗ್ಯಾರಂಟಿ ಕುಸುಮ ಎಂದ ತಕ್ಷಣ
ಅಂತಾದ್ದೇನು ಮುಚ್ಚಿಟ್ಟಿದ್ದಾರೆ?
ಅವರದ್ದು ಎಲ್ಲವೂ ಕಳ್ಳಲೆಕ್ಕವೇ ಹೆಸರಿಗೆ ಮಾತ್ರ ದೊಡ್ಡ ಕಂಪೆನಿ ಅಷ್ಟೇ ಕುಸುಮಾ ನಮಗೆ ಸುಳ್ಳು ಆಡಿಟ್ ಮಾಡಲಾಗುವುದಿಲ್ಲವೆಂದು ಆ ಕಂಪೆನಿಯನ್ನೇ ಬಿಟ್ಟು ಬಿಟ್ಟೆವು
ಒಳ್ಳೆ ಕೆಲಸ ಮಾಡಿದ್ರೀ ಅವರಿಗೆ ಬುದ್ದಿ ಕಲಿಸಬಹುದಿತ್ತಲ್ಲಾ ಸರಳಾ
ನಮ್ಮ ಬಾಸ್ ಒಪ್ಪಲಿಲ್ಲ ಆಡಿಟ್ ಮಾಡೋದೇ ಬೇಡವೆಂದು ಡಿಸೈಡ್ ಮಾಡಿದ್ರು
ಈಗ ನನಗೊಂದು ಉಪಕಾರ ಮಾಡುತ್ತೀಯಾ?
ಏನು ಹೇಳು ಕುಸುಮಾ
ಆ ಗಗನಳ ಕಂಪೆನಿಯ ವ್ಯಯಹಾರದ ವಿವರ ನನಗೆ ಕೊಡುತ್ತೀಯಾ?
ನಿನಗೇಕೆ ಕುಸುಮ ಎನ್ನಲು
ಕುಸುಮ ನಡೆದ ಕಥೆಯನ್ನೆಲ್ಲಾ ಹೇಳಿದಾಗ
ಅಯ್ಯೋ ವೆರಿ ಸಾರಿ ಕುಸುಮಾ ಆ ಗಗನ ಇನ್ನೂ ನಿನ್ನ ಮೇಲೆ ಸೇಡು ಬಿಟ್ಟಿಲ್ಲವಾ?
ಇಲ್ಲಾ ಸರಳಾ ನನಗೆ ನನ್ನ ಗಂಡನಿಂದ ಡೈವೋರ್ಸ್ ಕೊಡಿಸಿದಳು ಈಗ ನನ್ನ ಮಕ್ಕಳ ಮೇಲೆ ಕಣ್ಣು ಹಾಕಿದ್ದಾಳೆ
ಓ ಹೌದಾ ಕುಸುಮಾ ಅವಳಿಗೆ ಅವಳಪ್ಪನಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಕುಸುಮಾ
ಈಗ ಒಂದು ಉಪಕಾರ ಮಾಡುತ್ತೀಯಾ?
ಏನು ಮಾಡಲಿ ಹೇಳು
ಇಲ್ಲಿರುವ ಗಗನ ಕಂಪೆನಿಯ ಫೈಲ್ ಕೊಡುತ್ತೀಯಾ?
ಇದನ್ನು ಅವರಿಗೆ ವಾಪಸ್ ಕೊಡಬೇಕು ಗಗನಾ
ಒಂದು ಕೆಲಸ ಮಾಡ್ತೇನೆ ಇದರಲ್ಲಿರುವ ಕೆಲವು ದೊಡ್ಡ ದೊಡ್ಡ ವ್ಯವಹಾರದ ಡೀಟೈಲ್ಸ್ ಕೊಡುತ್ತೇನೆ
ಆದರೆ ಎಲ್ಲೂ ನಮ್ಮ ಕಂಪೆನಿಯ ಹೆಸರಾಗಲೀ ನಮ್ಮಗಳ ಹೆಸರಾಗಲೀ ಹೊರಗೆ ಬರಬಾರದು
ನನಗೆ ಗೊತ್ತಿಲ್ಲವಾ ಸರಳಾ ನೀನು ವ್ಯವಹಾರದ ಡೀಟೈಲ್ಸ್ ಕೊಟ್ಟರೆ ಅವರಿಗೆ ಸರಿಯಾಗಿ ಬುದ್ದಿ ಕಲಿಸುತ್ತೇನೆ
ಜೋಪಾನ ಕುಸುಮಾ ಆ ಮನುಷ್ಯ ಒಳ್ಳೆಯವನಲ್ಲಾ ರೌಡಿಗಳನ್ನು ಇಟ್ಟುಕೊಂಡಿದ್ದಾನಂತೆ
ಯಾರಿಗೂ ತಿಳಿಯದಂತೆ ತೆರೆಮರೆಯ ಹಿಂದೆ ಕೆಲಸ ಮಾಡುತ್ತೇನೆ
ಆದರೂ ಜೋಪಾನ ಕುಸುಮಾ
ನಾನು ಅವರ ಕೆಲವು ಅವ್ಯವಹಾರ ನಡೆದಿರುವುದನ್ನು ಕೊಟ್ಟರೆ ಪೂರ್ತಿಯಾಗಿ ಎನ್ ಕ್ವೈರಿ ಮಾಡುತ್ತಾರೆ ಇದರಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೋ ನೋಡುತ್ತೇನೆ ಎಂದು ಹೇಳಿ ಗಗನ ಕಂಪೆನಿಯ ಹಲವಾರು ವ್ಯವಹಾರಗಳ ಡೀಟೈಲ್ಸ್ ಪಡೆದು ತಾನು ಆಡಿಟ್ ಮಾಡುತ್ತಿದ್ದ ಕಂಪೆನಿಗೆ ವಾಪಸ್ಸಾಗುತ್ತಾಳೆ
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments