ಒಂದು ಕೈಯಲ್ಲಿ ಮಹಿಷಾಸುರ ಫೋಟೋ ಇರಲಿ ಇನ್ನೊಂದು ಕೈಯಲ್ಲಿ ಗಟ್ಟಿಕೋಲಿನ ನೀಲಿ ಬಾವುಟ ವಿರಲಿ, ಹೆಗಲ ಮೇಲೆ ನೀಲಿ ಶಾಲುಇರಲಿ, ಬಾಯಲ್ಲಿ ಜೈಭೀಮ್ ಘೋಷಣೆ ಮೊಳಗುತ್ತಿರಲಿ, ಎದೆಯಲ್ಲಿ ಬುದ್ಧನ ಕರುಣೆಯಿರಲಿ, ಮನದಲ್ಲಿ ಅಣ್ಣ ಬಸವನ ಒಲವಿರಲಿ, ತೋಳಲ್ಲಿ ಸಿದ್ಧನಾಕ ಟಿಪ್ಪುವಿನ ಬಲವಿರಲಿ, ಕಣ್ಣಲ್ಲಿ ನಾಲ್ವಡಿಯವರ ಕನಸಿರಲಿ, ಮೆದುಳಲ್ಲಿ ಕುವೆಂಪು ಕ್ರಾಂತಿಯಕಂಪಿರಲಿ,ಮೈಮನಪೂರ ಬಾಬಾಸಾಹೇಬರೇ ಆವರಿಸಿರಲಿ.ಸುತ್ತಮುತ್ತ ಸಂವಿಧಾನದ ಪ್ರಭೆಯಿರಲಿ
ಭೋರ್ಗರೆದು ಬಂದುಬಿಡಿ ಬಂಧುಗಳೇ ನಾಳಿದ್ದು ಮೈಸೂರಿಗೆ ಅಕ್ಟೋಬರ್ ಹದಿಮೂರಕ್ಕೆ. ನಮ್ಮ ಪೂರ್ವಿಕ ಮಹಿಷನ ಅಸ್ಮಿತೆಯ ಮರು ಅಚ್ಚೊತ್ತೋಣ. ಪಾದಗಳ ಒಂದೊಂದು ಹೆಜ್ಜೆಹೆಜ್ಜೆಯಲ್ಲೂ ಸಾವಿರದ ಚರಿತ್ರೆಯ ಬರೆದುಬರೋಣ.
ಸರ್ಕಾರ ನಮ್ಮ ಪರ ಇರದಿದ್ದರೇನಂತೆ..? ನಾವೇ ಸರ್ಕಾರವಾಗುವ ದಿನಗಳು ಬಂದೇ ಬರದೇನು..!?
ಸೀಳುನಾಯಿಗಳು ನಿಂತು ಬೊಗಳಿದರೆ ಏನಂತೆ.?
ಆನೆ ಮದ್ದಾನೆಗಳ ಘೀಳಿಗೆ ಅವು ನಿಲ್ಲುವುದೇನು..!?
-ಹ.ರಾ.ಮಹಿಶ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments