*ನಮ್ಮ ಕಾಲೇಜು*




 ಶಿರಗುಪ್ಪಿಯ ಆದರ್ಶ ಗ್ರಾಮದಿ

 ಪ್ರಕೃತಿಯ ಮಡಿಲೊಳು ಕಂಗೊಳಿಸುವ ಸಮೃದ್ಧ ಪರಿಸರದಿ ಕೆ.ಎಲ್.ಇ. ನಾಮಹೊತ್ತು ತಲೆಯೆತ್ತಿ ನಿಂತ ದಿವ್ಯ ಜ್ಞಾನ ಸೌಧ ನಮ್ಮ ಕಾಲೇಜು 


ಶತಮಾನದ ಸಂತ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ಲಿಂಗ ಹಸ್ತದಿ ಪುಣ್ಯ ತೀರ್ಥವಾಗಿ ಉದ್ಭವಿಸಿದ ಉತ್ಕೃಷ್ಟ ಸಂಸ್ಥೆ ನಮ್ಮ ಕಾಲೇಜು


ಶಿರಬಾಗಿ ಕರಮುಗಿದು ಈ ಜ್ಞಾನ ದೇಗುಲದೊಳು ಹಂಬಲದಿ ಆಗಮಿಸುವ ವಿದ್ಯಾರ್ಥಿಗಳು ಶ್ರದ್ಧೆಯಿಂ ಕಲಿತು  ಗುರುಗಳ ಬೋಧನಾಮೃತ ಆಲಿಸಿ ಶೈಕ್ಷಣಿಕ ಜೀವನದೊಳು ಇಟ್ಟ ಆಸೆ ಕಟ್ಟಿಕೊಂಡ  ಕನಸು ನನಸು ಮಾಡುವ  ತಾಣ ನಮ್ಮ ಕಾಲೇಜು


ಆಟದಲ್ಲಿ  ಉತ್ಸಾಹದ ಕಾರಂಜಿಗಳಾಗಿ ಚಿಮ್ಮುವ      ಪಾಠದಲ್ಲಿ ಅಪೂರ್ವ ಸಾಧಕರಾಗಿ ಹೊರಹೊಮ್ಮುವ ಪ್ರತಿಭಾವಂತರ ಜೇನುಗೂಡು ನಮ್ಮ ಕಾಲೇಜು


ಸಮರ್ಪಣಾ ಭಾವದ ಗುರು ಬಳಗ ಈ ಜ್ಞಾನ ದೇವಾಲಯದೊಳು 

ವಿದ್ಯಾರ್ಥಿಗಳ ಮನೋಮಂದಿರದಿ ಅಜ್ಞಾನ ಅಂಧಕಾರ ಅಳಿಸಿ  ಜ್ಞಾನದ ದೀವಟಿಗೆ ಬೆಳಗುತ್ತ ದಿವ್ಯ ವ್ಯಕ್ತಿತ್ವ ರೂಪಿಸುವ ಚೇತೋಹಾರಿ ನಮ್ಮ ಕಾಲೇಜು


ವಿನಯ ಪ್ರಾಮಾಣಿಕತೆಗಳ ಬಟ್ಟೆ ತೊಟ್ಟು

ಮನ ಮನಗಳಿಗೆ ಸದ್ಗುಣದಿ ಸಂಸ್ಕಾರ ಕೊಟ್ಟು

ಮನುಕುಲದ ನಂದಾದೀಪಗಳಾದ ವಿದ್ಯಾರ್ಥಿಗಳನ್ನು  ಭವ್ಯ ಮಾನವರನ್ನಾಗಿಸಿ ಗ್ರಾಮೀಣ ಬಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ನಮ್ಮ ಕಾಲೇಜು


*ಕವಿ:ಡಾ.ಜಯವೀರ ಎ.ಕೆ*.

     *ಖೇಮಲಾಪುರ*


Image Description

Post a Comment

0 Comments