ಅತಿಯಾಸೆ

 ಅತಿಯಾಸೆ.


ದಣಿವಾಗಿದೆ ಎಂದು 

ಹೊರಳಲು ಅಣಿಯಾದೆ

ಅಣುವು ನೀಡುವ ನೆಲವೆ

ತಿರುಗಿದಂತೆ ಸಾಸಿವೆ ಗಾತ್ರದ

ಆಸೆ ಕನಸುಗಳೆ ಸೂತಕ.


ಅರಿವು ಸಿಗಲೆ ಇಲ್ಲ

ಕಂಡಿದ್ದು ಒಪ್ಪಿದೆಯಲ್ಲ

ಏಕೊ ಏನೊ ಮನಸು

ಬಿಟ್ಟು ಕೊಡದೆ ಬೆಟ್ಟ

ಮೈಮೇಲೆ ಬಿದ್ದ ಅನುಭವ.


ಹೊಟ್ಟೆಗೆ ಹಸಿದ ಭಾವ

ಉಣ್ಣಲು ಸಿಹಿತಾರದು ನೋವ

ಸ್ವತಂತ್ರ ಇಲ್ಲದ ಜೀವ

ಅಳುಕಿನಲ್ಲೆ‌ ಹಗಲು ಕಳೆದು

ರಾತ್ರಿಗೆ ಅಗೊ ಮತ್ತದೆ

ಭೂಮಿ ತಿರುಗಿ ಒಗೆದಂತೆ.


ಒಳಗೆ ಇರದ ನೆಮ್ಮದಿ

ಹೊರಗೆ ಎಲ್ಲಿ ಹುಡುಕಲಿ 

ಹುಡುಕಿದರೆ ಸಿಗುವುದು ಅಲ್ಲ

ನಾವೆ ಗಳಿಸಿಕೊಳ್ಳುವ ಸ್ವಾದ

ಹೊರಗೆ ಸಿಗದು ನೆಮ್ಮದಿ ಸಾರ.


ಶಿರೂರ ಶ್ರೀಶೈಲ...


Image Description

Post a Comment

0 Comments