*ಎಲ್ಲಿ ಮುಳುಗಿ ಹೋಯಿತೇ ದೇವರು*....?
-------------------------------
*ನಮಗೆ ಅನ್ನುತಿದ್ದರು, ಗಂಡ ಸತ್ತಾಗ ಹೆಂಡತಿ ಚಿತೆ ಏರಬೇಕೆಂದು, ಇಲ್ಲದಿದ್ದರೆ ಧರ್ಮವೇ ಮುಳುಗಿ ಹೋಗುವುದೆಂದು ,ಆದರೆ ಈಗ ಎಲ್ಲೂ ಕೂಡ ಸ್ತ್ರೀಯು ಚಿತೆ ಏರಲಿಲ್ಲ, ಹೇಳಿ ನಿಮ್ಮ ಧರ್ಮ ಮುಳುಗಿ ಹೋಯಿತೆ* ... ?
*ನಮಗೆ ಅನ್ನುತ್ತಿದ್ದರು, ಸ್ತ್ರೀಯು ಕಲಿತರೆ ಅನ್ನದಲ್ಲಿ ಹುಳಗಳಾಗುತ್ತದೆ, ಧರ್ಮ ಮುಳುಗುತ್ತದೆಂದು, ಈಗ ಸ್ತ್ರೀಯು ಶಿಕ್ಷಣ ಪಡೆದು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿಹಳು, ಹೇಳಿ ಈಗ ನಿಮ್ಮ ಧರ್ಮ ಮುಳುಗಿ ಹೋಯಿತೇ*...?
*ಪುರೋಹಿತರು ಹೇಳುತ್ತಿದ್ದರು,ದೇವರ ಗುಡಿಗಿಂತ ಎತ್ತರದ ಮನೆ ಎಂದಿಗೂ ಕಟ್ಟ ಬಾರದೆಂದು. ಇಲ್ಲದಿದ್ದರೆ ಧರ್ಮವೇ ಮುಳುಗುವುದೆಂದು, ಈಗ ನೂರಾರು ಅಂತಸ್ತಿನ ಬಂಗಲೆಗಳೇ ನಿರ್ಮಾಣವಾಗಿವೆ. ಈಗ ಹೇಳಿ ಮುಳುಗಿ ಹೊಯ್ತೆ ನಿಮ್ಮ ಧರ್ಮವೂ*....?
*ಪುರೋಹಿತರು ಹೇಳುತ್ತಿದ್ದರು ಶುದ್ರರು ದೇವಾಲಯದಲ್ಲಿ ಪ್ರವೇಶ ಮಾಡಬಾರದೆಂದು, ಆದರೆ ಇಂದು ಶುದ್ರರೇ ದೇವಾಲಯದಲ್ಲಿ ಬರಬೇಕೆಂದು, ಅವರಿಂದಲೇ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಈಗ ಹೇಳಿ ನಿಮ್ಮ ಧರ್ಮ ಮುಳುಗಿ ಹೋಯಿತೇ*...?
*ಪುರೋಹಿತರೆ ಅನ್ನುತ್ತಿದ್ದರು ಉಚ್ಚ ವರ್ಗದವರು ನಿಮ್ನ ವರ್ಗದವರನ್ನು ವಿವಾಹವಾಗಬೇಡಿ ಎಂದು. ಈಗ ಅವರೇ ಯಾರನ್ನು ಬೇಕಾದರೂ ಅಳಿಯನನ್ನಾಗಿ ಮಾಡಿಕೊಳ್ಳುತಿದ್ದಾರೆ. ಈಗ ಹೇಳಿ ನಿಮ್ಮ ಧರ್ಮ ಮುಳುಗಿ ಹೋಯಿತೇ*..?
ಜೈ ಭೀಮ್ ಜೈ ಭಾರತ್ 🙏
✍️✍️
*@ಅರ್ಜುನ್ ನಿಡಗುಂದೆ. ಸದಲಗಾ*.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments