*ಅನಿಸುತಿತ್ತು ರಮಾಯಿಗೆ ಪುಸ್ತಕ 📚📚📚ವಾಗಬೇಕೆಂದು*📖📖📖📖
✒️✒️✒️✒️✒️✒️
ಸಾಹೇಬರ ಕೈಯಲ್ಲಿ ಸದಾ ಇರಬೇಕು, ನನ್ನಲ್ಲಿಯೆ ಮಗ್ನವಾಗಿ ಪ್ರೇಮದಿ ನಡೆಯಬೇಕು,
ಅನಿಸುತಿತ್ತು ರಮಾಯಿಗೆ
ಪುಸ್ತಕವಾಗಬೇಕೆಂದು.
ಪುಸ್ತಕ ಮೇಲಿನ ಪ್ರೀತಿ ನೋಡಿ,
ಮಧ್ಯ ಮಧ್ಯದಲ್ಲಿ
ಜೀವ ಸುಡುತ್ತಿತ್ತು ನನ್ನದು,
ಇದೆ ಪ್ರೀತಿ ನನ್ನ ದಾರಿಗೆ,
ಎಂದಾದರೂ ಬರುವುದೇ?
ಸಾಹೇಬರು ರಮಿಸಿ ನನ್ನಲ್ಲಿ ನನ್ನನ್ನೇ ನೋಡಬೇಕು.
ಅನಿಸುತಿತ್ತು ರಮಾಯಿಗೆ
ಪುಸ್ತಕವಾಗಬೇಕೆಂದು...
ನನ್ನ ಪಾಲಿನ ಪ್ರೀತಿಯನ್ನು ಪುಸ್ತಕಗಳೇ ಕಬಳಿಸಿದವು ,
ನನ್ನ ಕುಂಕುಮದಲ್ಲಿಯ ಧನಿ. ನನ್ನಲ್ಲಿ೦ದ ಕಳುವಾದ,
ಅನಿಸುತಿತ್ತು ರಮಾಯಿಗೆ ತಾನು,
ಪುಸ್ತಕವಾಗಬೇಕೆಂದು.
ಪುಸ್ತಕ ಓದಿ ಸಾಹೇಬರು, ಶೋಧಿಸುತ್ತಿದ್ದರು ಅವುಗಳ ಸಾರಾಂಶವಾ ,
ಮತ್ತೆ ನನ್ನ ಮನದಲ್ಲಿಯ ಪ್ರೀತಿಯನ್ನು ತೆರೆದ ಕಣ್ಣಿನಿಂದ ಏಕೆ ನೋಡುವುದಿಲ್ಲ? ಹುಡುಗರಿಗೂ ಇವರು ಪುಸ್ತಕದ ರೀತಿಯೇ ಸಂಭಾಳಿಸುತ್ತಿದ್ದರು ,
ಪುಸ್ತಕದ ರೀತಿಯೇ ಪ್ರೀತಿ ಮಾಡುತ್ತಿದ್ದರು.
ಸಾಹೇಬರು ನಮ್ಮ ಪತದತ್ತ ಬರಬೇಕು,
ಅನ್ನಿಸುತ್ತಿತ್ತು ರಮಾಯಿಗೆ ತಾನು ಪುಸ್ತಕವಾಗಬೇಕೆಂದು.
📚📚📚📚📚📚📚
*ನಮೋ ಬುದ್ಧಾಯ ಜೈ ಭೀಮ್ ಜೈ ಭಾರತ್*
✍️✍️
*ಅರ್ಜುನ ನಿಡಗುಂದೆ. ಸದಲಗಾ*
ಮೋ:9743711213
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments