*ಸಿದ್ದಾಪುರ: ಯೋದ ಸಂತೋಷ ಯಳಗೂಡ ಅಕಾಲಿಕ ನಿಧನ: ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ*
*ರಾಯಬಾಗ:* ನಿನ್ನೆ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ ತಾಲ್ಲೂಕಿನ ಭಾರತಾಂಬೆಯ ಹೆಮ್ಮೆಯ ಸುಪುತ್ರ ಶ್ರೀ ಸಂತೋಷ ಯಮನಪ್ಪ ಯಳಗೂಡ ಅವರ ಪಾರ್ಥಿವ ಶರೀರ ಹೊತ್ತ ಮಿಲಿಟರಿ ವಾಹನ ಗ್ರಾಮಕ್ಕೆ ಬರುತ್ತಿದ್ದಂತೆ ಮಾರ್ಗ ಮಧ್ಯೆ ಖೇಮಲಾಪುರದ ಸಾರ್ವಜನಿಕರು ದೇಶಭಕ್ತರು ಪಾರ್ಥಿವ ಶರೀರಕ್ಕೆ ಹೂಮಾಲೆ ಸಮರ್ಪಿಸಿ ಅಂತಿಮ ದರ್ಶನ ಪಡೆದರು. ಮೃತ ಯೋದ ಸಂತೋಷ ಯಳಗೂಡ ಅವರ ಸ್ವಗ್ರಾಮ ಸಿದ್ದಾಪುರಕ್ಕೆ ಪ್ರವೇಶಿಸುತ್ತಿದ್ದಂತೆ ಗ್ರಾಮದ ಇಕ್ಕೆಲಗಳಲ್ಲಿ ಜಮಾಯಿಸಿದ ಅಪಾರ ಜನಸ್ತೋಮವು ಅಗಲಿದ ಹೆಮ್ಮೆಯ ಸುಪುತ್ರನ ಪಾರ್ಥಿವ ಶರೀರ ಕಂಡು ತೀವ್ರ ಕಂಬನಿ ಮಿಡಿದರು. ಕರುಳಿನ ಕುಡಿ ಕಳೆದುಕೊಂಡ ಅನಾಥರಾದ ಮೃತ ಸಂತೋಷ ಅವರ ಹೆತ್ತ ತಂದೆ ತಾಯಿ ಕುಟುಂಬಸ್ಥರ ಆಕ್ರಂದನ ನಿಜಕ್ಕೂ ಮುಗಿಲು ಮುಟ್ಟಿತು. ಸಿದ್ದಾಪುರ ಗ್ರಾಮದ ಸುತ್ತಮುತ್ತಲಿನ ಸಾವಿರಾರು ಜನರು ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಸೇರಿದ್ದರು. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
*ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments