ಸಂವಿಧಾನ ಪೂರ್ವ ಪೀಠಿಕೆ: ಓದು ಅಭಿಯಾನ


 ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್  ಮಂಡಳದ ಹಾ ವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2 ಕೋಟಿ 25 ಲಕ್ಷ ಜನ ಸಂವಿಧಾನ ಪೂರ್ವ ಪೀಠಿಕೆ ಓದಿ WORD BOOK OF RECORDS ಸೇರಿದ ಐತಿಹಾಸಿಕ ದಿನದಂದು ನಮ್ಮ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್ ಮತ್ತು ರೋವರ್, ರೇಂಜರಗಳಿಗೆ  ಪೂರ್ವ ಪೀಠಿಕೆಯನ್ನು ಹೇಳಿ ಕೊಡಲಾಯುತು. ಈ ಸಂದರ್ಭದಲ್ಲಿ ಸಂವಿಧಾನದ ಮಹತ್ವ, ಸೌಲಬ್ಯ ಮತ್ತು ಹಕ್ಕುಗಳ ಬಗ್ಗೆ,ಶ್ರೀಮತಿ ಟಿ ಎಸ್ ಹಿಟ್ಟಣಗಿಯವರು ತಿಳಿಸಿಕೊಟ್ಟರು. ಅದರಂತೆ ಇದೆ ಸಂದರ್ಭದಲ್ಲಿ ಸಂವಿಧಾನದ ಪೂರ್ವ ಪೀಠಿಕೆಯನ್ನು ಶ್ರೀ ಎಚ್ ಎಸ್ ಕುರಿಯವರು ಎಲ್ಲ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಮ್ ವ್ಹಿ ಕೋಳೆಕರ ವಹಿಸಿದ್ದರು.ಕಾಲೇಜಿನ ಎಲ್ಲ ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದರು.


ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ

Image Description

Post a Comment

0 Comments