*ಹುಸಿಮೋಹ* 


ನನ್ನದೆಯ ಹೃದಯಕೆ

ಏಕೋ ಕತ್ತಲು ಆವರಿಸಿದೆ

ಮುಸುಕಿದ ಪರದೆ

ಸರಿಸಲಾಗುತ್ತಿಲ್ಲ

ಹುಸಿ ಮೋಹಕ್ಕೆ ಮರುಳಾಗಿ


 ಕಣ್ಣುಗಳು ಖಾಲಿಯಾಗಿವೆ

 ಮನಸ್ಸು ಕಲ್ಲಾಗಿದೆ  

ನನ್ನೊಳಗಿನ ನೋವ ನಾನೇ

ಅರಿಯಲಾಗುತ್ತಿಲ್ಲ 


ಅಲೆಮಾರಿಯಾಗಿ ತಿರುಗುತಿಹ

ನಾನಿಡುವ ಪ್ರತಿ ಹೆಜ್ಜೆ 

ಕತ್ತಲೆಯ ದಾರಿಯಲ್ಲಿಯೇ ಸಾಗಿದೆ

ನಾವಿಕನಿಲ್ಲದ ದೋಣಿಯಂತೆ


ಮಾಯದ ಗಾಯಗಳು 

ಮುನ್ನುಡಿಯಂತೆ ತಡೆದಿವೆ

ಬದುಕಲ್ಲಿ ಭರವಸೆಗಳೇ

ಶೂನ್ಯವಾಗಿ ಆವರಿಸಿವೆ.


 *ವಿದ್ಯಾ ರೆಡ್ಡಿ ಗೋಕಾಕ*


Image Description

Post a Comment

0 Comments