ದಾಂಪತ್ಯ ಸದಾ ಹಸಿರಾಗಿರಲಿ
ನಿತ್ಯ ಹರಿದ್ವರ್ಣದ ಜೋಡಿ ಮರಗಳಂತೆ I
ದಾಂಪತ್ಯ ಉಸಿರಾಗಿರಲಿ
ಮೈಸೂರು ಮಲ್ಲಿಗೆ ಕವಿಯ ಕಾವ್ಯದಂತೆ II
ದಾಂಪತ್ಯ ಹೆಸರಾಗಿರಲಿ
ಜನಿಸಿದ ಮಗುವಿನ ನಾಮಕರಣದಂತೆ !
ದಾಂಪತ್ಯ ಸದಾ ಜೊತೆ ಇರಲಿ
ಮರವಿದ್ದೆಡೆ ನೆರಳಿದ್ದಂತೆ II
ದಾಂಪತ್ಯ ಹರಿಯುತ್ತಿರಲಿ
ಎಂದು ಬತ್ತದ ಜೀವನದಿಯಂತೆ I
ದಾಂಪತ್ಯ ಸದಾ ಚೇತನವಾಗಿರಲಿ
ರಸಋಷಿಯ ಅನಿಕೇತನದಂತೆ II
ದಾಂಪತ್ಯದಲ್ಲಿ ಸದಾ ಅನುರಾಗವಿರಲಿ
ಅನುಮಾನಕ್ಕೆ ಜಾಗವಿಲ್ಲದಂತೆ 1
ಕೇಳುವರಾಗವೆಲ್ಲ ಸಂಗೀತವಾಗಲಿ
ಅಮೃತವರ್ಷಿಣಿ ಮಳೆ ಬಂದ0ತೆ II
✍️ ಜೆಕೆ ಬಸವರಾಜು ಜಯಪುರ🌱

.gif)

.gif)


0 Comments