*ಸಹವಾಸ ಪರಿಣಾಮ*
ನಮ್ಮ ಮನಸ್ಸಿನ ಮೇಲೆ
ಸಹವಾಸದ ಪರಿಣಾಮಗಳು
ಬಹಳಷ್ಟು ಬೀರುತ್ತದೆ
ಕೈಯಲ್ಲಿ ಕೋಲಿದ್ದರೆ, ಸುಮ್ಮನೆ
ತಮಾಷೆಗಾಗಿಯು ಪಕ್ಕದಲ್ಲಿರುವರಿಗೆ
ನಿಧಾನಕೆ ಬಡಿಬೇಕು ಅನಿಸುತ್ತದೆ !!
ಇದು ಕೋಲಿನ ಸಹವಾಸದ ಪರಿಣಾಮ
ಅದೇ ನಮ್ಮ ಕೈಯಲ್ಲಿ
ಜಪಮಾಲೆ ತೆಗೆದುಕೊಂಡರೆ
ಜಪಿಸಬೇಕು ಅನಿಸುತ್ತದೆ!!
ಜಪಮಾಲೆಯಲ್ಲಿ ಬಡಿಬೇಕು ಅನಿಸಲ್ಲ
ಇದು ಜಪಮಾಲೆಯ ಸಹವಾಸ ಪರಿಣಾಮ
ಹಾಗಾಗಿ ಈ ಜಗತ್ತಿನಲ್ಲಿ
ಒಳ್ಳೆಯವರು ಕೆಟ್ಟವರು ಇಬ್ಬರೂ ಇರುತ್ತಾರೆ
ನಾವು ಯಾರ ಸಹವಾಸ ಮಾಡಬೇಕು
ಅನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ
ಜನರಿಗೆ ಪರಿಚಯವಾಗುತ್ತದೆ
*ಅಶೋಕ ಬೇಳಂಜೆ*

.gif)

.gif)


0 Comments