ರಾಚಮಾನಹಳ್ಳಿ ಗ್ರಾಮದ ಸಂಶೋಧನಾರ್ಥಿ ಶಶಿ ಕುಮಾರ್ ಪಿ. ರವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಸಂವಹನ ವಿಭಾಗದ ಸಂಶೋಧನಾರ್ಥಿ ಶಶಿ ಕುಮಾರ್ ಪಿ. ರವರಿಗೆ ಡಾಕ್ಟರೇಟ್ ಪದವಿ ಪ್ರದಾನ
ಶಶಿ ಕುಮಾರ್ ಪಿ. ರವರಿಗೆ ಪಿಎಚ್.ಡಿ ಪದವಿ ಪ್ರದಾನ
ಬೆಂಗಳೂರು: ಏ.01: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮ ಪಂಚಾಯತಿಯ, ಬೆಸ್ತಮಾನಹಳ್ಳಿ ಅಂಚೆ ವ್ಯಾಪ್ತಿಯ ರಾಚಮಾನಹಳ್ಳಿ ಗ್ರಾಮದ ನಿವಾಸಿ ದಿವಂಗತ ಶ್ರೀ ಆರ್.ಎಸ್. ಪಿಲ್ಲಪ್ಪ ಮತ್ತು ಶ್ರೀಮತಿ ಯಶೋಧಮ್ಮ ದಂಪತಿಯ ಹಿರಿಯ ಪುತ್ರ, ಹಾಲಿ ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಸಂಶೋಧನಾರ್ಥಿ ಶಶಿಕುಮಾರ್ ಪಿ. ರವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಸಂಜೀವ್ ರಾಜ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ "ಸಿನೆಮ್ಯಾಟಿಕ್ ಕಾನ್‌ಟ್ರಿಬ್ಯೂಷನ್ಸ್ ಆಫ್ ಡಾ. ಗಿರೀಶ್ ಕಾರ್ನಾಡ್: ಅನ್ ಅನಾಲಿಟಿಕಲ್ ಸ್ಟಡಿ" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆಯಲ್ಲಿ ಶಶಿ ಕುಮಾರ್ ಪಿ. ರವರ ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಮತ್ತು ಕರ್ಪೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಚಮಾನಹಳ್ಳಿ ಗ್ರಾಮದ ಸುತ್ತಮುತ್ತಲಿನವರು ಸೇರಿ ಶುಭ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ

.gif)

.gif)


0 Comments