*ನವೋಲ್ಲಾಸದ
ಯುಗಾದಿ*
ಯುಗಾದಿಯ
ಮೊದಲ ದಿನದಿ
ನೇಸರನ ಹೊಂಗಿರಣ
ಭುವಿಯ ತಾಕುತ
ಜಗವೆಲ್ಲಾ ನಗುನಗುತಾ ಸ್ವಾಗತವ ಕೋರುತಿವೆ ಬದಲಾವಣೆಯ
ಸಂಭ್ರಮ
ಯುಗವೆನ್ನುವುದು ನಿಮಿಷವೋ ವರುಷವೋ ಕಾಲನ ಕಾಲಾತೀತವೋ
ಯಾವುದೋ ಕಾರಣದಿ
ಪ್ರಕೃತಿಯಲಿ ಪಲ್ಲಟವು
ಯುಗದ ಕೈಯೊಳು ಯೋಗಿಯಾಗಿ
ಬದುಕು ಸವೆಸು
ಮನುಜನೇ
ಸುಖ ದುಃಖಗಳ ಸಮಭಾವದಿ
ನೋವು ನಲಿವುಗಳ ಸಾಂಗತ್ಯದಿ
ಬೇವು ಬೆಲ್ಲಗಳ ಮಾಧುರ್ಯದಿ
ಸಾಗುತಿದೆ ಬದುಕು ಸೌಭಾಗ್ಯದಿ
ಬದಲಾವಣೆ ಜಗದ ನಿಯಮ
ಸೃಷ್ಟಿಯೊಳಗೆ ನಾವೊಂದು ತೃಣ
ಬದುಕಿಗೆ ಯುಗಾದಿಯು ನವೋಲ್ಲಾಸದ ಸಂಕೇತ
ಬೇವು ಬೆಲ್ಲವ ಸೇವಿಸಿ
ಕಷ್ಟ ಸುಖಗಳ ಬೆರೆಸಿ
ತರಲಿ ಎಲ್ಲರಲಿ ಹರುಷ
✍️ ಶಿವಕುಮಾರ ಕೋಡಿಹಾಳ ಮೂಡಲಗಿ
(ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು)

.gif)

.gif)


0 Comments