ಕಡು ಬಡ ಕೂಲಿ ಕಾರ್ಮಿಕರ ಅಶಾಕಿರಣವಾದ ಇಂದಿರಾ ಕ್ಯಾಂಟೀನ್*

 *ಕಡು ಬಡ ಕೂಲಿ ಕಾರ್ಮಿಕರ ಅಶಾಕಿರಣವಾದ ಇಂದಿರಾ ಕ್ಯಾಂಟೀನ್*


 


ರಾಯಬಾಗ:ಸರಕಾರ ಬಡ ಬಗ್ಗರು ಹಾಗೂ ಕೂಲಿ ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯನನ್ನು ಮೊದಲು ಮಾಡಿಕೊಂಡು ಮಧ್ಯಮ ವರ್ಗದ ನಾಗರಿಕರು ಸಹ ದುಸ್ತರ ಬದುಕು ನಡೆಸುತ್ತಿದ್ದಾರೆ.ಆಹಾರ ಬಟ್ಟೆ ವಸತಿ ಈ ಮೂರು ಮನುಷ್ಯನಿಗೆ ಬದುಕಲು ಮೂಲಭೂತ ಅವಶ್ಯಕತೆಯಾಗಿವೆ. ಈ ದೇಶದಲ್ಲಿ ಅನೇಕ ಜನರಿಗೆ ಇನ್ನೂ ಈ ಮೂರು ಅಗತ್ಯಗಳನ್ನು ಪಡೆದುಕೊಂಡು ಬದುಕು ಸಾಗಿಸಲು ತೀವ್ರ ಹರಸಾಹಸ ಪಡಬೇಕಾಗಿದೆ.ಸರಕಾರ 

ಸಮಾಜದ ಕಟ್ಟ ಕಡೆಯ ಮನುಷ್ಯನು ಆಹಾರ,ವಾಸಿಸಲು ಮನೆ ಇರಬೇಕೆಂಬುದು ಬಯಸುತ್ತದೆ. ಪ್ರಸ್ತುತ ಹಳ್ಳಿಯನ್ನು ಮೊದಲು ಮಾಡಿಕೊಂಡು ಹೋಬಳಿ ಪಟ್ಟಣಗಳಲ್ಲಿ ಇರುವ ಹೋಟೆಲ್ ಗಳಲ್ಲಿ ಉಪಹಾರ ಹಾಗೂ ಊಟಕ್ಕೆ ಇರುವ ಬೆಲೆ ಸಾಮಾನ್ಯ ಬಡ ಕೂಲಿ ಕಾರ್ಮಿಕರಿಗೆ  ಅದು ಎಂದಿಗೂ  ಕೈಗೆಟುಕಲಾರದು.   ಬಡ ಕೂಲಿ ಕಾರ್ಮಿಕರೂ ಸಹ ಅತ್ಯಂತ ಕಡಿಮೆ ಬೆಲೆ ಊಟ, ಉಪಹಾರ ಮಾಡಿ ಸರಳ ಬದುಕು ಸಾಗಿಸಲು ರಾಜ್ಯ ಸರಕಾರ ನಗರ, ಹೋಬಳಿಗಳ ಆಯಕಟ್ಟಿನ ಸ್ಥಳಗಳಲ್ಲಿ  ಇಂದಿರಾ ಕ್ಯಾಂಟೀನ್  ಪ್ರಾರಂಭ ಮಾಡಿದ್ದು ವಿಶೇಷ.


ತಾಲೂಕಿನ ಕುಡಚಿ ಪಟ್ಟಣದ ಬಸ್ ನಿಲ್ದಾಣದ ಸಮೀಪ,      ರೈಲು ನಿಲ್ದಾಣದ ಎದುರು ಇತ್ತೀಚಿಗೆ ಕ್ಷೇತ್ರದ ಶಾಸಕರು ಈ ಇಂದಿರಾ ಕ್ಯಾಂಟೀನನ್ನು ಜನಾರ್ಪಣೆಗೊಳಿಸಿದ್ದಾರೆ.


ಇದೀಗ ಈ ಕ್ಯಾಂಟೀನ ಆರಂಭವಾದಾಗಿನಿಂದ ಈ ಭಾಗದ ಅನೇಕ ಬಡ ಕೂಲಿ ಕಾರ್ಮಿಕರು ಬೆಳಿಗ್ಗೆ 5 ರೂಪಾಯಿಯಲ್ಲಿ ಉಪಹಾರ,ಹಾಗೂ ಮಧ್ಯಾಹ್ನ 10 ರೂಪಾಯಿಯಲ್ಲಿ ಊಟ ಮಾಡಿ ತಮ್ಮ ಮುಂದಿನ ಕೆಲಸ ಕಾರ್ಯಗಳಲ್ಲಿ ತೊಡಗಲು ಅನಿಯಾಗುವುದು ಕಂಡು ಬರುತ್ತಿದೆ.ಸಾರ್ವಜನಿಕರ ಮಾಹಿತಿಗಾಗಿ ವಾರದ ಮೆನು ಚಾರ್ಟ್ ಈ ಕ್ಯಾಂಟಿನ್ ಗೋಡೆಯ ಮುಂಭಾಗದಲ್ಲಿ ನೇತು ಹಾಕಿದ್ದಾರೆ. ಮೆನು ಚಾರ್ಟ್ ದಂತೆ ಇದನ್ನು ನಿರ್ವಹಣೆ ಮಾಡುವ ಇಲ್ಲಿನ ಕೆಲಸಗಾರರು ಇಲ್ಲಿ ನಿತ್ಯವು ಊಟ ಉಪಹಾರವನ್ನು ತಯಾರಿ ಮಾಡುತ್ತಾರೆ. ನಮಗೆ ಇದರಿಂದ ಬಹಳ ಅನುಕೂಲವಾಗಿದೆ. ಈವಾಗ ಹೊಟ್ಟೆ ತುಂಬಾ ಉಪಹಾರ ಮಾಡಿ ಕೆಲಸಕ್ಕೆ ಹೊರಟಿದ್ದೇನೆ.ಗುಣಮಟ್ಟದ ಊಟ ಹಾಗೂ ಉಪಹಾರ         ಈ ಕ್ಯಾಂಟೀನ್ ದಲ್ಲಿ ಚೆನ್ನಾಗಿ ಸಿಗುತ್ತಿದೆ ಎಂದು ಓರ್ವ ಕೂಲಿ ಕಾರ್ಮಿಕನು ಸಂಜೆ ಪ್ರಭ ಜೊತೆ ತನ್ನ ಮನದ ಮಾತು ಹಂಚಿಕೊಳ್ಳುವಾಗ ನಿಜಕ್ಕೂ ಸರಕಾರ ಆರಂಭಿಸಿದ ಈ ಇಂದಿರಾ ಕ್ಯಾಂಟಿನ್ ಕಡು ಬಡ ಕೂಲಿ ಕಾರ್ಮಿಕರ ಆಶಾ ಕಿರಣವಾಗಿದೆ ಎಂಬುದನ್ನು ಪ್ರತಿದ್ವನಿಸುತ್ತಿತ್ತು.


ಡಾ. ಜಯವೀರ ಎ. ಕೆ.

      ಖೇಮಲಾಪುರ

Image Description

Post a Comment

0 Comments