*ಜೊತೆಯಾಗಿ ನಲಿಯುವಾಸೆ*
ಸಾಗರದಲೆಯು ಮೋಹತೋರುತ
ಮರಳ ದಂಡೆಗೆ ಮುತ್ತನಿಕ್ಕುತ
ಹಿಗ್ಗಿದೆ ವಿರಹದ ದಾಹವನು ತಣಿಸುತ...
ನಗುಮೊಗದ ನನ್ನ ಮನದನ್ನೆ
ಬಾಡದಂತೆ ನಿನ್ನ ಚೆಂಗುಲಾಬಿ ಕೆನ್ನೆ
ಹರಿಸಿ ಬಿಡುವಾಸೆ ಪ್ರೇಮದ ಅಧರಾಮೃತ..
ಉಸಿರಲಿ ಉಸಿರನ್ನು ತುಂಬುತ
ಪ್ರಣಯದ ಆಕಾಶದಿ ತೇಲಿಸುತ
ಪ್ರೇಮಬಂಧನಕೆ ಒಳಗಾಗು ನೋಟ ಮರೆಸುತ
ಜೋಡಿ ಹಕ್ಕಿಯಂತೆ ಹಾರಲು
ಒಡಲ ಪಿಸುಮಾತು ಕೇಳಲು
ನಿನ್ನೆಡೆಗೆ ಸಾಗಿ ಬಂದೆನು ನನ್ನೆ ನಿನಗರ್ಪಿಸುತ
ನೀ ಕರುಣಿಸುವ ಸೂರಿನಲಿ
ತೋಳಪ್ಪುಗೆಯ ಸವಿ ಮಡಿಲಿನಲಿ
ಪ್ರೇಮಗಾನ ಹಾಡುವಾಸೆ ಜೊತೆಯಾಗಿ ನಲಿಯುತ
*ಅಶೋಕ ಬೇಳಂಜೆ*

.gif)

.gif)


0 Comments