ಕಥಾ ಕವನಗಳ ಸಂಕಲನ
ಆಶುಕವನ 29 / 03 / 26
ಶೀರ್ಷಿಕೆ : ಜೋಡು
ಒಂದನ್ನು ಬಿಟ್ಟು ಇನ್ನೊಂದು ಇರದು
ಸದಾ ಜೊತೆ ಜೊತೆಯಲಿ ಇರುವರು
ಒಬ್ಬರು ಬೇರಾದರು ಬೆಲೆಯಿಲ್ಲ
ಯಾವ ಕಾಲಕ್ಕು ದೂರಾಗುವುದಿಲ್ಲ
ಬಾಳ ಬಂಡಿಗೆ ಜೋಡಿ ಚಕ್ರಗಳಂತೆ
ನಡಿಗೆ ಎರಡು ಜೋಡು ಒಂದೆ ತೆರದಂತೆ
ನೋಟ ಒಂದೆ ಜೋಡಿ ಕಂಗಳಂತೆ
ಸಂಸಾರ ಜೋಡಿಯಾಗಿ ಗಂಡುಹೆಣ್ಣಂತೆ
ಪಾದಗಳ ರಕ್ಷಣೆಗೆ ಬೇಕು ಜೋಡು
ಜಗಳಕ್ಕೆ ಆಯುಧವು ಅದೆ ಜೋಡು
ಭಾರ ಹೊತ್ತು ತನ್ನನ್ನೆ ಸವೆಸುವುದು
ಗಂಧದಂತೆ ಸವೆದರು ಸೇವೆ ಮರೆಯದು
ಶ್ರೀರಾಮನ ಪಾದ ಸೋಕಿದ ಜೋಡು
ಸೋದರ ಭರತನ ಶಿರವೇರಿ ಮೆರೆದಿತ್ತು
ತ್ರೇತಾಯುಗದಲ್ಲಿ ಪೂಜ್ಯನೀಯವಾಗಿತ್ತು
ಅಯೋಧ್ಯೆ ಸಿಂಹಾಸನದಿ ಅಲಂಕರಿಸಿತ್ತು
✍️…ನಿಮ್ಮವನೆ..ರಾಜ್❣️

.gif)

.gif)


0 Comments