ಹಾರೂಗೇರಿ : ಲಿಂಗೈಕ್ಯ ರಾಮಪ್ಪ ಬಸಪ್ಪ ಆಜೂರ,ಲಿಂಗೈಕ್ಯ ಗಂಗಮ್ಮ ರಾಮಪ್ಪ ಆಜೂರ ಇವರ 35ನೇ ಗಂಗಾರಾಮೋತ್ಸವ ಹಾಗೂ ಆಜೂರ ಪುಸ್ತಕ ಪ್ರತಿಷ್ಠಾನದ ಪ್ರಶಸ್ತಿ ಪ್ರಧಾನ ಸಮಾರಂಭ ಜನೆವರಿ 26.01.2025 ರಂದು ಜರುಗುವುದು.ಈ ಸಮಾರಂಭದಲ್ಲಿ ಹಿಡಕಲ್ ಗ್ರಾಮದ ವಸಂತರಾವ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಟಿ ಎಸ ವಂಟಗೂಡಿಯವರ ರಾಯಬಾಗ ತಾಲೂಕಿನ ಹಾಲುಮತದ ದೈವಗಳು,ಕನ್ನಡದಿಂಚರ ಪ್ರಭು ಕಿರಣ,ಭೀಮ ಬೆಳಕು ಮುಂತಾದ ಕವನ ಸಂಕಲನಗಳನ್ನು ರಚಿಸಿ ಲೋಕಾರ್ಪಣೆ ಗೊಳಿಸಿದ್ದಾರೆ. ಸನ್ 2024ರಲ್ಲಿ ಬೆಳಗಾವಿ ಜಿಲ್ಲೆಯ ಹಲವಾರು ಕವಿಗಳು ಬರೆದಿರುವ ಸಂತ ಶ್ರೇಷ್ಠ ಕವಿ ಕನಕದಾಸರ ಕವಿತೆಗಳನ್ನು ಸಂಗ್ರಹಿಸಿ ಕನಕಾಂಬರ ಎಂಬ ಶೀರ್ಷಿಕೆ ಅಡಿಯಲ್ಲಿ ಕವನ ಸಂಕಲನವನ್ನು ರಚಿಸಿ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ಗಣ್ಯಮಾನ್ಯರ ಸಾಹಿತಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಗೊಳಿಸಿದ್ದಾರೆ. ಈಗ "ಕನಕಾಂಬರ" ಕವನ ಸಂಕಲನ ಅಜೂರ ಪುಸ್ತಕ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯನ್ನು ಜನವರಿ 26ರಂದು ಶ್ರೀ ಬಿ ಆರ್ ಆಜೂರ ತೋಟದ ಆವರಣದಲ್ಲಿ ಹಲವಾರು ಪೂಜ್ಯರ ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ನಡೆಯುವ ಗಂಗಾರಾಮೋತ್ಸವ ಸಮಾರಂಭದಲ್ಲಿ ಸಾಹಿತಿ ಟಿ ಎಸ್ ವಂಟಗೂಡಿ ಅವರಿಗೆ ಫಲ ಪುಷ್ಪ ಪ್ರಶಸ್ತಿ ಫಲಕ ನೀಡಿ ಪೂಜ್ಯ ಗುರುಗಳಾದ ಬಸವರಾಜ ಆರ್ ಅಜೂರ ಗೌರವಿಸಲಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಶ್ರೇಷ್ಠ ವಾಗ್ಮಿಗಳು ಹಾಗೂ ಕನ್ನಡ ಪ್ರಾಧ್ಯಾಪಕರಾದ ಟಿ ಎಸ್ ವಂಟಗೂಡಿ ಅವರನ್ನು ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲ ಅಧ್ಯಕ್ಷರಾದ ರವೀಂದ್ರಗೌಡ ಮ ಪಾಟೀಲ, ಸಾಹಿತಿ ಸುಖದೇವ ಕಾಂಬಳೆ, ಜಯವೀರ ಏ ಕೆ, ಪ್ರೊ ಮಾಯಪ್ಪ ಶಿರಡೋಣಿ, ಜನಪದ ಕಲಾವಿದ ಬಿ ಎಲ್ ಘಂಟಿ, ಸಾಹಿತಿ ಶ್ರೀಕಾಂತ ಡಿ ರಾಯಮಾನೆ, ಶಿಕ್ಷಕ ನಂದೇಶ್ ಕಾಂಬಳೆ, ಪ್ರೊ ಪಿ ಎಸ್ ಪಟ್ಟಣಶೆಟ್ಟಿ, ಸಂಜೀವ ಇಮ್ಮಡಿ, ಟಿ ಎಸ್ ವಂಟಗೂಡಿ ಅವರನ್ನು ಅಭಿನಂದಿಸಿದ್ದಾರೆ.
ವರದಿ : ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments