* ನವರಾತ್ರಿ ಹಬ್ಬದ ಮೊದಲ ದಿನದ ಶುಭಾಶಯಗಳು*

 *ನವರಾತ್ರಿ ಹಬ್ಬದ ಮೊದಲ ದಿನದ ಶುಭಾಶಯಗಳು*



ನವರಾತ್ರಿ ಮೊದಲ ದಿನವು 

ದುರ್ಗಾ ಸ್ವರೂಪಿಣಿ ಮಾತೆಯು 

ಮಾ ಶೈಲ ಪುತ್ರಿಯಾಗಿ ಬರುವಳು 


ಪರ್ವತ ರಾಜ ಹಿಮವಂತನ 

ಪುತ್ರಿಯಾಗಿ 

ಜನಿಸಿದ ಕಾರಣ ಶೈಲಪುತ್ರಿ 

ಎಂಬ ಹೆಸರನ್ನು ಧರಿಸುತ ಬರುವಳು 


ಮೂಲಧಾರ ಚಕ್ರನಿವಾಸಿ ನಿಯು 

ನಂದಿ ವಾಹನದ ಮೇಲೆ 

ವಿರಾಜಮಾನಳಾಗಿಯು 

ಕೈಯಲ್ಲಿ ತ್ರಿಶೂಲ ಹಿಡಿದು 


ಎಲ್ಲರಿಗೂ ಅಧ್ಯಾತ್ಮಿಕ ಔನ್ನತ್ಯ ಸಾಧನೆಯ 

ಶಕ್ತಿ ಸ್ಥಿರತೆ ದಯಪಾಲಿಸುತ 

ಬರುವ ದೇವಿಗೆ ನಮಿಸೋಣ 


🙏🌹🙏🌹🙏🌹🙏🌹


✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments