*ಸಾವಿನ ಕನಸು *

 ಸಾವಿನ ಕನಸು 



ಕಾಣದೂರಿನಲ್ಲಿ ರೆಕ್ಕೆ ಕಳಚಿ 

ಬಿದ್ದ ಪಕ್ಷಿಯ ಕನಸು

ರಣರಂಗದಲ್ಲಿ ಮುಖ ಕೊಚ್ಚಿ 

ಕತ್ತು ಕೂಯ್ದ ಕನಸು 


ಸಂಜೆಗೆಂಪು ಕಣ್ಣ ತುಂಬಿ ಬಂತು 

ಜೊತೆಗೆ ಭಯವೂ ಚಿಗುರುತ್ತಿತ್ತು 

ಸರದಿಯಂತೆ ಬಂದ ಬೆಂಕಿ ಚೆಂಡುಗಳ 

ಸಿಡಿತಕ್ಕೆ ಭೂಮಿಯೂ ನಡುಗುತ್ತಿತ್ತು 


ಸಂಜೆ ಮುಗಿದು ರಾತ್ರಿ ಬಂತು 

ಆಗಸದಲ್ಲಿ ನಕ್ಷತ್ರ ಹೊಳೆಯುತ್ತಿತ್ತು 

ರಾತ್ರಿ ಪೂರಾ ಭೂಮಿ ಕುಂತು 

ಒಂದೇ ಸಮನೆ ನರಳುತ್ತಿತ್ತು 


ಬದುಕು ಅರ್ಧಂಬರ್ಧ, ಕನಸು ಅರ್ಧಂಬರ್ಧ 

ರಾತ್ರಿ ಕಳೆದು ಹಗಲು  ಬಿತ್ತು 

ಭೂಮಿ ತುಂಬಾ ನರಳಿ ನರಳಿ ಅತ್ತು ಜನರು 

ಕಣ್ಣು ಉರಿದು ನಿದ್ದೆ ಬಿತ್ತು


ಉದಂತ ಶಿವಕುಮಾರ್

ಕವಿ ಮತ್ತು ಲೇಖಕ

ಬೆಂಗಳೂರು -560056

ಮೊಬೈಲ್ ನಂ:9739758558

Image Description

Post a Comment

0 Comments