* ಕವಿತೆಯಲ್ಲಿ ಸೊಗಸಿದಿದೆ‌ ಡಾ.ಸುಜಾತಾ.ಚಲವಾದಿ *


 ಕವಿತೆಯಲ್ಲಿ ಸೊಗಸಿದಿದೆ‌ ಡಾ.ಸುಜಾತಾ.ಚಲವಾದಿ


ಚನ್ನಬಸಮ್ಮ ಚಂದಪ್ಪ ಪ್ರತಿಷ್ಠಾನದಿಂದ ಆಯೊಜಿಸಿದ ಬುದ್ದ ಇದ್ದನಲ್ಲಿ ಕವನ ಸಂಕಲನದ ಕವಿತೆಗಳನ್ನು  ವಾಚಿಸುವ ಮುಖಾಂತರ ಸಂಜೆಗೊಂದು ಕವಿತೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು .ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಸುಜಾತಾ ಚಲವಾದಿ " ಅವರು ಕಾವ್ಯ ಎನ್ನುವುದು ಭ್ರಮೆಯಾಗಬಾರದು ವಾಸ್ತವವನ್ನು ತೆರೆದಿಡುವ ಕವಿತೆಗಳು ಹೊರ ಬರಬೇಕು. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳ ಅರಿವು ಕವಿಗೆ ಇದ್ದಾಗಲೇ ಒಳ್ಳೆಯ ಕಾವ್ಯ ಕಟ್ಟಲು ಸಾಧ್ಯ. ಕವಿತೆಯಲ್ಲಿ ಜೀವನದ ಸೊಗಸಿದೆ ಅನುಭವವಿದೆ ಪ್ರತಿಯೊಬ್ಬರು ಅದನ್ನು ಅನುಭವಿಸಲೇ ಬೇಕು. ಪ್ರತಿ ಮನೆಯಲ್ಲಿ ಇಂತಹ ಕಾವ್ಯ ಓದುಗ ಇದ್ದಾಗಲೇ ಕವಿಗೆ ಮನ್ನಣಿ ದೊರಕಲು ಸಾದ್ಯವೆಂದು ಮಾತನಾಡಿದರು."

"ಕಾವ್ಯ ಎನ್ನುವುದು ಅಕ್ಷರಗಳ ಜೊಡಣಿಯಲ್ಲ ಕಾವ್ಯ ಭಾವನೆಗಳನ್ನು ಕೆದಕಿ ಹೊರಬರಬೇಕು.ಅಂದಾಗ ಮಾತ್ರ ಆ ತೀವ್ರತೆ ಕಾವ್ಯಗಳಲ್ಲಿ ಕಾಣಿಸುತ್ತದೆ. ಕಾವ್ಯ ಮನಸ್ಸಿಗೆ ಒಪ್ಪದ್ದನ್ನು  ಪ್ರತಿಭಟಿಸಬೇಕು"ಎಂದು ಕವಿಗೊಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ ಅಭಿಷೇಕ ಚರ್ಕವರ್ತಿ ಅಭಿಪ್ರಾಯ ಪಟ್ಟರು.  ಅಧ್ಯಕ್ಷರಾದ ಡಾ.ಸುಜಾತಾ ಚಲವಾದಿ ಇವರನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಆರ್ಟ ವಿಭಾಗದ ಬಿರೇಶ ಪೂಜಾರಿ ಮತ್ತು ಹಾಜಮಾ ಹುದ್ದಾರ ವಿದ್ಯಾರ್ಥಿಗಳು ಸನ್ಮಾನಿಸಿದರು.

ಯಮುನಾಬಾಯಿ ತೊರವಿ ಕವಿತೆಗಳ ಕುರಿತು ಮಾತನಾಡಿ ಕವಿತೆ ವಾಚಿಸಿದರು. ಹಾಜಮಾ ಹುದ್ದಾರ,  ಧನಲಕ್ಮೀ ದೊಡಮನಿ, ಬೀರೇಶ ಪೂಜಾರಿ, ಕುಶಪ್ಪ ದೊಡಮನಿ ಅರುಂಧತಿ ಚಲವಾದಿ, ಶಶಿಕಲಾ ಬೂಯ್ಯಾರ. ಮಹಾನಂದಾ ಬಿರಾದಾರ ಇವರುಗಳು ಕವಿತೆಯನ್ನು ವಾಚಿಸಿದರು. ಕಾನ್ಷಿ ಸಾಹೇಬ,  ಜ್ಯೋತಿ ಸಾಹೇಬ, ಚನ್ನು ಚಲವಾದಿ, ಚಂದ್ರು ಚಲವಾದಿ ಮಕ್ಕಳು ಉಪಸ್ಥಿತರಿದ್ದರು. ರಿಯಾನಾ ಬನ್ನಟ್ಟಿ ಕಾರ್ಯಕ್ರಮದ ನಿರೂಪಣಿಯನ್ನು ಮಾಡಿದರು. ಪರಶುರಾಮ ಚಲವಾದಿ ವಂದಿಸಿದರು.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments