*ಹಳದಿ ಕೆಂಪು ಕನ್ನಡದ ಕಂಪು: ಸಚೀನಾ ತಮ್ಮಣ್ಣವರ*

 *ಹಳದಿ ಕೆಂಪು ಕನ್ನಡದ ಕಂಪು: ಸಚೀನಾ ತಮ್ಮಣ್ಣವರ* 


ರಾಯಬಾಗ 

   ®ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ಮತ್ತು ಬೀರೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ, ಭೀರಪ್ಪನ ಮಡ್ಡಿ ಹಾರೂಗೇರಿಯಲ್ಲಿ ರಾಜ್ಯೋತ್ಸವದ ನಿಮಿತ್ತ ಹಳದಿ ಕೆಂಪು ಗಾಳಿಪಟಗಳ ಹಾರಾಟ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಕುಡಚಿ ಶಾಸಕರ ಧರ್ಮಪತ್ನಿಯವರಾದ ಶ್ರೀಮತಿ ಸಚೀನಾ ಮಹೇಂದ್ರ ತಮ್ಮಣ್ಣವರ ಅವರು ಇಂತಹ ಆಯೋಜನೆಗಳಿಂದ ಮಕ್ಕಳಲ್ಲಿ ನಾಡು ನುಡಿ ನೆಲ ಜಲದ ಬಗ್ಗೆ ಅಭಿಮಾನ ಮೂಡಿ ಮಾನಸಿಕ ಸ್ವಾಸ್ಥ್ಯ ಚಿಗುರುತ್ತದೆಂದು ಹೇಳುತ್ತಾ ಹಳದಿ ಕೆಂಪು ಕನ್ನಡದ ಕಂಪು ಎಂದು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಯಬಾಗ ಘಟಕ ಸಂಘಟಿಸುತ್ತಿರುವ ಇಂಥಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ.ಚತುರ ಸಂಘಟಕ ಸಂತೋಷ ತಮದಡ್ಡಿಯವರನ್ನು ಶಾಸಕರು ಗುರುತಿಸಿ ಬಿರುದಿಸಲಿ ಎಂದು ಸಾಹಿತಿ ಡಾ. ವಿ .ಎಸ್ ಮಾಳಿಯವರು ಅಭಿಮತ ವ್ಯಕ್ತಪಡಿಸಿದರು.

   ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಆಧ್ಯಾತ್ಮ ಶಕ್ತಿ ಡಿ ಎಸ್ ನಾಯಿಕರವರು ಗುರುಗಳ ಪಾತ್ರದ ಬಗ್ಗೆ ಜಿ.ಎಸ್.ಎಸ್ ಹಾಗೂ ಡಿ.ವಿ.ಜಿ ಅವರ ಪದ್ಯಗಳ ಮೂಲಕ ಮನತುಂಬಿದರು.

  ಶಿಕ್ಷಣ ಕ್ಷೇತ್ರದಲ್ಲಿನ ಅಪರೂಪದ ಸಾಧನೆಗಾಗಿ ರಾಜ್ಯ ಸರಕಾರದಿಂದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪಡೆದ ಶ್ರೀ ರಾಮಣ್ಣ ಮಹಾದೇವ ಗಸ್ತಿಯವರು ಸನ್ಮಾನ ಸ್ವೀಕರಿಸಿ ಗಾಳಿಪಟದೆತ್ತರ ಕನ್ನಡದ ಗೌರವ ಹರಡಲಿ ಎಂದು ಆಶಿಸಿದರು.ಸಂಘಟಕ ಸಂತೋಷ ತಮದಡ್ಡಿ ಗಾಳಿಪಟ ಉತ್ಸವದ ಮಹತಿಯನ್ನು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಾರಾಮ ಜೋಗಳೆ ಅತಿಥಿ ನುಡಿಗಳನ್ನಾಡುತ್ತಾ  ಗಾಳಿಪಟ ಉತ್ಸವ ಜೀವನೋತ್ಸಾಹ ತುಂಬಿ   ಲವಲವಿಕೆ ಹೆಚ್ಚಿಸುತ್ತದೆ. ಕನ್ನಡಮ್ಮನ ಸೇವೆಗೆ ಕಂಕಣಬದ್ದರಾಗಿರೋಣವೆಂದರು.

ಅದ್ಯಕ್ಷತೆ ವಹಿಸಿ ನುಡಿಹರಡಿದ ರಾಯಬಾಗ ಕ.ಸಾ.ಪ ತಾಲೂಕಾಧ್ಯಕ್ಷ ಶ್ರೀ ಆರ್ ಎಮ್ ಪಾಟೀಲರು  ಕನ್ನಡ ನುಡಿ ನೆಲ ಜಲದ ರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಸದಾ ಸಿದ್ಧವಿದೆ.ಜನಸಾಮಾನ್ಯರ ಮನ ಮುಟ್ಟುವ ನಿಟ್ಟಿನಲ್ಲಿ ಕ.ಸಾ.ಪ ವಿನೂತನ ಪ್ರಯೋಗಗಳನ್ನು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಕ.ಸಾ.ಪ ಪದಾಧಿಕಾರಿ ರಮೇಶ ಪಾಟೀಲ ಅವರನ್ನು ಸತ್ಕರಿಸಲಾಯಿತು.

ಶಂಕರ ಕ್ಯಾಸ್ತಿˌಟಿ.ಎಸ್.ವಂಟಗೂಡಿˌಅರುಣ ಕಾಂಬಳೆˌಸುಖದೇವ ಕಾಂಬಳೆˌಸಿದ್ದು ಬನಾಜˌಲತಾ ಹುದ್ದಾರˌತ್ರಿಶಲಾ ನಾಗನೂರˌಭರಮು ಪೂಜೇರಿˌಮಲ್ಲಪ್ಪ ಬಳವಾಡˌರೇಖಾ ಗುಪ್ತೆ ˌಲಕ್ಷ್ಮಣ ಜಾಯಗೊಣಿˌ ಶಿಕ್ಷಕರು, ಮಕ್ಕಳು , ಕ.ಸಾ.ಪ ಪದಾಧಿಕಾರಿಗಳು, ಗಣ್ಯರು ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿಸಿದರು.ಪ್ರೀತಿ ಹಿರೆಕೋಡಿ ನಿರೂಪಿಸಿದರು.ಎಮ್.ಎಸ್.ಬಳವಾಡ ಸ್ವಾಗತಿಸಿದರು.ತ್ರಿಶಲಾ ನಾಗನೂರ ವಂದಿಸಿದರು.

ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ 



Image Description

Post a Comment

0 Comments