*ಚಿತ್ರಕಲಾ ಪ್ರದರ್ಶನಕ್ಕೆ ಆಯ್ಕೆಯಾದ ರಾಯಬಾಗದ ನಡೋಣಿ ದಂಪತಿಗಳು:ಅಭಿನಂದನೆಗಳು*
*ರಾಯಬಾಗ:* ಕಲೆ ಮತ್ತು ಸಂಸ್ಕೃತಿ ಇಲಾಖೆ ನೇಪಾಳ ಜಿ.ಪಿ.ಕೊಯಿರಾಲಾ ಹಾಗೂ ರೇಡಾರ್ಟ್ ಮತ್ತು ಆಯ್ ಎ ಆರ್ ಎಫ್ ಇಂಡಿಯಾ ಇವರ ಸಹಯೋಗದಲ್ಲಿ ನೇಪಾಳದ ಕಟ್ಮಂಡುವಿನಲ್ಲಿ ನ.1 ರಿಂದ 4 ರ ವರೆಗೆ ನಡೆಯುವ ಚಿತ್ರಕಲಾ ಪ್ರದರ್ಶನದಲ್ಲಿ ರಾಯಬಾಗ ಪಟ್ಟಣದ ಖ್ಯಾತ ಚಿತ್ರಕಲಾ ದಂಪತಿಗಳಾದ ಡಾ.ಬಾಬುರಾವ ನಡೋಣಿ ಅವರ ಬುದ್ಧ ಶೀರ್ಷಿಕೆಯ ಕಲಾಕೃತಿ ಹಾಗೂ ಶ್ರೀಮತಿ ಆಶಾರಾಣಿ ನಡೋಣಿಯವರ "ಗರ್ಲ್ ವಿಥ್ ಪ್ಲೂಟ" ಶೀರ್ಷಿಕೆಯ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡ ಡಾ.ಬಾಬುರಾವ ನಡೋಣಿ ಅವರು ಈಗಾಗಲೇ ಅಂತರಾಷ್ಟ್ರೀಯ ಖ್ಯಾತ ಕಲಾವಿದರಾಗಿ ಹೆಸರು ಸಂಪಾದಿಸಿದ್ದಾರೆ. ಇವರ ಧರ್ಮಪತ್ನಿ ಶ್ರೀಮತಿ ಆಶಾರಾಣಿ ನಡೋಣಿ ಅವರು ಜನಮನ ಮೆಚ್ಚಿದ ಆದರ್ಶ ಶಿಕ್ಷಕಿಯಾಗಿ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ರಾಯಬಾಗ ತಾಲೂಕಿನ ಮೇಖಳಿಯ (ಆರ್ ಎಂ ಎಸ್ ಎ.) ಆದರ್ಶ ಶಾಲೆಯಲ್ಲಿ ಗುರುಮಾತೆ ಶ್ರೀಮತಿ ಆಶಾರಾಣಿ ನಡೋಣಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸೃಜನಶೀಲ ಚಿತ್ರಕಲೆಯ ಮೂಲಕ ರಾಯಬಾಗ ಹೆಸರನ್ನು ಚೆನ್ನಾಗಿ ಪ್ರಸರಣಗೊಳಿಸುವ ಮೂಲಕ ಸಪ್ತಸಾಗರದಾಚೆಗೂ ಬಾಗೆನಾಡಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ ನಡೋಣಿ ದಂಪತಿಗಳನ್ನು ತಾಲ್ಲೂಕಿನ ಮಕ್ಕಳ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು ,ಕನ್ನಡ ಪ್ರಾಧ್ಯಾಪಕರಾದ ಡಾ. ಜಯವೀರ ಎ.ಕೆ. ಅಧ್ಯಕ್ಷ ಕು.ಅಮರ ಕಾಂಬಳೆ, ಕ.ಸಾ.ಪ.ಘಟಕದ ಅಧ್ಯಕ್ಷ ಆರ್.ಎಂ.ಪಾಟೀಲ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಟಿ.ಎಸ್.ವಂಟಗೂಡಿ, ಚು.ಸಾ.ಪ.ತಾಲ್ಲೂಕು ಗೌರವಾಧ್ಯಕ್ಷ ಪ್ರೊ.ಶಿವಾನಂದ ಬೆಳಕೂಡ, ಅಧ್ಯಕ್ಷ ಶಿರೂರು ಶ್ರೀಶೈಲ ಹಾಗೂ ತಾಲ್ಲೂಕಿನ ಸಮಸ್ತ ಹಿರಿಯ ಕಿರಿಯ ಕಲಾವಿದರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments