*ನನ್ನವಳಿಗೊಂದು ಕವಿತೆ*

 ನನ್ನವಳಿಗೊಂದು ಕವಿತೆ



ಮೊದಲ ಬಾರಿ ಅಕ್ಕೂರಿನಲಿ

ನನ್ನವಳ ಕಂಡಾಗ ಮುಗ್ಧೆಯವಳು 

ಮುಗ್ದತೆಯ ಮೋಡಿಯಲ್ಲಿ ಹೂವಾಗಿ 

ನನ್ನೆದೆಯಲ್ಲಿ ಅರಳಿ ನಿಂತವಳು 


ಅವಳೂರ ಮನೆ ಹಿಂದೆ ಬಾಳೆಗಳು 

ಬಾಗಿಹವು ಅವಳು ಮಾತನಾಡುವಾಗ 

ಅವಳು ಬಿಡಿಸಿದ ರಂಗವಲ್ಲಿ ಬೆಳ್ಳಿಯಂತೆ 

ಬೆಳಗುತ್ತಿತ್ತು ಅವಳು ನಗುವಾಗ 


ನನ್ನ ಬದುಕಲಿ ಬಂದು ಮನೆ-ಮನವ 

ತುಂಬಿದವಳು ಜೊತೆಯಾಗಿ ನಡೆದವಳು 

ಅಂತರಂಗದಲ್ಲಿ ಶಿಲ್ಪ ಸೌಂದರ್ಯವನ್ನು 

ಮೀರಿಸಿದವಳು ನನ್ನ ಚೆಲುವೆಯವಳು 


ಮನದ ಮನೆಯಲ್ಲಿ ಕನಸ ಗೂಡಲ್ಲಿ 

ಎಲ್ಲೆಲ್ಲೂ ಅವಳದೇ ನೆನಪು 

ಬಯಲಸೀಮೆಯ ಬದುಕಲಿ ಬಂದು 

ಹಚ್ಚ ಹಸಿರಾದುದೇ ತಂಪು 


ಉದಂತ ಶಿವಕುಮಾರ್

ಕವಿ ಮತ್ತು ಲೇಖಕ

ಜ್ಞಾನ ಭಾರತಿ ಅಂಚೆ

ಬೆಂಗಳೂರು -560056

ಮೊ: 9739758558

Image Description

Post a Comment

0 Comments