⚫ 🍃ಕವಿತೆ🍃⚫
ರಾಜ್ಯ ಯುವ ಬರಹಗಾರರ ಒಕ್ಕೂಟ ಬೆಂಗಳೂರು ; ಜಿಲ್ಲಾ ಘಟಕ :ಬೆಳಗಾವಿ ಇವರು ಹಮ್ಮಿಕೊಂಡ ತಥಾಗತ ಗೌತಮ್ "ಬುದ್ಧರ ಕಾವ್ಯೋತ್ಸವ "ಸ್ಪರ್ಧೆಗಾಗಿ ನನ್ನ ಕವನ
🌹🌹🌹🌹🌹🌹🌹🌹
🔹🔹🔹🔹🔹🔹🔹🔹
ಕವನದ ಶೀರ್ಷಿಕೆ :-
➖➖➖➖➖➖➖➖➖➖
"ನಾನು ಹೊರಟೆ ಈಗ ಬುದ್ಧರ ಅನ್ವೇಷಣೆಯತ್ತ"
🔹🔹🔹🔹🔹🔹🔹🔹
🌷🌷🌷🌷🌷🌷🌷🌷
ನಾನು ಹೊರಟೆ ಈಗ ಬುದ್ಧರ ಅನ್ವೇಷಣೆಯತ್ತ....!
ನಾನು ಹೊರಟೆ ಈಗ ಅಂತಿಮ ಸತ್ಯದ ಶೋಧದತ್ತ....!
ನಾನು ಹೊರಟೆ ಈಗ ಮನಶ್ಯಾಂತಿಯ ಅರಸುತ್ತ...!
ನಾನು ಹೊರಟೆ ಈಗ ನವ ಕ್ರಾಂತಿಯ ನಿರ್ಮಿಸುವತ್ತ....!
ನಾನು ಅನಾದಿಕಾಲದಿಂದಲೂ ದಾರಿಯನ್ನು ಕಾಯುತ್ತಿದ್ದೇನೆ, ಧಮ್ಮ ಚಕ್ರ ಪರಿವರ್ತನೆಯ, ಅಶೋಕ ಚಕ್ರದ,
ಆ ಶಾಂತಿಯ ಸಹವಾಸದ,
ಆ ಪರಮಪೂಜ್ಯ ಬೋಧಿಸತ್ವ ತಥಾಗತ ಗೌತಮ ಬುದ್ಧನ .....!
ನಾನು ಹೊರಟೆ ವಿಜ್ಞಾನದ ಪಯಣದತ್ತ.....!
ನಾನು ಹೊರಟೆ ಶಾಂತಿ ಸ್ಥಳದ ಶೋಧದತ್ತ....!
ನಾನು ಹೊರಟೆ ಆತ್ಮದ ಉದ್ಧಾರ ಶೋಧಿಸುವತ್ತ ...! ನಾನು ಹೊರಟೆ ಆಲದ ಮರದ ಎಲೆಯ ಅನ್ವೇಷನೆಯತ್ತ....!
ನಾನು ಹೊರಟೆ ಅಷ್ಟಾಂಗ ಮಾರ್ಗದಲಿ ,ಬದುಕು ಸಾಗಿಸುವತ್ತ....!
ನಾನು ಹೊರಟೆ ಪಂಚಶೀಲದ ಆಚರಣೆಯಲ್ಲಿ ,ನನ್ನನ್ನು ನಾನು ತೊಡಗಿಸುವತ್ತ....!
ನಾನು ಹೊರಟೆ ವಿಜ್ಞಾನವಾದ ದ ನೆಲೆಯದತ್ತ ....!
ನಾನು ಹೊರಟೆ ಈಗ ತಥಾಗತ ಗೌತಮ ಬುದ್ಧರ ನೆರಳಿನ ತ್ತ....!
ನಾನು ಹೊರಟೆ ಈಗ ಧಮ್ಮದ ಅನ್ವೇಷಣೆಯತ್ತ....!
ನಾನು ಹೊರಟೆ ಮತ್ತೆ ಸಂಘದ ಶೋಧದತ್ತ....!
ನಾನು ಮತ್ತೆ ಹೊರಟೆ 10 ಪರಿಮಿತ ಆಚರಣೆಗಳತ್ತ...!
ನಾನು ಮತ್ತೆ ಹೊರಟೆ ಬುದ್ಧನನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳುವುದತ್ತ.....!
💐💐💐💐💐💐💐
ಅರ್ಜುನ ನಿಡಗುಂದೆ.
ಅಂಬೇಡ್ಕರ್ ನಗರ,
ಸದಲಗಾ.
ತಾಲೂಕ :ಚಿಕ್ಕೋಡಿ.
ಜಿಲ್ಲಾ: ಬೆಳಗಾವಿ.
👏👏🌹🌹🌹🌹🌹
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments