ಎಕ್ಸಿಕ್ಯೂಟಿವ್ ಕಾನ್‌ಸ್ಟೆಬಲ್‌ ಹುದ್ದೆ: ಅರ್ಜಿ ಆಹ್ವಾನ 

ಉಡುಪಿ, ಸೆ. 18: ಸ್ಟಾಫ್ ಸೆಲೆಕ್ಷನ್ ಕಮಿಷನ್ ಕೇಂದ್ರ  ನೇಮಕಾತಿ ಪ್ರಾಧಿಕಾರವು ದಿಲ್ಲಿ ಪೊಲೀಸ್ ಪಡೆಗಳಲ್ಲಿ ಎಕ್ಸಿಕ್ಯೂಟಿವ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 2023ರ ಜು.1ಕ್ಕೆ 21ರಿಂದ 25 ವರ್ಷ ವಯೋಮಿತಿ ಹೊಂದಿರುವ (ಇತರ ವರ್ಗಗಗಳಿಗೆ ವಯಸ್ಸಿನ ಸಡಿಲಿಕೆ ಇದೆ), ಮಾನ್ಯತೆ ಪಡೆದ ಮಂಡಳಿಯಿಂದ 10+2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹಾಗೂ ಎಲ್‌ಎಂವಿ ವಾಹನಗಳ ಚಾಲನಾ ಪರವಾನಿಗೆ ಹೊಂದಿರುವ F www.ssckkr.kar.nic.in, https://ssc. nic.in ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.


ಸೆ. 30 ನೋಂದಣಿಗೆ ಕೊನೆಯ ದಿನ, ಮಾಹಿತಿಗೆ 080- 25502520 ಸಹಾಯವಾಣಿ ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟನೆ ತಿಳಿಸಿದೆ.

Image Description

Post a Comment

0 Comments